ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ ಇಂತಹ ಹೆಮ್ಮೆಯ ಕಲೆಯಲ್ಲಿ ಮಿಂಚುತ್ತಿರುವ ಪ್ರತಿಭೆ ಪೂಜಾ ಆಚಾರ್ ತೆಕ್ಕಟ್ಟೆ.
14.12.2004 ರಂದು ಶ್ರೀಮತಿ ಸುಮತಿ ಹಾಗೂ ಸುಧಾಕರ್ ಆಚಾರ್ ಇವರ ಮಗಳಾಗಿ ಜನನ. ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರದಲ್ಲಿ ಪ್ರಥಮ ಬಿಸಿಎ ವಿದ್ಯಾಭ್ಯಾಸವನ್ನು ವ್ಯಾಸಂಗ ಮಾಡುತ್ತಿದ್ದಾರೆ. 3ನೇ ತರಗತಿಯಿಂದ ಕುಣಿತವನ್ನು ಕಲಿಯಲು ಪ್ರಾರಂಭಿಸಿದ ಇವರು ಪ್ರಸ್ತುತ ಯಕ್ಷಗಾನ ಭಾಗವತಿಕೆಯನ್ನು ಕಲಿಯುತ್ತಿದ್ದಾರೆ ಒಟ್ಟು ೧೦ ವರ್ಷಗಳಿಂದ ಯಕ್ಷಗಾನವನ್ನು ಅಭ್ಯಾಸ ಮಾಡುತ್ತಿದ್ದಾರೆ.
ಗುರುಗಳು (ಹೆಜ್ಜೆ):-
ಗಣಪಯ್ಯ ಚಡಗ, ಸೀತಾರಾಮ ಶೆಟ್ಟಿ, ವೆಂಕಟೇಶ್ ವೈದ್ಯ, ನವೀನ್ ಕೋಟ, ಮಹೇಶ್ ಮಂದಾರ್ತಿ.
ಗುರುಗಳು (ಹಿಮ್ಮೇಳ):-
ಕೆ.ಪಿ.ಹೆಗಡೆ, ಲಂಬೋದರ ಹೆಗಡೆ, ದೇವದಾಸ್ ರಾವ್ ಕೂಡ್ಲಿ.
ಅಭಿಮನ್ಯು ಕಾಳಗ, ಸುಧನ್ವ ಮೋಕ್ಷ, ಜಾಂಬವತಿ ಕಲ್ಯಾಣ, ಶಶಿಪ್ರಭೆ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ಭೀಮ್ ಪಲಾಸ್, ಷಣ್ಮುಖಪ್ರಿಯ , ಹಿಂದೋಳ, ಮಧ್ಯಮಾವತಿ, ಸಾವೇರಿ, ಮೋಹನ , ಭೈರವಿ ಇತ್ಯಾದಿ ಇವರ ನೆಚ್ಚಿನ ರಾಗಗಳು. ಜನ್ಸಾಲೆ ರಾಘವೆಂದ್ರ ಆಚಾರ್ ಇವರ ನೆಚ್ಚಿನ ಭಾಗವತರು.
ಭಾಗವತಿಕೆ, ಯಕ್ಷಗಾನವೇಷ, ನೃತ್ಯ, ಸಂಗೀತ, ನಿರೂಪಣೆ, ರಂಗಭೂಮಿ ನಾಟಕ ಇತ್ಯಾದಿ ಇವರ ಹವ್ಯಾಸಗಳು.
ಉತ್ತಮ ಕಲಾವಿದ ಆಗ ಬೇಕಿದ್ದರೆ ಅದು ಪ್ರೇಕ್ಷಕರಿಂದ ಮಾತ್ರ ಸಾಧ್ಯ, ಕೆಲವರು ಸಾಂಪ್ರದಾಯಿಕ ಯಕ್ಷಗಾನವನ್ನು ಇಷ್ಟ ಪಡುತ್ತಾರೆ, ಕೆಲವರು ಇಷ್ಟ ಪಡುವುದಿಲ್ಲ, ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಲಾವಿದರು ಇರಬೇಕು ಎಂದು ಪೂಜಾ ಆಚಾರ್ ತೆಕ್ಕಟ್ಟೆ ಹೇಳುತ್ತಾರೆ.
ಕರಾವಳಿ ಭಾಗದ ಮಹಿಳಾ ಭಾಗವತರ ಸಾಲಿಗೆ ಸೇರಬೇಕು, ಯಶಸ್ವಿ ಕಲಾವೃಂದ ತೆಕ್ಕಟ್ಟೆ, ಇದರ ಉತ್ತಮ ವಿದ್ಯಾಥಿ೯ ಎನ್ನಿಸಿಕೊಳ್ಳಬೇಕು ಎಂದು ಹೇಳುತ್ತಾರೆ ಆಚಾರ್ ತೆಕ್ಕಟ್ಟೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
+91 8971275651
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ