ಪ್ರಥಮ ಚಿಕಿತ್ಸೆಯೇ ಕೊನೆಯ ಚಿಕಿತ್ಸೆಯಾಗಬಾರದು: ಶಾಂತರಾಮ್ ಶೆಟ್ಟಿ

Upayuktha
0

ಮಂಗಳೂರು: ನಮ್ಮ ಸಂಸ್ಕೃತಿಯಲ್ಲಿಯೇ ಪ್ರಥಮ ಚಿಕಿತ್ಸೆಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಆರೋಗ್ಯದ ತುರ್ತು ಸಂದರ್ಭಗಳಲ್ಲಿ ಜಾಣ್ಮೆಯಿಂದ ಪ್ರಥಮ ಚಿಕಿತ್ಸೆಯನ್ನು ನೀಡಿದರೆ ಅಮೂಲ್ಯ ಜೀವ ಉಳಿಸಬಹುದು. ಆದರೆ ಎಚ್ಚರ ತಪ್ಪಿದರೆ ನಮ್ಮ ಪ್ರಥಮ ಚಿಕಿತ್ಸೆಯೇ ಕೊನೆಯ ಚಿಕಿತ್ಸೆಯಾಗಬಹುದು, ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾಧ್ಯಕ್ಷ ಶಾಂತರಾಮ್ ಶೆಟ್ಟಿ, ಹೇಳಿದರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ವತಿಯಿಂದ ಆಯೋಜಿಸಲಾಗಿದ್ದ ಪ್ರಥಮ ಚಿಕಿತ್ಸಾ ವೃತ್ತಿಪರ ಸರ್ಟಿಫಿಕೇಟ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಥಮ ಚಿಕಿತ್ಸೆ ತಿಳಿದುಕೊಂಡಿರುವುದು ಇವತ್ತಿನ ಅಗತ್ಯತೆ. ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದವರು ಮತ್ತಷ್ಟು ಜನರಿಗೆ ಕಲಿಸುವಂತಾಗಲಿ, ಎಂದು ಆಶಿಸಿದರು.


ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ.ಯ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ, ಅಪಘಾತಗಳು ಕೇಳಿ ಸಂಭವಿಸುವುದಿಲ್ಲ. ಪ್ರಥಮ ಚಿಕಿತ್ಸಾ ವಿಧಾನ ತಿಳಿದಿದ್ದರೆ ಗಾಯಗೊಂಡಾಗ, ಸೂಕ್ತ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವ ಪುಣ್ಯದ ಕೆಲಸ ಮಾಡಬಹುದು, ಎಂದರು. ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ಯುವ ರೆಡ್ ಕ್ರಾಸ್ ನ ಎಲ್ಲಾ ಕಾರ್ಯಕ್ರಮಗಳಿಗೂ ಕಾಲೇಜಿನ ಬೆಂಬಲ ಸದಾ ಇರುತ್ತದೆ. ಪ್ರಥಮ ಚಿಕಿತ್ಸಾ ತರಬೇತಿ ಪಡೆದು ಸಮಾಜಕ್ಕೆ ಕೊಡುಗೆ ನೀಡಿ, ಎಂದು ಸಲಹೆ ನೀಡಿದರು.


ಜಿಲ್ಲಾ ಯುವ ರೆಡ್‌ ಕ್ರಾಸ್‌ ನಿರ್ದೇಶಕ ಸಚೇತ್ ಸುವರ್ಣ ಪ್ರಥಮ ಚಿಕಿತ್ಸೆಯ ವಿಧಾನ, ಬಳಸಬೇಕಾದ ರೀತಿ ಇವುಗಳ ಕುರಿತು ತರಬೇತಿ ನೀಡಿದರು.


ದ. ಕ ಜಿಲ್ಲಾ ಐ.ಆರ್.ಸಿ.ಎಸ್ ಪ್ರಥಮ ಚಿಕಿತ್ಸೆ ಉಪಸಮಿತಿಯ ನಿರ್ದೇಶಕ ಡಾ. ಸಚ್ಚಿದಾನಂದ ರೈ,  ರೆಡ್ ಕ್ರಾಸ್ ಆಡಳಿತ ಸಮಿತಿ ನಿರ್ದೇಶಕ ಪಿ. ಬಿ ಹರೀಶ್ ರೈ, ಯೇನಪೊಯ ವಿವಿ ಯ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ನಿತ್ಯಶ್ರೀ, ಜಿಲ್ಲಾ ರೆಡ್ ಕ್ರಾಸ್ ನ ಖಜಾಂಜಿ ಮೋಹನ್ ಕೆ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು. ಮಂಗಳೂರು ವಿವಿಯ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ಸ್ವಾಗತಿಸಿದರು ಕಾಲೇಜಿನ ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ಕುಮಾರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top