ಮನೆಮನೆಗೆ ರಾಘವ ರಾಮಾಯಣ: ಧರ್ಮಭಾರತಿ ವಿಶೇಷ ಅಭಿಯಾನ

Upayuktha
0

ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿಯವರು ಕನ್ನಡದಲ್ಲೇ ಬರೆಯುವ ರಾಮಾಯಣವನ್ನು ರಾಜ್ಯದ ಮನೆ ಮನೆಗೆ ಪುಸ್ತಕ ರೂಪದಲ್ಲಿ ತಲುಪಿಸುವ ವಿಶೇಷ ಅಭಿಯಾನವನ್ನು ಶ್ರೀ ರಾಮಚಂದ್ರಾಪುರ ಮಠದ 'ಧರ್ಮಭಾರತಿ' ಹಮ್ಮಿಕೊಂಡಿದೆ.


ಪರಮಪೂಜ್ಯರ 30ನೇ ಚಾತುರ್ಮಾಸ್ಯದ ಅಂಗವಾಗಿ, ಮಹರ್ಷಿ ವಾಲ್ಮೀಕಿ ಬರೆದ ಮೂಲ ರಾಮಾಯಣದ ಪುನರವತರಣ ಇದಾಗಿರುತ್ತದೆ. ಮೊದಲಿಗೆ ಕನ್ನಡದಲ್ಲಿ ಹಾಗೂ ನಂತರ ವಿವಿಧ ಭಾಷೆಗಳಲ್ಲಿ ಇದನ್ನು ಪ್ರಕಟಿಸಲಾಗುವುದು ಎಂದು ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಸಮಗ್ರ ರಾಮಾಯಣ ಮುಗಿಯುವವವರೆಗೆ ಧರ್ಮಭಾರತಿ ಮಾಸಿಕದ ಪ್ರತಿ ಸಂಚಿಕೆಯ ಪ್ರತಿ ಪುಟವೂ ರಾಮಾಯಣಮಯವಾಗಿರುತ್ತದೆ. ವಿಶೇಷವೆಂದರೆ ಧರ್ಮಭಾರತೀ ಇದನ್ನು ಉಚಿತವಾಗಿ ವಿತರಿಸುತ್ತದೆ. ಮೊದಲ ಹಂತದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಮನೆಗಳಿಗೆ ತಲುಪಲಿದೆ ಎಂದು ವಿವರಿಸಿದ್ದಾರೆ.


ಹತ್ತಾರು ಲಕ್ಷ ಜನರು ಮೂಲ ರಾಮಾಯಣವನ್ನು ಓದುವಂತೆ ಮಾಡುವ ಪ್ರಯತ್ನ ಇದಾಗಿದ್ದು, ಲಕ್ಷ ಲಕ್ಷ ಮನೆಗಳಲ್ಲಿ ನೂರಾರು ವರ್ಷ ರಾಮಾಯಣ ಪುಸ್ತಕ ಇರುವಂತೆ ಮಾಡುವ ಮಹದುದ್ದೇಶದ ಯೋಜನೆ ಇದಾಗಿದೆ. ಹಲವು ತಲೆಮಾರುಗಳಿಗೆ ಇದರ ಪ್ರಯೋಜನ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top