ಈಗಾಲೇ ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಚುನಾವಣಾ ಕಾರ್ಯ ಮುಗಿದಿದ್ದು ಚುನಾವಣೇೂತ್ತರ ಸಮೀಕ್ಷೆ ಹೊರ ಬಿದ್ದಿದು ಗುಜರಾತಿನಲ್ಲಿ ಬಿಜೆಪಿ ಗದ್ದುಗೆ ಹಿಡಿಯಬಹುದು ಆದರೆ ಹಿಮಾಚಲ ಪ್ರದೇಶದಲ್ಲಿ ನೇರಾನೇರ ಹಣಾಹಣಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕಾಣಬಹುದು ಅನ್ನುವ ಸಮೀಕ್ಷಾ ವರದಿ ಹೊರ ಬಿದ್ದಿದೆ.
ಈ ಸಮೀಕ್ಷೆಯಿಂದ ಬಿಜೆಪಿಗರು ಹಿರಿ ಹಿರಿ ಹಿಗ್ಗುವ ಯಾವುದೆ ಪರಿಸ್ಥಿತಿ ಖಂಡಿತವಾಗಿಯೂ ಇಲ್ಲ ಅನ್ನುವುದು ಈ ಎರಡು ರಾಜ್ಯಗಳ ಚುನಾವಣೇೂತ್ತರ ಫಲಿತಾಂಶದಿಂದ ಸ್ವಷ್ಟವಾಗಿರುವುದಂತೂ ನೂರಕ್ಕೆ ನೂರು ಸತ್ಯ. ಈ ಸಮೀಕ್ಷೆಯ ವರದಿಯ ಮೇಲೆ ಮುಂದಿನ ಸ್ಥಿತಿ ಗತಿಯ ಬಗ್ಗೆ ವಿಶ್ಲೇಷಣೆ ಮಾಡುವುದೇ ನನ್ನ ಉದ್ದೇಶ.
ಸಮೀಕ್ಷೆಯ ವರದಿಯ ಪ್ರಕಾರ ಗುಜರಾತಿನಲ್ಲಿ ಬಿಜೆಪಿ ಸ್ವಷ್ಟ ಬಹುಮತದೊಂದಿಗೆ ಗದ್ದುಗೆ ಹಿಡಿಯುವುದು ಖಚಿತ.ಆದರೆ ಇಲ್ಲಿ ನಾವು ಪರಿಗಣಿಸ ಬೇಕಾದದ್ದು ಈ ಫಲಿತಾಂಶ ನಿಜಕ್ಕೂ ಬಿಜೆಪಿಯ ಗೆಲುವೇ ಅಥವಾ ಮೇೂದಿಯವರ ವಯಕ್ತಿಕ ವಚ೯ಸ್ಸು ಮಾತ್ರವಲ್ಲ ಅವರದ್ದೆ ನೆಲವಾದ ಕಾರಣ ಈ ಹೊಮ್ ಗ್ರೌಂಡ್ ಪಿಚ್ಚಿನಲ್ಲಿ ದೇಶದ ಪ್ರಧಾನಿ ಮೇಾದಿಯವರಿಗೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು. ಮಾತ್ರವಲ್ಲ ಇದು ಅವರ ಗೌರವ ಮಯಾ೯ದೆಯ ಪ್ರಶ್ನೆ. ಅಂದರೆ ಈ ಗೆಲುವು ಆಡಳಿತ ರೂಢ ಬಿಜೆಪಿಯ ಗೆಲುವಲ್ಲ ಅನ್ನುವುದು ಅಷ್ಟೇ ಸ್ವಷ್ಟ.ಹಾಗಾಗಿ ಮೇೂದೀಜಿ ಮತ್ತು ಅಮಿತ್ ಶಾ ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆ ಎರೆದ ಕಾರಣ ಬಿಜೆಪಿಗೆ ಗುಜರಾತಿನಲ್ಲಿ ವಿಜಯದ ಮಾಲೆ ಪ್ರಾಪ್ತವಾಗಬೇಕು ಅನ್ನುವುದು ಗುಜರಾತ್‌ನ ಸಾಮಾನ್ಯ ಮತದಾರರ ಅಭಿಪ್ರಾಯವೂ ಹೌದು. ಆದರೆ ಬಿಜೆಪಿಯ ಕಾರ್ಯಕರ್ತ ಬಿಜೆಪಿಯ ಪರವಾಗಿ ಮತದಾರರು ಶಾಶ್ವತವಾಗಿ ನಿಂತಿದ್ದಾರೆ ಎಂದು ನಂಬಿದರೆ ಇದಕ್ಕಿಂತ ಮೂರ್ಖತನ ಬೇರೊಂದಿಲ್ಲ.ಈ ಮಾತುಗಳನ್ನು ಇನ್ನೂ ಸ್ವಷ್ಟೀಕರಿಸ ಬೇಕಾದರೆ ನಾವು ತೆಗೆದು ಕೊಳ್ಳ ಬೇಕಾದ ಇನ್ನೊಂದು ಸಮೀಕ್ಷಾ ವರದಿ ಹಿಮಾಚಲ ಪ್ರದೇಶದ್ದು.
ಹಿಮಾಚಲದಲ್ಲಿ ಆಡಳಿತ ರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾನೇರ ಸೆಣಸಾಟವಿದೆ ಅನ್ನುವುದು ಸಮೀಕ್ಷೆಯ ಉತ್ತರ.
ಹಾಗಾದರೆ ಬರೇ ಬಿಜೆಪಿಯ ಸಾಧನೆ ಒಂದೇ ಮಾನ ದಂಡವಾಗಿದ್ದರೆ ಗುಜರಾತಿನ ಫಲಿತಾಂಶ ಹಿಮಾಚಲದಲ್ಲೂ ಪ್ರತಿಫಲಿಸ ಬೇಕಿತ್ತು. ಅಂದರೆ ಇಲ್ಲಿ ಆಡಳಿತ ವಿರೇೂಧಿ ಅಲೆ ಸ್ವಷ್ಟವಾಗಿರುವ ಕಾರಣ ಕಾಂಗ್ರೆಸ್ ಮತ್ತೆ ತಲೆ ಎತ್ತಿ ನಿಲ್ಲವ ಸ್ಥಿತಿ ಬಂದಿದೆ.
ಈ ಎರಡು ಫಲಿತಾಂಶದ ಜೊತೆಗೆ ದೆಹಲಿಯ ಸ್ಥಳೀಯ ಚುನಾವಣೆಯಲ್ಲಿ ಕೂಡಾ ಬಿಜೆಪಿಗೆ ಮುಖ ಭಂಗವಾಗುವ ಸಮೀಕ್ಷೆಯ ವರದಿ ಬಂದಿದೆ. ಅಂತೂ ಒಟ್ಟಿನಲ್ಲಿ ಬಿಜೆಪಿ ತನ್ನ ಆಡಳಿತದ ವೈಖರಿ ಯಿಂದ ಚುನಾವಣೆಯಲ್ಲಿ ಗೆದ್ದು ಬರಲು ಸಾಧ್ಯವಿಲ್ಲ ಬದಲಾಗಿ ಹಿಂದುತ್ವ ರಾಷ್ಟ್ರೀಯ ವಾದ ಮೇೂದಿ ಹೆಸರಿನಲ್ಲಿಯೇ ಚುನಾವಣೆ ಎದುರಿಸಿ ಕಾಂಗ್ರೆಸ್ ಮತ್ತು ಸ್ಥಳೀಯ ಪಕ್ಷಗಳನ್ನು ಎದುರಿಸ ಬೇಕಾಗಿದೆ ಅನ್ನುವುದು ಸ್ವಷ್ಟ ಸಂದೇಶ ಈ ಚುನಾವಣಾ ಸಮೀಕ್ಷೆಯ ಒಟ್ಟಾರೆ ಫಲಿತಾಂಶ.
ಬಿಜೆಪಿಗೆ ಮುಂದಿನ ಗುರಿ ಕರ್ನಾಟಕ. ಆದರೆ ಇಲ್ಲಿ ಕೂಡಾ ಬಿಜೆಪಿಗೆ ಆಡಳಿತದ ಸಾಧನೆಯೊಂದೆ ಗೆಲುವು ತಂದುಕೊಡ ಬಹುದು ಅನ್ನುವ ವಿಶ್ವಾಸ ಸ್ವತ: ಬಿಜೆಪಿ ನಾಯಕರಿಗೆ ಇಲ್ಲ. ಏನಿದ್ದರೂ ಮೇೂದಿಜಿವಯರ ಕೃಪಕಟಾಕ್ಷ. ಹಿಂದುತ್ವ ಅಲೆ ಜೊತೆಗೆ ರಾಷ್ಟ್ರೀಯ ವಾದದ ಮಾತುಗಳು ನೂರರ ಗಡಿಗೆ ತೆಗೆದುಕೊಂಡು ಹೇೂಗಬಹುದು ಅನ್ನುವ ಆತ್ಮ ವಿಶ್ವಾಸ ಅಷ್ಟೇ?
ಆದರೆ ಒಂದಂತೂ ಸತ್ಯ ಕಾಂಗ್ರೆಸ್ ಗೂ ಕೂಡ ಸ್ವಂತ ಬಲದಲ್ಲಿ ಸರ್ಕಾರ ಮಾಡುವುದು ಕೂಡಾ ಕನಸಿನ ಮಾತು. ಹಾಗಂತ ಕಾಂಗ್ರೆಸ್ ರಾಜ್ಯದಲ್ಲಿ ಕಾಂಗ್ರೆಸ್ ಬೇರು ಹೇೂಗಿಲ್ಲ. ಈ ಬೇರುಗಳಿಗೆ ಸರಿಯಾಗಿ ನೀರು ಹಾಕಿ ಬೆಳೆಸಬಲ್ಲ ಸಮಥ೯ ನಾಯಕರು ಸಿಕ್ಕಿದರೆ ಖಂಡಿತವಾಗಿಯೂ ಕಾಂಗ್ರೆಸ್ ಮತ್ತೆ ಚಿಗುರುವ ಎಲ್ಲಾ ಲಕ್ಷಣಗಳು ಇದೆ. ಆದರೆ ಇದೇ ಸಿದ್ದರಾಮಯ್ಯ ನವರ ನಾಲಿಗೆ ಡಿಕೆಶಿಯವರ ಕಳೆ ಕುಂದಿದ ಮುಖಗಳನ್ನು ಹಿಡಿದು ಚುನಾವಣೆ ಎದುರಿಸುವುದು ತುಂಬಾ ಕಷ್ಟದ ಮಾತು. ರಾಹುಲ್ ರವರ ಜೇೂಡು ನಡೆ ನುಡಿಮಾತಿನಿಂದ ಮತದಾರರನ್ನು ಆಕಷಿ೯ಸುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.
ಕನಾ೯ಟಕದ ಮಟ್ಟಿಗೆ ಒಂದಂತೂ ಸತ್ಯ ಕುಮಾರಸ್ವಾಮಿ ಅವರ ಪಂಚರತ್ನ ರಥ ಯಾತ್ರೆ 30 ರಿಂದ 35 ಸ್ಥಾನಗಳನ್ನು ಸಂಪಾದಿಸಿ ಬಿಟ್ಟರೆ ಮುಂದೆ ನಮ್ಮ ರಾಜ್ಯ ವನ್ನು ಬಿಜೆಪಿ ಆಳ ಬೇಕೊ? ಕಾಂಗ್ರೆಸ್ ಆಳ ಬೇಕೊ ಎಂದು ನಿಧ೯ರಿಸುವ ವ್ಯಕ್ತಿ ಅಥಾ೯ತ್ ಶಕ್ತಿ ಜೆಡಿಎಸ್ನ ಕುಮಾರಸ್ವಾಮಿ ಅನ್ನುವುದು ಶತ ಸಿದ್ಧದ ಪರಿಸ್ಥಿತಿ. ಕಾದು ನೇೂಡೇೂಣ.
- ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ