ಎಜೆ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ 5 ದಿನಗಳ ಸವಿಷ್ಕಾರ್ "ಅನ್ವೇಷಣ್‌ 2022

Upayuktha
0


ಮಂಗಳೂರು: ಸವಿಷ್ಕಾರ್ "ಅನ್ವೇಷಣ್‌ 2022"ರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು 3 ಡಿಸೆಂಬರ್ 2022ರಂದು ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಮಂಗಳೂರಿನಲ್ಲಿ ನೆರವೇರಿತು. ಅಶ್ವತ್ ಹೆಗಡೆ, ಸಿಇಓ ಎನ್ವಿಗ್ರೀನ್ ಬಯೋಟೆಕ್ ಲಿಮಿಟೆಡ್ ಇವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದರು. ಡಾ. ಶಾಂತರಾಮ ರೈ, ಪ್ರಾಂಶುಪಾಲರು, ಹೇಗೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಪ್ರಾಸ್ತಾವಿಕ ನುಡಿಯನ್ನು ಧರಣೀಶ್ ಹೆಗಡೆ, ರಾಷ್ಟ್ರೀಯ ಸಹ ಸಂಚಾಲಕರು ಸವಿಷ್ಕಾರ್ ನುಡಿದರು. ಶ್ರೀಪಾದ ತಂತ್ರಿ ಪೊಳಲಿ ಇವರು ವಂದಿಸಿದರು.


ಎರಡು ದಿನದ ಕಾರ್ಯಕ್ರಮದಲ್ಲಿ ಒಟ್ಟು ಐದು ಅವಧಿಗಳು ನಡೆಸಲಾಯಿತು. ಈ 5 ಅವಧಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಜಗದೀಶ್ ಶೇಖರ್ ನಾಯಕ್, ಡಾ. ದಶರಥ್‌ರಾಜ್ ಶೆಟ್ಟಿ, ಡಾ. ಅನಂತಪದ್ಮನಾಭ ಆಚಾರ್, ಮೋಹನ್ ಶಾಂತಿಗ್ರಾಮ ಆಗಮಿಸಿದರು.


ಈ ಕಾರ್ಯಕ್ರಮದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 12 ಇಂಜಿನಿಯರಿಂಗ್ ಕಾಲೇಜಿನ ಒಟ್ಟು 320 ವಿದ್ಯಾರ್ಥಿಗಳು ಭಾಗವಹಿಸಿದರು.


ಕಾರ್ಯಕ್ರಮದ ಸಮಾರೋಪ ಸಮಾರಂಭವು ಡಿಸೆಂಬರ್ 4 ಕ್ಕೆ ನಡೆಯಿತು. ಧರಣೀಶ್ ಹೆಗಡೆಯವರು ಸ್ವಾಗತ ಭಾಷಣವನ್ನು ಮಾಡಿ ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದ ವರದಿಯನ್ನು ಸಲ್ಲಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೇಶವ ಬಂಗೇರ ಅವರು ಆಗಮಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಆಂತನಿ ಪಿ.ಜೆ, ಉಪ ಪ್ರಾಂಶುಪಾಲರು, ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ವಹಿಸಿದರು, ನಿಶಾನ್ ಆಳ್ವಾ ಕಾರ್ಯಕ್ರಮವನ್ನು ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top