ಚೆನ್ನೈ: ಮಾರ್ಗಳಿ ಸಂಗೀತೋತ್ಸವದಲ್ಲಿ ಉಡುಪಿಯ ಗಾರ್ಗಿ ಸುದೀಪ್ ಗಾಯನ‌ ಸುಧೆ

Upayuktha
0


 

ಉಡುಪಿ: ಚೆನ್ನೈನ ಹಲವಾರು ವೇದಿಕೆಗಳಲ್ಲಿ ಪ್ರತೀವರ್ಷ ಧನುರ್ಮಾಸದ ಸಂದರ್ಭದಲ್ಲಿ ಒಂದು ತಿಂಗಳ ಪರ್ಯಂತ ಅತ್ಯಂತ ವೈಭವದಿಂದ ನಡೆಯುವ ವಿಶ್ವ ಪ್ರಸಿದ್ಧ ಕರ್ನಾಟಕ‌ ಶಾಸ್ತ್ರೀಯ ಹಬ್ಬ ಮಾರ್ಗಳಿ ಸಂಗೀತೋತ್ಸವ -2022 ರಲ್ಲಿ ಡಿಸೆಂಬರ್ 17ರಂದು ಉಡುಪಿಯ ಯುವಪ್ರತಿಭೆ ವಿದುಷಿ ಗಾರ್ಗಿ ಸುದೀಪ್ ಅವರ ಶಾಸ್ತ್ರೀಯ ಗಾಯನ ಕಚೇರಿ ಏರ್ಪಟ್ಟಿತು. ವಯಲಿನ್ ನಲ್ಲಿ ವಿಶ್ವಜಿತ್ ಮತ್ತೂರು, ಮೃದಂಗಂನಲ್ಲಿ ಹರಿಹರ ಸುಂದರ ರಾಮನ್ ಸಹಕರಿಸಿದರು.

ಈ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಚೆನ್ನೈನ ಟಿ ನಗರದಲ್ಲಿರುವ ಉಡುಪಿ ಸೋದೆ ಮಠದ ಶಾಖೆಯ ನೂತನ ವೇದಿಕೆಯಲ್ಲಿ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಕಲಾಪ್ರೀತಿಗೆ ಸಾಕ್ಷಿಯಾಗಿ ತಿಂಗಳ ಪರ್ಯಂತ ನಡೆಯುವ ಸಂಗೀತೋತ್ಸವದ ಮೊದಲ‌ ಕಾರ್ಯಕ್ರಮ ಇದಾಗಿತ್ತು. ಸಂಗೀತ ಚೂಡಾಮಣಿ ಬಿರುದಾಂಕಿತ ಪದ್ಮಶ್ರೀ ಡಾ ಬಾಂಬೆ ಜಯಶ್ರೀ ಉತ್ಸವವನ್ನು ಉದ್ಘಾಟಿಸಿದರು. ಪ್ರಸಿದ್ಧ ವಯಲಿನ್ ವಿದ್ವಾನ್ ವಿಠಲ ಮೂರ್ತಿಯವರು ಈ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top