ರಾಜ್ಯ ಮಟ್ಟದ ವೇಟ್‌ ಲಿಫ್ಟಿಂಗ್‌ ಸ್ಪರ್ಧೆ: ಆಳ್ವಾಸ್‌ ಚಾಂಪಿಯನ್‌

Chandrashekhara Kulamarva
0

ಉಜಿರೆ: ಶ್ರೀ ಧ.ಮಂ. ಕಾಲೇಜು ಮತ್ತು ಕರ್ನಾಟಕ ರಾಜ್ಯ ವೇಟ್‌ ಲಿಫ್ಟಿರ್ಸ್ ಅಸೋಸಿಯೇಶನ್‌ ವತಿಯಿಂದ ಮೂರು ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯ ವೇಟ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ 2022ರಲ್ಲಿ ಮೂಡುಬಿದ್ರೆಯ ಆಳ್ವಾಸ್‌ ಕಾಲೇಜ್‌ ಎಲ್ಲಾ ವಿಭಾಗದಲ್ಲಿ ಅತೀ ಹೆಚ್ಚು ಪ್ರಶಸ್ತಿಯನ್ನು ಪಡೆದುಕೊಂಡು ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಉಜಿರೆಯ ಶ್ರೀ.ಧ.ಮಂ. ಕಾಲೇಜು ಎರಡನೇ ಸ್ಥಾನ ಪಡೆದುಕೊಂಡಿತು. ನ. 27ರಿಂದ ನ.29ರ ವರೆಗೆ ನಡೆದ ಈ ಸ್ಪರ್ಧೆಯಲ್ಲಿ ಒಟ್ಟು 340 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.‌ ಡಿ. ಎಂ . ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಎನ್‌. ಉದಯಚಂದ್ರ ವಿಜೇತರಿಗೆ ಪದಕ ಹಸ್ತಾಂತರಿಸಿದರು. ಈ ಸಂದರ್ಭಲ್ಲಿ ಕಾಲೇಜಿನ ಆಡಳಿತ ಮಂಡಳಿ ಮುಖ್ಯಸ್ಥರು, ತರಬೇತುದಾರರು, ಸ್ಪರ್ಧಾಳುಗಳು ಹಾಜರಿದ್ದರು.


10 ವಿವಿಧ ವಿಭಾಗದಲ್ಲಿ ಸೀನಿಯರ್‌, ಜ್ಯೂನಿಯರ್‌ ಹಾಗೂ ಮಹಿಳಾ ಮತ್ತು ಪುರುಷ ವಿಭಾಗದಲ್ಲಿ 45, 49, 55, 59, 64, 71, 76, 81, 87, 87ಕ್ಕಿಂತ ಅಧಿಕ, ವಿಭಾಗದಲ್ಲಿ ಮಹಿಳಾ ಸ್ಪರ್ಧಾರ್ಥಿಗಳು ಹಾಗೂ ಇವುಗಳನ್ನೋಳಗೊಂಡಂತೆ 89, 96, 102, 102ಕ್ಕಿಂತ ಅಧಿಕ ಕೆಜಿ ವಿಭಾಗದಲ್ಲಿ ಪುರುಷರಿಗೆ ಸ್ಪರ್ಧೆಗಳನ್ನು ನಡೆಸಲಾಗಿತ್ತು.


ಜೂನಿಯರ್‌ ವುಮೆನ್‌ ವಿಭಾಗದಲ್ಲಿ ಮೂಡುಬಿದ್ರೆ ಆಳ್ವಾಸ್‌ ಕಾಲೇಜಿಗೆ 7 ಪ್ರಶಸ್ತಿಗಳು ಎಸ್‌.ಡಿ.ಎಂ. ಸ್ಪೋರ್ಟ್ಸ್ ಕ್ಲಬ್‌ ಗೆ 6 ಪ್ರಶಸ್ತಿಗಳು ಡೈಸ್‌ ಬೆಂಗಳೂರಿಗೆ 5 ಪ್ರಶಸ್ತಿ, ಡೈಸ್‌ ಬೆಳಗಾವಿಗೆ 3 ಪ್ರಶಸ್ತಿ, ಡಿ.ಸಿ.ಸಿ. ಮಂಗಳೂರಿಗೆ 3 ಪ್ರಶಸ್ತಿ ಸೆಂಟ್‌ ಫಿಲೋಮಿನಾಗೆ 2 ಪ್ರಶಸ್ತಿ ಶ್ರೀಸಾಯಿ ಜಿಮ್‌ ದಾವಣಗೆರೆ 1 ಪ್ರಶಸ್ತಿ ಲಭಿಸಿದೆ.


ಸೀನಿಯರ್‌ ವುಮೆನ್‌ ವಿಭಾಗದಲ್ಲಿ ಆಳ್ವಾಸ್‌ ಕಾಲೇಜಿಗೆ 9 ಪ್ರಶಸ್ತಿಗಳು ಎಸ್‌.ಡಿ.ಎಂ. ಸ್ಪೋರ್ಟ್ಸ್ ಕ್ಲಬ್‌ ಗೆ 9 ಪ್ರಶಸ್ತಿಗಳು, ಡಿ.ಸಿ.ಸಿ. ಮಂಗಳೂರಿಗೆ 3 ಪ್ರಶಸ್ತಿ, ಸಂಜೀವಿನಿ ಶೆಟ್ಟಿ ಸ್ಪೋರ್ಟ್ಸ್ ಕ್ಲಬ್ ಗೆ 2, ಡೈಸ್‌ ಬೆಂಗಳೂರು, ಡೈಸ್‌ ಬೆಳಗಾವಿಗೆ, ಪ್ರಶಸ್ತಿ, ಸೆಂಟ್‌ ಫಿಲೋಮಿನಾ, ಶ್ರೀ ಸಾಯಿ ಬೆಂಗಳೂರು ಹಾಗೂ ಮಂಗಳಾ ತ್ರೋವರ್ಸ್ ಅಕಾಡೆಮಿಗೆ ತಲಾ 1 ಪ್ರಶಸ್ತಿ ಲಭಿಸಿದೆ.


ಯುಥ್‌ ವುಮೆನ್ ವಿಭಾಗದಲ್ಲಿ ಆಳ್ವಾಸ್‌ ಕಾಲೇಜಿಗೆ‌ 7, ಡಿ.ಸಿ.ಸಿ. ಮಂಗಳೂರಿಗೆ 5, ಮಂಗಳಾ ತ್ರೋವರ್ಸ್ ಅಕಾಡೆಮಿ 3, ಸೆಂಟ್‌ ಫಿಲೋಮಿನಾ ಪುತ್ತೂರು, ಸುಧೀರ್‌ ಫಿಟ್ನೆಸ್‌ ಕ್ಲಬ್,ಆಳ್ವಾಸ್‌ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ , ಎಸ್‌ ಡಿಎಂ ಕಾಲೇಜು 2 ಪ್ರಶಸ್ತಿಯನ್ನು, ಡಿ.ವೈ.ಇ.ಎಸ್‌ ಬೆಂಗಳೂರು ಹಾಗೂ ಬೆಳಗಾವಿ, ಐರನ್‌ ಡೆನ್ ಮಂಗಳೂರು ಕಾಲೇಜುಗಳು ತಲಾ 1 ಪ್ರಶಸ್ತಿ ಪಡೆದಿವೆ.


ಯುಥ್‌ ಮೆನ್‌ ವಿಭಾಗದಲ್ಲಿ ಎಸ್‌.ಡಿ.ಎಂ. ಸ್ಪೋರ್ಟ್ಸ್ ಕ್ಲಬ್‌ ಗೆ 9, ಆಳ್ವಾಸ್‌ ಕಾಲೇಜಿಗೆ‌ 4, ಸಂಜೀವಿನಿ ಶೇಟ್ಟಿ ಸ್ಪೋರ್ಟ್ಸ್ ಕ್ಲಬ್ ಗೆ 3, ಸುಧೀರ್‌ ಫಿಟ್ನೆಸ್‌ ಕ್ಲಬ್, ಮಂಗಳಾ ತ್ರೋವರ್ಸ್ ಅಕಾಡೆಮಿ, ಜೈನ್‌ ಜೂನಿಯರ್‌ ಕಾಲೇಜು ಮೂಡುಬಿದ್ರೆ ತಲಾ 2, ಎಸ್. ಐ. ಸಿ.ಎಂ ಬೆಂಗಳೂರು, ಶ್ರೀ ಸಾಯಿ ಜಿಮ್‌ ದಾವಣಗೆರೆ, ಡೈಸ್‌ ಬೆಳಗಾವಿ, ಸೆಂಟ್‌ ಫಿಲೋಮಿನಾ ಪುತ್ತೂರು ಕಾಲೇಜು, ಐರನ್‌ ಡೆನ್ ಮಂಗಳೂರು, ಡಿ.ಸಿ.ಸಿ. ಮಂಗಳೂರು ಹಾಗು ಕೆ.ವಿ.ಜಿ. ಸುಳ್ಯ ತಲಾ 1 ಪ್ತಶಸ್ತಿ ಪಡೆದುಕೊಂಡಿವೆ.


ಸೀನಿಯರ್‌ ಮೆನ್‌ ವಿಭಾಗದಲ್ಲಿ ಆಳ್ವಾಸ್‌ ಕಾಲೇಜಿಗೆ‌ 10, ಎಸ್‌.ಡಿ.ಎಂ. ಸ್ಪೋರ್ಟ್ಸ್ ಕ್ಲಬ್‌ ಗೆ 7, ಆಳ್ವಾಸ್‌ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ ಗೆ 5, ಸಿ.ಎಂ.ಸಿ ದಾವಣಗೆರೆ ಜಿಮ್‌ 3, ಎಸ್‌.ಐ.ಸಿ.ಎಂ ಬೆಂಗಳೂರು, ಸುಧೀರ್‌ ಫಿಟ್ನೆಸ್‌ ಕ್ಲಬ್, ಸಂಜೀವಿನಿ ಶೆಟ್ಟಿ ಸ್ಪೋರ್ಟ್ಸ್ ಕ್ಲಬ್, ಡೈಸ್‌ ಬೆಂಗಳೂರು, ಸೆಂಟ್‌ ಫಿಲೋಮಿನಾ ಪುತ್ತೂರು 1 ಪ್ರಶಸ್ತಿ ಪಡೆದಿದ್ದಾರೆ.


ಎಲ್ಲಾ ವಿಭಾಗದಲ್ಲಿ ಉತ್ಯುತ್ತಮ ಸಾಧನೆ ಮಾಡಿದ ಕೆಲವರನ್ನು ಗುರುತಿಸಲಾಗಿದ್ದು, 45 ಕೆಜಿ ವಿಭಾಗದಲ್ಲಿ ಮೂಡಬಿದ್ರೆ ಆಳ್ವಾಸ್‌ ಕಾಲೇಜಿನ ಶ್ರಾವ್ಯಾ, 49 ಕೆಜಿ ವಿಭಾಗದಲ್ಲಿ ಎಸ್‌.ಡಿ.ಎಂ. ಸ್ಪೋರ್ಟ್ಸ್ ಕ್ಲಬ್‌ನ ಜೀವಿತಾ, 45 ಕೆಜಿ ವಿಭಾಗದಲ್ಲಿ ಎಸ್‌.ಡಿ.ಎಂ. ಸ್ಪೋರ್ಟ್ಸ್ ಕ್ಲಬ್ ನ ತುಷ್ಮಿತಾ, 73 ಕೆಜಿ ವಿಭಾಗದಲ್ಲಿ ಸುಧೀರ್‌ ಫಿಟ್‌ನೆಸ್‌ ನ ಸಂಕೇತ್‌ ಎಸ್‌., 67 ಕೆಜಿ ವಿಭಾಗದಲ್ಲಿ ಎಸ್‌.ಡಿ.ಎಂ. ಸ್ಪೋರ್ಟ್ಸ್ ಕ್ಲಬ್ ನ ತಿಪ್ಪಣ್ಣ ಎಸ್‌. ಎಲ್‌, 67 ಕೆಜಿ ವಿಭಾಗದಲ್ಲಿ ಆಳ್ವಾಸ್‌ ಏಕಲವ್ಯದ ದೇವರಾಜ್‌ ಕೆ.ಟಿ. ಸಾಧಕರುಗಳಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
To Top