ಬೆಳ್ತಂಗಡಿ: "ಬೆಳ್ತಂಗಡಿ ತಾಲೂಕಿನ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮೂಲಭೂತ ಸೌಕರ್ಯಗಳನ್ನು ಪಡೆಯುವುದರೊಂದಿಗೆ ಮಾದರಿ ಶಿಕ್ಷಣ ಸಂಸ್ಥೆಗಳಾಗಿ ರೂಪುಗೊಳ್ಳುತ್ತಿವೆ. 8 ಕೋಟಿ ಅನುದಾನದೊಂದಿಗೆ ಮೇಲoತಬೆಟ್ಟು ಹಾಗೂ 5.5 ಕೋಟಿ ಅನುದಾನದೊಂದಿಗೆ ಪಂಜಾಲಕಟ್ಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳು ಮೇಲ್ದರ್ಜೆಗೆರಿಸಲ್ಪಟ್ಟು, ಖಾಸಗಿ ಕಾಲೇಜುಗಳಿಗೆ ಸ್ಪರ್ಧೆ ನೀಡುವಂತಿವೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು, ಅವರು ನಡ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರೂಪಾಯಿ 78 ಲಕ್ಷಗಳ ಅನುದಾನದೊಂದಿಗೆ ನಿರ್ಮಿಸಲಾದ ನೂತನ ಕೊಠಡಿಗಳ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತಾವನೆ ನೀಡಿದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನು ಒದಗಿಸುವ ಪ್ರಯತ್ನ ಮಾಡಲಾಗಿದೆ. ಬೆಳ್ತಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತ್ತೆ ಪ್ರಾರಂಭವಾದ ವಿಜ್ಞಾನ ವಿಜ್ಞಾನ ವಿಭಾಗದಲ್ಲಿ ಅನೇಕ ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದಾರೆ. ತಾಲೂಕಿನ 16 ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ವ್ಯವಸ್ಥೆ ಮಾಡಲಾಗಿದೆ. ಅರಸಿನಮಕ್ಕಿಯಂತಹ ಗ್ರಾಮೀಣ ಪ್ರದೇಶದಲ್ಲಿ ಆ ಭಾಗದ ವಿದ್ಯಾರ್ಥಿಗಳಿಗೆ ಅನುಕೂವಾಗುವಂತೆ, ಎಲ್.ಕೆ.ಜಿಯಿಂದ 12ನೇ ತರಗತಿ ವರೆಗಿನ ಉಚಿತ ಶಿಕ್ಷಣವನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮಗಳೆರಡರಲ್ಲೂ ನೀಡುವ ದೆಹಲಿ ಮಾದರಿ ಶಿಕ್ಷಣ ಸಂಸ್ಥೆಯನ್ನು ರೂಪಾಯಿ 25 ಕೋಟಿ ವೆಚ್ಚದಲ್ಲಿ ಪ್ರಾರಂಭಿಸುವ ತಯಾರಿ ನಡೆದಿದೆ. ಓಡಿಲ್ನಾಳ ಗ್ರಾಮದ ರೇಷ್ಮರೋಡ್ ನಲ್ಲಿ ಮೆರೈನ್ ಟೆಕ್ನಿಕಲ್ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲು ವಿ.ಟಿ.ಯು. ಅಕಾಡೆಮಿಕ್ ಕೌನ್ಸಿಲ್ ಒಪ್ಪಿಗೆ ಪಡೆಯಲಾಗಿದೆ. ಜಿಲ್ಲಾ ಮಟ್ಟಕ್ಕಿಂತ ಹೆಚ್ಚಿನ ಹಂತಗಳಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಯುನಿಫಾರ್ಮ್, ಪ್ರಯಾಣ ವೆಚ್ಚ ಮುಂತಾದ ವ್ಯವಸ್ಥೆ ಗಳನ್ನು ಕೈಗೊಳ್ಳಲಾಗಿದೆ. ಬೆಳ್ತಂಗಡಿಯ ಹುಣಸೆಕಟ್ಟೆಯಲ್ಲಿ ತಾಲೂಕು ಕ್ರೀಡಾಂಗಣಕ್ಕಾಗಿ 12 ಎಕ್ರೆ ಜಮೀನು ಮೀಸಲಿರಿಸಿದ್ದು ಅಲ್ಲಿ 400 ಮೀ ಟ್ರ್ಯಾಕ್, ಈಜುಕೊಳ, ಅಧಿಕಾರಿ ವರ್ಗಕ್ಕೆ ಬೇಕಾದ ವಸತಿಗೃಹ, ಯುವಕರಿಗೆ ತರಬೇತಿ, ರೆಸ್ಟೋರೆಂಟ್ ವ್ಯವಸ್ಥೆ ಗಳನ್ನು ಕಲ್ಪಿಸುವ ಯೋಜನೆ ತಯಾರಿಸಲಾಗಿದೆ" ಎಂದು ಶಾಸಕರು ಹೇಳಿದರು. ನಡ ಗ್ರಾಮದಲ್ಲೂ ಜಮೀನು ಒದಗಿಸಿ ಕೊಟ್ಟಲ್ಲಿ ಇನ್ನೊಂದು ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವ ಬಗ್ಗೆ ಭರವಸೆಯಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಗೌಡ ವಹಿಸಿದ್ದರು. ಅತಿಥಿಗಳಾಗಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆoಟ್ ಪಾಯ್ಸ್, ಶೌರ್ಯ ವಿಪತ್ತು ತಂಡದ ಯೋಜನಾಧಿಕಾರಿ ಜಯವಂತ್ ಪಟಗಾರ್, ಎಸ್ ಕೆ ಡಿ ಆರ್ ಡಿ ಪಿ ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರ, ಊರಿನ ಗಣ್ಯರಾದ ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ, ವಿಠಲ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಅಜಿತ್ ಆರಿಗ, ನಡ ಪ್ರೌಢ ಶಾಲಾ ಮುಖ್ಯಶಿಕ್ಷಕ ರಾಷ್ಟ್ರ ಪ್ರಶಸ್ತಿ ವಿಜೇತರಾದ ಯಾಕೂಬ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕಾಮಗಾರಿಗಳಿಗೆ ಅನುದಾನವನ್ನು ಒದಗಿಸಿ ಕೊಟ್ಟ ಮಾನ್ಯ ಶಾಸಕರನ್ನು, ಮೈದಾನ ಕಾಮಗಾರಿ ನಿರ್ವಹಣೆಗೆ ಸಹಕರಿಸಿದ ಜಯರಾಮ ನಲ್ಕೆಯವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ವಿಕಲಚೇತನ ವಿದ್ಯಾರ್ಥಿನಿ ಕುಮಾರಿ ಆಶಾಳನ್ನು ಮಾನ್ಯ ಶಾಸಕರು ಸನ್ಮಾನಿಸಿದರು. ಬೆಳ್ತಂಗಡಿ ಮತ್ತು ಪುಂಜಾಲಕಟ್ಟೆ ಪ್ರಥಮ ದರ್ಜೆ ಕಾಲೇಜುಗಳ ನಿವೃತ್ತ ಪ್ರಾಂಶುಪಾಲರುಗಳಾದ ಆoಟನಿ ಟಿ. ಪಿ., ಪ್ರೊ. ಗಣಪತಿ ಭಟ್ ಕುಳಮರ್ವ, ಅಳದಂಗಡಿ ಪ್ರಾಂಶುಪಾಲರಾದ ಶ್ರೀ ಸಣ್ಣಿ, ನಾವೂರ್ ಆರೋಗ್ಯ್ ಕ್ಲಿನಿಕ್ ವೈದ್ಯರಾದ ಡಾ. ಪ್ರದೀಪ್, ಗ್ರಾಮ ಪಂಚಾಯತ್ ಸದಸ್ಯರುಗಳು ಊರಿನ ಅನೇಕ ಗಣ್ಯರು, ಸಂಸ್ಥೆಯ ಹಿರಿಯ ವದ್ಯಾರ್ಥಿಗಳು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ಪ್ರಾoಶುಪಾಲರಾದ ಚಂದ್ರಶೇಖರ್ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ನೀಲಾವತಿ ತೃಪ್ತಿ, ಅಂಕಿತ ಉಷಾ, ಪ್ರಾಪ್ತಿ ಪ್ರಾರ್ಥಿಸಿದರು. ಆಂಗ್ಲ ಭಾಷಾ ಉಪನ್ಯಾಸಕ ಮೋಹನ ಗೌಡ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಲಿಲ್ಲಿ ಪಿ.ವಿ. ವಂದಿಸಿದರು. ಉಪನ್ಯಾಸಕರುಗಳಾದ ಶ್ರೀಮತಿ ವಸಂತಿ ಪಿ., ಶ್ರೀಮತಿ ಸುಕೇತ, ಶ್ರೀಮತಿ ವಿದ್ಯಾ ಸಹಕರಿಸಿದರು. ಪ್ರೌಢ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ತಂಡದ ವಿದ್ಯಾರ್ಥಿಗಳಿದ ಆಕರ್ಷಕ ಪಥಸಂಚಲನದೊಂದಿಗೆ ರೇಂಜರ್ಸ್ ವಿದ್ಯಾರ್ಥಿನಿಯರು, ಕಲಶ ಧಾರಿ ವಿದ್ಯಾರ್ಥಿನಿಯರು ಅತಿಥಿಗಳನ್ನು ಸ್ವಾಗತಿಸಿ, ಬರಮಾಡಿಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ