ಮಂಗಳೂರು ವಿವಿ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ : ಆಳ್ವಾಸ್‍ಗೆ ಅವಳಿ ಪ್ರಶಸ್ತಿ

Upayuktha
0

 


ಮೂಡುಬಿದಿರೆ: ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಡಿ.14 ಮತ್ತು 15ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್  ಕಾಲೇಜು ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಪುರುಷರ ಹಾಗೂ ಮಹಿಳೆಯರ ಎರಡೂ ತಂಡಗಳು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.


ಸೆಮಿಫೈನಲ್ಸ್‍ನಲ್ಲಿ ಆಳ್ವಾಸ್ ಪುರುಷರ ತಂಡ ಉಜಿರೆಯ ಎಸ್.ಡಿ.ಎಂ. ತಂಡವನ್ನು 35-8, 35-12 ನೇರ ಸೆಟ್‍ಗಳಿಂದ ಸೋಲಿಸಿ, ಫೈನಲ್ಸ್‍ನಲ್ಲಿ ಅತಿಥೇಯ ಸೇಕ್ರೆಡ್ ಹಾರ್ಟ್ ಮಡಂತ್ಯಾರ್ ತಂಡವನ್ನು 35-11, 35-13 ಅಂಕಗಳಿಂದ ಸೋಲಿಸಿ ಸತತ 17ನೇ ಬಾರಿ ಎಂ. ಕೆ. ಅನಂತರಾಜ್ ಮೆಮೊರಿಯಲ್ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿತು. ಸೆಮಿಫೈನಲ್ಸ್‍ನಲ್ಲಿ ಆಳ್ವಾಸ್ ಮಹಿಳಾತಂಡ ಅತಿಥೇಯ ಸೇಕ್ರೆಡ್ ಹಾರ್ಟ್ ಮಡಂತ್ಯಾರ್ ತಂಡವನ್ನು 35-04, 35-06 ಅಂಕಗಳಿಂದ ಸೋಲಿಸಿ, ಫೈನಲ್ಸ್‍ನಲ್ಲಿ ಆಳ್ವಾಸ್ ಮಹಿಳಾ ತಂಡ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ತಂಡವನ್ನು 35-11, 35-08 ಅಂಕಗಳಿಂದ ಸೋಲಿಸಿ ಸತತ 16ನೇ ಬಾರಿ ಫ್ಯಾಬಿಯನ್ ಖುಲಾಸೊ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿತು.


ಪುರುಷರ ವಿಭಾಗದಲ್ಲಿ ಆಳ್ವಾಸ್‍ನ ಮಹಾದೇವಸ್ವಾಮಿ ಹಾಗೂ ಮಹಿಳಾ ವಿಭಾಗದಲ್ಲಿ ಆಳ್ವಾಸ್‍ನ ಪಲ್ಲವಿ ಉತ್ತಮ ಆಟಗಾರ ಮತ್ತು ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು. 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top