ದೈಹಿಕ ಆರೋಗ್ಯ, ಚಿತ್ತಶಾಂತಿ, ಆಧ್ಯಾತ್ಮಿಕ ಸಾಧನೆಗೆ ಯೋಗ ಸಹಕಾರಿ: ಡಾ| ಕುಮಾರ್

Upayuktha
0



ಮಂಗಳೂರು: ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ನವಂಬರ 2 ರಿಂದ ಹೈದಿನೈದು ದಿನಗಳ ಕಾಲ ಸಂಜೆ 6 ರಿಂದ 7.15 ರ ವರೆಗೆ ನಡೆಯುವ ಯೋಗ ಶಿಬಿರದ ಉದ್ಘಾಟನೆಯನ್ನು ದ.ಕ. ಜಿಲ್ಲೆಯ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಡಾ. ಕುಮಾರ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡುತ್ತಾ ಯೋಗದ ಮೂಲಕ ಸಮಾಜದ ಸ್ವಾಸ್ಥ್ಯದ ಬಗ್ಗೆ ಕಾಳಜಿವಹಿಸಿದ ಇಂತಹ ಕಾರ್ಯಕ್ರಮವು ಶ್ಲಾಘನೀಯ ಎಂದರು. ಶ್ರೀ ದೇಲಂಪಾಡಿಯವರು ನೈಜ ಕಾಳಜಿಯಿಂದ ತರಬೇತಿ ನೀಡುತ್ತಿರುವುದು ಅವರ ಪ್ರಬುದ್ಧ ಯೋಗ ಸಾಧನೆಗೆ ನಿದರ್ಶನ. ಯೋಗದ ಮೂಲಕ ಕಾಯಿಲೆಗಳನ್ನು ನಿಯಂತ್ರಿಸಿಬಹುದು. ಯೋಗ ಅಭ್ಯಾಸ ಮಾಡಿದಾಗ ದಿನ ಪೂರ್ತಿ ಉಲ್ಲಾಸ, ಲವಲವಿಕೆ ಇರುತ್ತದೆ. ಮನಸ್ಸು ಹಗುರವಾಗಿ ಶಾಂತಿ ಲಭಿಸುತ್ತದೆ. ಯೋಗ ಮಾಡದೆ ಇರುವ ದಿನದ ವ್ಯತ್ಯಾಸ ತಿಳಿಯುತ್ತದೆ. ಯೋಗದಂತಹ ಭಾರತೀಯ ಆರೋಗ್ಯ ಪದ್ದತಿಯನ್ನು ಜೀವನದಲ್ಲಿ ಅಳವಡಿಸಿ ಒತ್ತಡರಹಿತರಾಗಿ ಆರೋಗ್ಯಪೂರ್ಣರಾಗಿ ಜೀವಿಸಬಹುದು ಎಂದರು.


ಶ್ರೀ ದೇಲಂಪಾಡಿಯವರು ಸುಮಾರು 40 ವರ್ಷಗಳಿಂದ ಯೋಗ ತರಬೇತಿ ನೀಡುತ್ತಿದ್ದು, ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಿ, ದೈಹಿಕ ಆರೋಗ್ಯ, ಚಿತ್ತಶುದ್ಧಿ, ಆಧ್ಯಾತ್ಮಿಕ ಸಾಧನೆಗೆ ಯೋಗ ಸಹಕಾರಿ ಎಂದು ತಿಳಿಸಿದರು. ರಾಮಕೃಷ್ಣ ಮಠದ ಶ್ರೀ ರಂಜನ್ ಇವರು ಮಠದ ಕಾರ್ಯಕ್ರಮದ ಬಗ್ಗೆ ಮಾಹಿತಿ ತಿಳಿಸಿದರು.


ಸುಮಾರು 65 ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ದೇಲಂಪಾಡಿಯವರ ಶಿಷ್ಯರಾದ ಸುಮ, ಭಾರತಿ, ಸುಭದ್ರ ಹಾಗೂ ಕಲ್ಪ ಇವರು ಸಹಕರಿಸಿದರು. ಶಿಬಿರದಲ್ಲಿ ಸರಳ ವ್ಯಾಯಾಮ, ಸೂರ್ಯನಮಸ್ಕಾರ, ಆಸನಗಳು, ಪ್ರಾಣಾಯಾಮ, ಧ್ಯಾನ ಹಾಗೂ ಮಂತ್ರ ಮುದ್ರೆಗಳನ್ನು ತಿಳಿಸಿಕೊಡಲಾಗುವುದು. ಆಸಕ್ತರು ಶಿಬಿರದಲ್ಲಿ ಭಾಗವಹಿಸಲು ಮಠವನ್ನು ಸಂಪರ್ಕಿಸಿರಿ.

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, 

ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್, ಅಂತರರಾಷ್ಟೀಯ ಯೋಗ ತೀರ್ಪುಗಾರರು,

ಮೊಬೈಲ್ ನಂಬ್ರ : 9448394987


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

Post a Comment

0 Comments
Post a Comment (0)
To Top