ಬೆಂಗಳೂರು: ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಬ್ರೈಡಲ್ ಮೇಕಪ್ ಸ್ಪರ್ಧೆಯಲ್ಲಿ ಭಾವಹಿಸಿದ ಗಾಯತ್ರಿ ಅವರಿಗೆ 2022 ಮಿಸ್ ಸ್ಟಾರ್ ಇಂಡಿಯಾ ರನ್ನರ್ ಅಪ್ ಅವಾರ್ಡ್ ನೀಡಲಾಗಿದೆ.
ಸಿ. ಹೆಚ್. ಗಾಯತ್ರಿಯವರು ತಮ್ಮ ಸೌಂದರ್ಯ, ಸೌಮ್ಯತೆ ಮತ್ತು ಸಹನೆಯಿಂದಾಗಿ ಈ ಕಿರೀಟ ಗೆಲ್ಲುವ ಮೂಲಕ ನಮ್ಮ ಊರಿಗೆ ಹೆಮ್ಮೆ ತಂದಿದ್ದಾರೆ. ಇವರು ಮೂಲತ ಕೊಪ್ಪಳ ಜಿಲ್ಲೆಯ ಕಾರಟಗಿ ಊರಿನವರು. ತಂದೆ ಸಿ ಎಚ್ ಶಿವಕುಮಾರ್ ತಾಯಿ ಶಾರದ. ಚಿಕ್ಕ ವಯಸ್ಸಿನಿಂದ ಸಂಗೀತದ ಹುಚ್ಚು. ಏನಾದ್ರೂ ಸಾಧಿಸುವ ಹಟ. ತುಳಿಯಬೇಕು ಎನ್ನುವವರ ಮುಂದೆ ಎದ್ದು ನಿಂತು ತಮ್ಮ ಗೆಲುವಿನ ಮೂಲಕ ಅವರಿಗೆ ಉತ್ತರ ನೀಡಿದ್ದಾರೆ.
ಇವರು ಸದ್ಯಕ್ಕೆ ಬೆಂಗಳೂರಿನಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಸಂಜೆ ಹೊತ್ತಲ್ಲಿ ಮಕ್ಕಳಿಗೆ ಶಾಸ್ತ್ರೀಯ ಸಂಗೀತಾ ಪಾಠ ಹೇಳಿಕೊಡುತ್ತಾರೆ. ಇವರು ಮಾಡಿದ್ದು ಫ್ಯಾಷನ್ ಡಿಸೈನಿಂಗ್. ಆದರೆ ಇವರಿಗೆ ಸಂಗೀತ ಮತ್ತು ನಟನೆಯಲ್ಲಿ ತುಂಬಾ ಆಸಕ್ತಿ. ಸರಸ್ವತಿ ಎಲ್ಲರಿಗೂ ಒಲಿಯುವುದಿಲ್ಲ, ಇವರಿಗೆ ಒಲಿದಿದ್ದಾಳೆ ಎಂದ್ರೆ ಇವರ ಅದೃಷ್ಟ ಬಾಗಿಲು ತೆರೆಯಿತು ಎಂದರ್ಥ.
ನಡೆದು ಬಂದ ದಾರಿ.
2009 ಗಂಗಾವತಿಯ ಸಾಹಿತ್ಯ ಸಮ್ಮೇಳನದಲ್ಲಿ ಹಾಡಿನಲ್ಲಿ ಪ್ರಥಮ ಸ್ಥಾನ.
2012 ಹೊಸಪೇಟೆಯಲ್ಲಿ ನಡೆದ ಉದಯ ಟಿವಿ ನಡೆಸಿಕೊಟ್ಟಿರುವ ಅಕ್ಷರಮಾಲೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
2016 TV9 ವಾಯ್ಸ್ ಆಫ್ ಬೆಂಗಳೂರು ಭಾಗವಹಿಸಿ ಗೆಲುವು.
2014 ಫ್ಯಾಷನ್ ಡಿಸೈನಿಂಗ್ 1st ರಾಂಕ್.
2018 ಧಾರವಾಡದಲ್ಲಿ ಸಂಗೀತ ಕರ್ನಾಟಕ ಕಾಲೇಜಿನಲ್ಲಿ ಪದವಿ ಪಡೆದರು.
2021 ಸಂಗೀತದಲ್ಲಿ ಮಾಸ್ಟರ್ಸ್ (PG)-ವಿಶಿಷ್ಟತೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.
ಹಾಲವರು ಸಂಗೀತ ದಿಗ್ಗಜರ ನೇರಲಲ್ಲಿ ಸಂಗೀತಾ ಅಬ್ಯಾಸ ಮಾಡಿದರು. ಕಾಲೇಜು ದಿನಗಳಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈಗ ಇವರಿಗೆ ಹಲವಾರು ವಾಹಿನಿಗಳಿಂದ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇವರಿಗೆ ಹೀಗೆ ಇನ್ನಷ್ಟು ಪ್ರಶಸ್ತಿ, ಕೀರ್ತಿ ಸಿಗಲಿ ಎಂದು ನಮ್ಮ ಆಶಯ.
-ಸರಸ್ವತಿ ವಿಶ್ವನಾಥ ಪಾಟೀಲ್, ಕಾರಟಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ