ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು ಇವರಿಂದ ಮಹಿಳಾ ಯಕ್ಷೋತ್ಸವ-2022

Upayuktha
0



ಬೆಂಗಳೂರು: ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು ಇವರಿಂದ "ಮಹಿಳಾ ಯಕ್ಷೋತ್ಸವ-2022" ಎನ್ನುವ ಕಾರ್ಯಕ್ರಮ ಭಾನುವಾರ (ಡಿ.18) ಬೆಂಗಳೂರಿನ ಕೆಂಪೆಗೌಡ ನಗರದ ಉದಯಭಾನು ಕಲಾ ಸಂಘದಲ್ಲಿ ನಡೆಯಿತು. ಯಕ್ಷಗಾನದ ಕುರಿತು ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ 'ಯಕ್ಷಗಾನ ರಸಪ್ರಶ್ನೆ' ಕಾರ್ಯಕ್ರಮವನ್ನು ಪ್ರೇಕ್ಷಕರಿಗಾಗಿ ನಡೆಸಲಾಯಿತು.

ಯಕ್ಷಗಾನದ ಪೂರ್ವ ರಂಗ ಬಾಲಗೋಪಾಲ ಮತ್ತು ಪೀಠಿಕೆ ಸ್ತ್ರೀ ವೇಷದ ಜೊತೆಗೆ ಡಾ || ಸುಪ್ರೀತ ಗೌತಮ್ ಇವರಿಂದ ಭರತನಾಟ್ಯ ಪ್ರದರ್ಶನ ಕೂಡ ನಡೆಯಿತು. "ಶಿವ ಪಂಚಾಕ್ಷರಿ ಮಹಿಮೆ" ಎನ್ನುವ ಪ್ರಸಂಗ ಯಕ್ಷಗಾನ ಗುರು ಮತ್ತು ಕಲಾವಿದರಾದ ಶ್ರೀಮತಿ ಕೆ ಗೌರಿ ಇವರ ನಿರ್ದೇಶನದಲ್ಲಿ ಬಹಳ ಸೊಗಸಾಗಿ ಮೂಡಿಬಂತು.

ಭಾಗವತರಾಗಿ ಶ್ರೀ ಸುಬ್ರಹ್ಮಣ್ಯ ನಾವುಡ, ಮೃದಂಗದಲ್ಲಿ ಶ್ರೀ ಅಜಿತ್ ಕುಮಾರ್, ಚಂಡೆಯಲ್ಲಿ ಶ್ರೀ ಸುಬ್ರಹ್ಮಣ್ಯ ಹಿಮ್ಮೇಳದಲ್ಲಿ ಸಹಕರಿಸಿದರು. ಮುಮ್ಮೇಳದಲ್ಲಿ ಕಲಾವಿದರಾಗಿ ಕೆ. ಗೌರಿ, ಆಶಾ ರಾಘವೇಂದ್ರ, ಲತಾ ಕೃಷ್ಣಮೂರ್ತಿ, ಅಂಬಿಕ, ಶಶಿಕಲಾ, ಅನ್ನಪೂರ್ಣೇಶ್ವರಿ, ಸುಮಾ ಅನಿಲ್ ಕುಮಾರ್, ಚೈತ್ರ ರಾಜೇಶ್, ಚೈತ್ರ ಭಟ್, ಶರ್ವಾಣಿ ಹೆಗಡೆ, ಸೌಜನ್ಯ ನಾವುಡ, ಸರಯು, ಧೃತಿ ಅಮ್ಮೆಂಬಳ, ಚಿನ್ಮಯ್ ನಾವುಡ ತಮ್ಮ ಪಾತ್ರವನ್ನು ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top