ಮಂಗಳೂರು: ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ 2022-23 ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಟ್ಟದ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾಟದಲ್ಲಿ, ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಮಹಿಳೆಯರು ಸಮಗ್ರ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ದ್ವಿತೀಯ ಬಿ.ಕಾಂನ ದಿಶಾ ಟಿ ಸಾಲಿಯಾನ್ (68 ಕೆಜಿ) ಹಾಗೂ ದಿಯಾ ಟಿ ಸಾಲಿಯಾನ್ (53 ಕೆಜಿ), ತೃತೀಯ ಬಿ. ಕಾಂನ ನಿಖಿತಾ (57 ಕೆಜಿ) ಬೆಳ್ಳಿ ಪದಕ ಗೆದ್ದುಕೊಂಡರೆ, ತೃತೀಯ ಬಿ. ಎಸ್ಸಿಯ ಸ್ಪೂರ್ತಿ (62 ಕೆಜಿ), ತೃತೀಯ ಬಿ. ಕಾಂನಪೃಥ್ವಿ (65 ಕೆಜಿ) ಹಾಗೂ ದ್ವಿತೀಯ ಬಿ.ಕಾಂ ನ ಶಿಲ್ಪಾ (72 ಕೆಜಿ) ಕಂಚಿನ ಪದವಿ ಗೆದ್ದುಕೊಂಡಿದ್ದಾರೆ.
ಪುರುಷರ ವಿಭಾಗದಲ್ಲಿಯೂ ವಿ ವಿ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಮೂರನೇ ಸ್ಥಾನ ಪಡೆದಿದ್ದಾರೆ. ತೃತೀಯ ಬಿ. ಎ ಯ ಮನೋಜ್ ಎಸ್ ಎಂ (74 ಕೆಜಿ) ಚಿನ್ನದ ಪದಕ ಪಡೆದುಕೊಂಡರೆ, ದ್ವಿತೀಯ ಬಿ. ಎ ಯ ಓಬಳಪ್ಪ (65 ಕೆಜಿ) ಬೆಳ್ಳಿಯ ಪದಕ ಪಡೆದರು. ದ್ವಿತೀಯ ಬಿ.ಕಾಂನ ಪ್ರಭಾಕರ್ ಕೆಎನ್ (65 ಕೆಜಿ), ದ್ವಿತೀಯ ಬಿ. ಎ ಯ ಜಿ ಅರವಿಂದ್ (61 ಕೆಜಿ), ತೃತೀಯ ಬಿ.ಎ ಯ ಚಂದ್ರು (70 ಕೆಜಿ), ಪ್ರಥಮ ಬಿ.ಎ ಯ ಪ್ರತೀಕ್ (92 ಕೆಜಿ) ಹಾಗೂ ಪ್ರಥಮ ಬಿ.ಎ ಯ ನಂದಕೃಷ್ಣ (97 ಕೆಜಿ) ಕಂಚಿನ ಪದಕ ಪಡೆದುಕೊಂಡರು, ಎಂದು ಕಾಲೇಜಿನ ದೈಹಿಕ ನಿರ್ದೇಶಕ ಡಾ. ಕೇಶವಮೂರ್ತಿ ತಿಳಿಸಿದ್ದಾರೆ.