|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನ.28ರಂದು ಪ್ರೋ. ಎಚ್.ಟಿ. ಪೋತೆರವರ ಪ್ರಶಸ್ತಿ ಪುರಸ್ಕೃತ ನಾಲ್ಕು ಕೃತಿಗಳ ಅವಲೋಕನ

ನ.28ರಂದು ಪ್ರೋ. ಎಚ್.ಟಿ. ಪೋತೆರವರ ಪ್ರಶಸ್ತಿ ಪುರಸ್ಕೃತ ನಾಲ್ಕು ಕೃತಿಗಳ ಅವಲೋಕನ

ಚಾಮರಾಜಪೇಟೆ: ಸಪ್ನ ಬುಕ್ ಹೌಸ್, ಕನ್ನಡ ಜನಶಕ್ತಿ ಕೇಂದ್ರ ಮತ್ತು ಪ್ರೋ.ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದೊಡನೆ ಗುಲಬರ್ಗ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೋ.ಎಚ್.ಟಿ.ಪೋತೆರವರ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಲ್ಕು ಕೃತಿಗಳ ಅವಲೋಕನವನ್ನು ನ.28 ಸೋಮವಾರ ಸಂಜೆ 4:15ಕ್ಕೆ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಅಯೋಜಿಸಿದೆ.


ಹಿರಿಯ ಸಾಹಿತಿ ಹಂಪನಾ ಉದ್ಘಾಟಿಸುವರು, ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಬಯಲೆಂಬೋ ಬಯಲು - ಬಯೋಪಿಕ್ ಕಾದಂಬರಿ ಕುರಿತು ಡಾ.ಮುದೆನೂರು ನಿಂಗಪ್ಪ, ಅಂಬೇಡ್ಕರ್ ಭಾರತ ಕುರಿತು ಡಾ.ಸತ್ಯಮಂಗಲ ಮಹಾದೇವ, ಸಮಾಜೋಜಾನಪದ : ಜಾನಪದ ಜ್ಞಾನ – ವಿಜ್ಞಾನ ಕುರಿತು ಡಾ.ಶಿವರಾಜ ಬ್ಯಾಡರಹಳ್ಳಿ ಮಾತನಾಡುವರುಎಂದು ಆಯೋಜಕರು ತಿಳಿಸಿರುತ್ತಾರೆ.


ಪ್ರೊ. ಎಚ್. ಟಿ. ಪೋತೆ ಕಿರು ಪರಿಚಯ


ಪ್ರೊ. ಎಚ್. ಟಿ. ಪೋತೆ ವಿಜಯಪುರ ಜಿಲ್ಲೆಯ ಇಂಡಿ ತಾಲುಕಿನ ಹಿಂಜಗಿಯವರು. ನಾಡಿನ ಸಮವೇದನಶೀಲ ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕ-ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾಗಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ. ಎ., ಎಂ. ಫಿಲ್., ಪಿಎಚ್.ಡಿ. ಪದವಿ, ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಿಂದ ಅಂಬೇಡ್ಕರ್ ಚಿಂತನೆಯ ಅಧ್ಯಯನಾತ್ಮಕ ಲೇಖನಗಳ ಕುರಿತು ಡಿ. ಲಿಟ್. ಪದವಿ ಪಡೆದಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ, ಪ್ರಸಾರಾಂಗದ ನಿರ್ದೇಶಕರಾಗಿದ್ದಾರೆ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನ ಸಂಸ್ಥೆಯ ನಿರ್ದೇಶಕರಾಗಿ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾಗಿ ಆಡಳಿತದ ಅನುಭವ ಹೊಂದಿದ್ದಾರೆ.


ಜಾನಪದ : ಹೈದ್ರಾಬಾದ್ ಕರ್ನಾಟಕದ ಜನಪದ ಪ್ರದರ್ಶನ ಕಲೆಗಳು, ಸಮಾಜೋಜಾನಪದ, ಜನಪದ ಜ್ಞಾನ-ವಿಜ್ಞಾನ, ಕನ್ನಡ ಜಾನಪದ ಶಾಸ್ತ್ರ, ಜಾನಪದ ಸಿಂಗಾರ, ಜಾನಪದ ಆಯಾಮಗಳು ಮುಂತಾಗಿ ಹದಿನೈದಕ್ಕೂ ಹೆಚ್ಚು ಕೃತಿಗಳ ರಚನೆ ಮಾಡಿದ್ದಾರೆ.


ದಲಿತ ಸಾಹಿತ್ಯ : ಅಂಬೇಡ್ಕರ್ ಭಾರತ, ಅಂಬೇಡ್ಕರ್ ಸಂವೇದನೆ, ಅಂಬೇಡ್ಕರ್ ಕಥನ, ದಲಿತಲೋಕ, ಅಂಬೇಡ್ಕರ್ ಪುಸ್ತಕಪ್ರೀತಿ, ಅವೈದಿಕ ಚಿಂತನೆ, ಅಂಬೇಡ್ಕರ್ ವಾಚಿಕೆ, ಜೀವಪರ ಚಿಂತನೆ, ಸಂಸ್ಕೃತಿ ಸಂಕ್ರಮಣ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.


ಜೀವನ ಕಥನ : ಬಾಬಸಹೇಬರೆಡೆಗೆ ಖರ್ಗೆ..., ಅಂಬೇಡ್ಕರ್ ಫಸಲು, ಪೆರಿಯಾರ್, ಅಂಬೇಡ್ಕರ್ ಭಾರತ, ಕುಮಾರ ಕಕ್ಕಯ್ಯ ಪೋಳ, ಶಾಹೂ ಮಹಾರಾಜ, ಬಿ. ಶ್ಯಾಮಸುಂದರ್ ಜೀವನ ಕಥನ ಹೀಗೆ ಹದಿನೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.


ಕಥೆ-ಕಾದಂಬರಿ: ಚೆಮ್ಮಾವುಗೆ, ಬೆತ್ತಲಾದ ಚಂದ್ರ, ಕರುಳರಿಯುವ ಹೊತ್ತು, ಮಾದನ ಕರೆಂಟ್ ಕತಂತ್ರ, ಅನೇಕಲವ್ಯ ಒಟ್ಟು ಐದು ಕಥಾ ಸಂಕಲನಗಳು, ಬಯಲೆಂಬೋ ಬಯಲು, ಮಹಾಬಿಂದು ಕಾದಂಬರಿಗಳು ಹಾಗೂ ರಮಾಬಾಯಿ (ಅನುಸಜನ).


ಪ್ರಶಸ್ತಿಗಳು : ಸಮಾಜೋಜಾನಪದ ಕೃತಿಗೆ ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜನಪದ ಜ್ಞಾನ-ವಿಜ್ಞಾನ, ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕನ್ನಡ ಜಾನಪದ ಶಾಸ್ತç ಕೃತಿಗೆ ಸೂಗಯ್ಯ ಹಿರೇಮಠ ಸಗರನಾಡಿನ ಜಾನಪದ ಪ್ರಶಸ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೊರುಚ ಜಾನಪದ ಪ್ರಶಸ್ತಿಗಳು ಲಭಿಸಿವೆ.


ಅಂಬೇಡ್ಕರ್ ಭಾರತ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಯಲೆಂಬೋ ಬಯಲು ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಲಿತ ಅಸ್ಮಿತೆ ಕೃತಿಗೆ ರಾಜಲಕ್ಷ್ಮಿ ಬರಗೂರು ಪ್ರಶಸ್ತಿ, ದಲಿತಾಂತರಂಗ, ನೀರನೆಳಲು ಕೃತಿಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ದಲಿತ ಲೋಕ, ಅಂಬೇಡ್ಕರ್ : ಪುಸ್ತಕಪ್ರೀತಿ ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್. ಬಸವರಾಜು ದತ್ತಿ ಪ್ರಶಸ್ತಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


0 Comments

Post a Comment

Post a Comment (0)

Previous Post Next Post