ಸೃಜನಶೀಲತೆಯಿಂದ ಸಾಧನೆ ಸಾಧ್ಯ : ಡಿ.ಯದುಪತಿಗೌಡ

Upayuktha
0


ಉಜಿರೆ : ಜ್ಞಾನ ಪಡೆಯಲು ಹಲವಾರು ಮಾರ್ಗಗಳಿವೆ, ಅವುಗಳತ್ತ ಸಾಗಬೇಕಾಗಿರುವುದು ನಮ್ಮ ಕರ್ತವ್ಯ. ಇಕೋಸೃಜನ ಎಂದರೆ ಸಾಹಿತ್ಯ ಭಾಷೆಯಲ್ಲಿ ತಗೋಸೃಜನಶೀಲತೆ ಎಂದರ್ಥ ಎಂದು ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯ ಪ್ರಾಂಶುಪಾಲ ಡಿ.ಯದುಪತಿಗೌಡ ಹೇಳಿದರು.


ಎಸ್.ಡಿ.ಎಂ.ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ ಸಹಯೋಗದಲ್ಲಿ ನಡೆದ ಇಕೋಸೃಜನ್ ೨೦೨೨ರ ಕಾರ್ಯಕ್ರಮನ್ನು ಉದ್ಘಾಟಿಸಿ ಇವರು ಮಾತನಾಡಿದರು. ಬತ್ತಿ ಹಾಗೂ ಎಣ್ಣೆ ಬೇರೆ ಬೇರೆಯಾಗಿದ್ದರೆ ದೀಪ ಉರಿಯಲು ಸಾಧ್ಯವಿಲ್ಲ. ಇವೆರಡು ಒಂದಾಗಿ ಎಣ್ಣೆ ಹೀರಿದಾಗ ಮಾತ್ರ ದೀಪ ಬೆಳಗಲು ಸಾಧ್ಯ ಎಂದು ಕಿವಿಮಾತು ಹೇಳಿದರು.


ನಾಲ್ಕು ಗೋಡೆಗಳ ಮಧ್ಯೆ ಕುಳಿತರೆ ಸಾಧನೆ ಸಾಧ್ಯವಾಗುವುದಿಲ್ಲ, ಅದಕ್ಕಾಗಿ ಇಂಥಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ ಪ್ರತಿಭೆ, ಕೌಶಲ್ಯ, ಸೃಜನಶೀಲತೆಯನ್ನು ಹೊರ ಹಾಕಬೇಕು. ವಿಶಾಲವಾದ ಜಗತ್ತಿನಲ್ಲಿ ವಿಶೇಷವಾದ ಅವಕಾಶಗಳಿರುತ್ತವೆ ನಮ್ಮ ಕೌಶಲ್ಯದಿಂದ ಅವುಗಳನ್ನು ಕಂಡುಕೊಳ್ಳಬೇಕು ಎಂದು ಪ್ರೋ.ಯದುಪತಿಗೌಡ ಆಶಿಸಿದರು.


ರವಿ ಕಾಣದ್ದನ್ನು ಕವಿ ಕಂಡ ಎನ್ನುವುದು ಸುಮ್ಮನೆಅಲ್ಲ, ನಮಗಿಂದು ಯದುಪತಿ ಇಕೋಸೃಜನ್ ಶಬ್ದಕ್ಕೆ ಹೊಸ ಅರ್ಥ ಕಲ್ಪಿಸಿಕೊಟ್ಟರು. ನಮಗೆ ಬಾಯಿಪಾಠ ಮಾಡುವ ಗಿಳಿಗಳು ಬೇಡ ಸೃಜನಶೀಲತೆ ಹೊಂದಿರುವ ಹಾರಾಡುವ ಹಕ್ಕಿಗಳು ಬೇಕು. ಅದಕ್ಕೆ ನಿಮ್ಮಲ್ಲಿರುವ ಪ್ರತಿಭೆ ಅನಾವರಣ ಆಗಬೇಕಿದೆ, ಸ್ಪರ್ಧೆಯೆಂದ ಮೇಲೆ ಸೋಲು ಗೆಲುವು ಸಹಜ. ಅದನ್ನು ಧನಾತ್ಮಕವಾಗಿ ಸ್ವೀಕರಿಸಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎ.ಜಯಕುಮಾರಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿದರು.


ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗಣರಾಜ ಸ್ವಾಗತ ಕೋರಿದರು, ವಿಭಾಗದ ವಿದ್ಯಾರ್ಥಿನಿ ಅನ್ನಪೂರ್ಣ ನಿರೂಪಣೆ ಹಾಗೂ ವಿಭಾಗದ ಸಹಾಯಕ ಉಪನ್ಯಾಸಕ ಡಾ.ನಾಗರಾಜ ಪೂಜಾರಿ ವಂದನಾರ್ಪಣೆ ನಡೆಸಿಕೊಟ್ಟರು. ತಾಲೂಕಿನ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top