ಪ್ರತಿ ಮಹಿಳೆಗೂ ಸಮಾಜದಲ್ಲಿ ಸ್ವತಂತ್ರವಾಗಿ ಹಾಗೂ ಗೌರವಾನ್ವಿತವಾಗಿ ಬಾಳುವ ಹಕ್ಕಿದೆ : ಪ್ರೊ. ಅಕ್ಷತಾ ಎ.ಪಿ.

Upayuktha
0

ಪುತ್ತೂರು: ಪ್ರತಿ ಮಹಿಳೆಗೂ ಸಮಾಜದಲ್ಲಿ ಭಯ ಮುಕ್ತ ವಾತಾವರಣದಲ್ಲಿ, ಬಲಾತ್ಕಾರವಿಲ್ಲದೆ, ಹಿಂಸೆ ಮತ್ತು ತಾರತಮ್ಯ ರಹಿತವಾಗಿ ಘನತೆಯಿಂದ ಬಾಳುವ ಹಕ್ಕಿದೆ ಎಂದು ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನ ಪ್ರಾಂಶುಪಾಲೆ ಪ್ರೋ. ಅಕ್ಷತಾ.ಎ.ಪಿ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಾಲೇಜು ಆಂತರಿಕ ದೂರು ಸಮಿತಿ ಹಾಗೂ ಕುಂದುಕೊರತೆ ನಿವಾರಣಾ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳೆಯರ ದೌರ್ಜನ್ಯ ನಿವಾರಣಾ ದಿನದ ಅಂಗವಾಗಿ ಭಾರತದಲ್ಲಿ ಮಹಿಳಾ ಹಕ್ಕುಗಳು ಮತ್ತು ಕಾನೂನುಗಳು ಎನ್ನುವ ವಿಷಯದ ಬಗ್ಗೆ ಮಾತಾಡಿದರು. ಕಾನೂನುಗಳು ಮಹಿಳೆಯರ ಘನತೆಯನ್ನು ಗೌರವಿಸುತ್ತವೆ ಆದರೆ ನಮ್ಮ ಸಮಾಜದಲ್ಲಿ ಅನೇಕರಿಗೆ ಸಂವಿಧಾನದಲ್ಲಿ ಸೂಚಿತವಾದ ಹಕ್ಕುಗಳು ಮತ್ತು ಕಾನೂನುಗಳ ಬಗ್ಗೆ ತಿಳುವಳಿಕೆಯೇ ಇಲ್ಲ ಎಂದರು. ಮಹಿಳೆಯರು ಎಲ್ಲಾ ರೀತಿಯಲ್ಲಿಯೂ ಸ್ವತಂತ್ರರಾಗಿರಬೇಕು ಎಂದ ಅವರು ಬಂಧನ ವಿರೋಧ, ಆಸ್ತಿಯಲ್ಲಿ ಸಮಪಾಲು, ಸುರಕ್ಷಿತ ಗರ್ಭಪಾತ, ವೀಕ್ಷಿಸುವ ಮತ್ತು ಹಿಂಬಾಲಿಸುವ ಹಾಗೂ ಕೌಟುಂಬಿಕ ಹಿಂಸೆಯ ಬಗ್ಗೆ ತಿಳಿಸಿದರು ಮತ್ತು ಅದಕ್ಕೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಂತರಿಕ ದೂರು ಸಮಿತಿಯ ಸಂಯೋಜಕಿ ಡಾ.ಸೌಮ್ಯ.ಎನ್.ಜೆ ಮಾತನಾಡಿ ಮಹಿಳಾ ಸುರಕ್ಷತೆಯ ಬಗ್ಗೆ ಎಲ್ಲರೂ ತಿಳಿದಿರುವುದು ಆವಶ್ಯಕ ಎಂದರು. ತಮಗೆ ಅನುಭವಕ್ಕೆ ಬಂದ ಕಿರುಕುಳಗಳು ಹಾಗೂ ಇನ್ನಿತರ ಕುಂದುಕೊರತೆಗಳ ಬಗ್ಗೆ ನಿಗದಿತ ಅಧಿಕಾರಿಗಳ ಜೊತೆ  ಮುಕ್ತವಾಗಿ ಚರ್ಚಿಸಬೇಕು ಎಂದರು.

ಕಾರ್ಯಕ್ರಮ ಸಂಯೋಜಕಿ ಪ್ರೋ.ರೂಪಾ.ಜಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೀತಾ.ಬಿ ಸ್ವಾಗತಿಸಿ, ಸರೋಶ್ ನಾಯ್ಕ್ ವಂದಿಸಿದರು. ಚೈತ್ರಾ.ಬಿ ಕಾರ್ಯಕ್ರಮ ನಿರ್ವಹಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top