"ಧರ್ಮದೈವ 2" ತುಳು ಕಿರುಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Upayuktha
0

ಹುಬ್ಬಳ್ಳಿ: ಕರ್ನಾಟಕ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ 2022 ರಲ್ಲಿ ಯುವ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಇವರು ನಿರ್ದೇಶಿಸಿದ "ಧರ್ಮದೈವ 2" ತುಳು ಕಿರುಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ'ಯು ಸಿಕ್ಕಿರುತ್ತದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿ "ಧರ್ಮ ದೈವ 2" ಕಿರು ಚಿತ್ರ ನಿರ್ಮಾಪಕರಿಗೆ, ನಿರ್ದೇಶಕರಿಗೆ, ತಂತ್ರಜ್ಞರಿಗೆ, ಕಲಾವಿದರಿಗೆ ಬಳಗದ ಪರವಾಗಿ ಅಭಿನಂದನೆ ತಿಳಿಸಿದರು. ಈ ಪ್ರಶಸ್ತಿ ತುಳು ನಾಡು ನುಡಿ ಸಂಸ್ಕೃತಿ ಆರಾಧನೆಗೆ ಸಂದ ದೊಡ್ಡ ಗೌರವ.


ಇವರೇ ನಿರ್ದೇಶಿಸಿದ "ಆಕೆ ಮೋಹಿನಿ" ಕನ್ನಡ ಕಿರುಚಿತ್ರಕ್ಕೆ BEST HORROR ಪ್ರಶಸ್ತಿಯೂ ಸಂದಿರುತ್ತದೆ. 2022ರಲ್ಲಿ "ಧರ್ಮದೈವ 1,"ಧರ್ಮದೈವ 2" ಮತ್ತು "ಆಕೆ ಮೋಹಿನಿ" ಈ ಮೂರು ಕಿರುಚಿತ್ರಗಳಿಗೆ ನಿರ್ದೇಶನ ನೀಡಿದ ಹಿರಿಮೆ ನಿತಿನ್ ರೈ ಕುಕ್ಕುವಳ್ಳಿ ಹಾಗೂ ಚಿತ್ರ ತಂಡಗಳ ನಿರ್ಮಾಪಕರಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ ಸಲ್ಲುತ್ತದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top