ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗವು ಸಂಸ್ಥೆಯ ಎಐಎಂಎಸ್ ಹಾಗೂ ರಿನೀವೇಬಲ್ ಎನರ್ಜಿ ಕ್ಲಬ್ ನ ಸಹಯೋಗದೊಂದಿಗೆ ನ.14 ರಂದು ಒಂದು ದಿನದ 'ಫ್ಯೂಯೆಲ್ ಸೆಲ್' ಎಂಬ ವಿಷಯದ ಬಗೆಗೆ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರಿನ ಸಿಜಿಪಿಎಲ್ ವಿಭಾಗದ ಸೀನಿಯರ್ ಸೈಂಟಿಸ್ಟ್ ಡಾ. ಆನಂದ್ ಶಿವಪೂಜಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ 'ಫ್ಯೂಯೆಲ್ ಸೆಲ್ ಸಸ್ಟೈನೇಬಲ್ ಟೆಕ್ನಾಲಜೀಸ್' ಎಂಬ ವಿಷಯದ ಬಗೆಗೆ ಮಾತನಾಡಿದರು.
ಸುಮಾರು 300 ಮಂದಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಫ್ಯೂಯೆಲ್ ಸೆಲ್ ಬಗೆಗೆ ಹೆಚ್ಚಿನ ಜ್ಞಾನ ಪಡೆದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ