ಅಕ್ಷರದವ್ವ ಸಾವಿತ್ರೀ ಬಾಯಿ ಫುಲೆ' ಪ್ರಶಸ್ತಿಗೆ ಡಾ. ವಾಣಿಶ್ರೀ ಕಾಸರಗೋಡು ಆಯ್ಕೆ

Upayuktha
0

ಕಾಸರಗೋಡು: ದಲಿತ ವಿದ್ಯಾರ್ಥಿ ಪರಿಷತ್ತು (ರಾಜ್ಯ ಘಟಕ ಬೆಂಗಳೂರು) ಇವರು ಪ್ರತೀ ವರ್ಷ ಸಾಧಕರನ್ನು ಗುರುತಿಸಿ ಕೊಡಮಾಡುವ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಈ ವರುಷ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಜಯಂತಿಯ ಪ್ರಯುಕ್ತ ಮಹಿಳಾ ಸಾಧಕಿಯರಿಗೆ ರಾಜ್ಯ ಮಟ್ಟದ "ಅಕ್ಷರದವ್ವ ಸಾವಿತ್ರೀ ಬಾಯಿ ಫುಲೆ ಪ್ರಶಸ್ತಿ " ಪ್ರದಾನ ಸಮಾರಂಭವನ್ನು ಇದೆ ಬರುವ ಜನವರಿ 3 ರಂದು ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿರುತ್ತಾರೆ.

ಈ ಸಮಾರಂಭದಲ್ಲಿ ಸನ್ಮಾನಿಸ್ಪಡುವ ಮಹಿಳಾ ಸಾಧಕಿಯರಲ್ಲಿ ಒಬ್ಬರಾಗಿ ಗಡಿನಾಡಾದ ಕಾಸರಗೋಡಿನ ವೈದ್ಯೆ, ಸಾಹಿತಿ, ಕನ್ನಡದ ಸೇವಕಿ, ಸಂಘಟಕಿ ಬಹುಮುಖ ಪ್ರತಿಭೆಯ ಕನ್ನಡದ ಕುವರಿ ಗಡಿನಾಡ ಕನ್ನಡತಿ ಡಾ. ವಾಣಿಶ್ರೀ ಕಾಸರಗೋಡು ಇವರ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದ ಕೆಲಸ ಕಾರ್ಯಗಳ ಸಾಧನೆಯಿಂದ ಇವರು ಗೌರವ ಅಕ್ಷರದವ್ವ ಸಾವಿತ್ರೀಬಾಯಿ ಫುಲೆ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top