ಮಂಗಳೂರು ಜೋಯಾಲುಕ್ಕಾಸ್ ನವೀಕೃತ ಆಭರಣ ಮಳಿಗೆ ಉದ್ಘಾಟನೆ

Upayuktha
0

ಮಂಗಳೂರು: ವಿಶ್ವದ ಅಚ್ಚುಮೆಚ್ಚಿನ ಆಭರಣ ಬ್ರ್ಯಾಂಡ್, ಜೋಯಾಲುಕ್ಕಾಸ್, ನವೀಕರಣದ ನಂತರ ಗ್ರಾಹಕರಿಗಾಗಿ 'ಜೋಯಾಲುಕ್ಕಾಸ್ ಮಂಗಳೂರು ಮಳಿಗೆ'ಯನ್ನು ಗ್ರಾಹಕರಿಗೆ ತೆರೆದಿದೆ.


ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ನೂತನ ಮಳಿಗೆ ಉದ್ಘಾಟಿಸಿದರು. ಆಭರಣ ಮಳಿಗೆಯ ಮರು ಪ್ರಾರಂಭದ ಸಂಭ್ರಮಾಚರಣೆಗಾಗಿ ಎಲ್ಲ ಆಭರಣ ಪ್ರಿಯರಿಗೆ ಅತ್ಯಾಕರ್ಷಕ ಉದ್ಘಾಟನಾ ಕೊಡುಗೆಗಳು ಲಭ್ಯ. ಈ `ಸಿಗ್ನೇಚರ್ ಜೋಯಾಲುಕ್ಕಾಸ್'ನ ವಿಶ್ವ ದರ್ಜೆಯ ವಿನ್ಯಾಸದಲ್ಲಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಮಳಿಗೆಯು ಪ್ರೀಮಿಯಂ ಸೌಲಭ್ಯ ಮತ್ತು ಸೌಕರ್ಯಗಳನ್ನು ಹೊಂದಿದೆ ಮತ್ತು ಆಭರಣ ಪ್ರಿಯರಿಗೆ ಸಂತಸಕರ ಮತ್ತು ಉತ್ಕೃಷ್ಟ ಖರೀದಿ ಅನುಭವವನ್ನು ನೀಡಲು ಸಜ್ಜಾಗಿದೆ.


ಮಂಗಳೂರು ನಿವಾಸಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ಅನುಕೂಲಕ್ಕಾಗಿ ಸಾಕಷ್ಟು ಶಾಪಿಂಗ್ ಜೊತೆಗೆ ವಿಶಾಲ ಪಾಕಿರ್ಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಘಾಟನೆಯ ಅಂಗವಾಗಿ ಉತ್ತೇಜಕ ಉದ್ಘಾಟನಾ ಕೊಡುಗೆಗಳೂ, ವಜ್ರಾಭರಣಗಳ ಮೇಲೆ ಶೇ.25ರ ರಿಯಾಯಿತಿ ಲಭ್ಯವಿದೆ.


ಡಿಸೆಂಬರ್ 10 ರಿಂದ ಡಿಸೆಂಬರ್ 12, 2022ರ ವರೆಗೆ ಪ್ರತಿ ವಜ್ರಾಭರಣ ಖರೀದಿಯೊಂದಿಗೆ ಮತ್ತು ಖಚಿತವಾದ ಕೊಡುಗೆ ಕೂಡ ಲಭ್ಯ. ಪ್ರಪಂಚದಾದ್ಯಂತದ ಸೊಗಸಾದ ಸಂಗ್ರಹಗಳು ಲಭ್ಯವಿದ್ದು, ಗ್ರಾಹಕರು ಸರಿಸಾಟಿ ಇಲ್ಲದ ಆಭರಣ ಶಾಪಿಂಗ್ ಅನುಭವ ಪಡೆಯಬಹುದಾಗಿದೆ.


ಶೋರೂಂ ಮರುಪ್ರಾರಂಭದ ಕುರಿತು ಜೋಯಾಲುಕ್ಕಾಸ್ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಜಾಯ್ ಅಲುಕ್ಕಾಸ್ ಮಾತನಾಡಿ, "ಸರಿಸಾಟಿಯಿಲ್ಲದ ಆಭರಣ ಶಾಪಿಂಗ್ ಅನುಭವವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಮತ್ತು ಮಂಗಳೂರಿನ ನಿವಾಸಿಗಳು ಜೋಯಾಲುಕ್ಕಾಸ್‍ನಲ್ಲಿ ಇದನ್ನು ಖಚಿತಪಡಿಸಿಕೊಳ್ಳಬಹುದು. ಅವರ ಪ್ರತಿಯೊಂದು ಅಗತ್ಯವನ್ನು ಪೂರೈಸಲು ಅತ್ಯುತ್ತಮ ಮತ್ತು ವಿಶಾಲವಾದ ಆಭರಣಗಳನ್ನು ನೀಡಲು ನಾವು ಗುರಿ ಹೊಂದಿದ್ದೇವೆ. ನಮ್ಮ ಆಭರಣ ಪ್ರಿಯರಿಗೆ ಇಲ್ಲಿ ಪ್ರಿಮಿಯಂ ಮತ್ತು ತಡೆರಹಿತ ಖರೀದಿ ಅನುಭವವನ್ನು ನೀಡಲು ತಂಡ ಉತ್ಸುಕವಾಗಿದೆ" ಎಂದು ಹೇಳಿದರು.


ನಮ್ಮ ಸುಂದರ ವಾತಾವರಣ, ವ್ಯಾಪಕ ಶ್ರೇಣಿಯ ಸಂಗ್ರಹಗಳು ಮತ್ತು ಉನ್ನತ ಗ್ರಾಹಕಸೇವೆ. ಹೆಚ್ಚುವರಿಯಾಗಿ, ನಾವು ಉತ್ತೇಜಕರೂಪದಲ್ಲಿ ವಿಶೇಷ ಆಫರ್ ಮತ್ತು ಉಚಿತ ಉಡುಗೊರೆಗಳನ್ನು ಹೊಂದಿದ್ದೇವೆ, ನಿಮ್ಮ ಸಂತೋಷವನ್ನು ದ್ವಿಗುಣಗೊಳಿಸುತ್ತೇವೆ ಎಂದು ಬಣ್ಣಿಸಿದರು.


ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ದೇಶದ ಪ್ರಮುಖ ಆಭರಣ ಬ್ರಾಂಡ್ ಆಗಿರುವ ಜೋಯಲುಕ್ಕಾಸ್ ನಗರದಲ್ಲಿ ವಿಶಾಲ ಹಾಗೂ ವಿಸ್ತೃತ, ಚಿನ್ನ, ಬೆಳ್ಳಿ ಹಾಗೂ ವಜ್ರದ ಮಳಿಗೆಯನ್ನು ಆರಂಭಿಸಿದ್ದು, ಕರಾವಳಿ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಮಾಜಿ ಶಾಸಕ ಮೊಯ್ದೀನ್ ಬಾವಾ, ಚಿತ್ರನಟಿ ಶಿವಾನಿ ರೈ, ನಟ ಸ್ವರಾಜ್ ಶೆಟ್ಟಿ, ಜೋಯಲುಕ್ಕಾಸ್ ರೀಟೇಲ್ ವ್ಯವಸ್ಥಾಪಕ ರಾಜೇಶ್ ಕೃಷ್ಣನ್, ಪ್ರಾದೇಶಿಕ ವ್ಯವಸ್ಥಾಪಕ ಜಿಗ್ನೇಶ್, ಮಾರುಕಟ್ಟೆ ಇಭಾಗದ ಸಹಾಯಕ ವ್ಯವಸ್ಥಾಪಕ ಸಾಜು ಪಾಲ್, ಶಾಖಾ ವ್ಯವಸ್ಥಾಪಕ ಹರೀಶ್ ಪಿ.ಎಸ್, ಅನಿಲ್ ದಾಸ್, ಪೂಜಾ ಪೈ, ಸೊನಾಲಿ ಮೊಂತೆರೊ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top