ಪುತ್ತೂರು: ಪುತ್ತೂರು ನಾಟ್ಯರಂಗದ ಕಲಾವಿದರು ಪ್ರಸ್ತುತ ಪಡಿಸುವ ಯಶೋಧರೆ ನೃತ್ಯ ರೂಪಕವು ಇದೇ ನವೆಂಬರ್ 12 ನೇ ಶನಿವಾರದಂದು ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾಗಲಿದೆ. ನಾಟ್ಯರಂಗದ ನೃತ್ಯಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಈ ನೃತ್ಯರೂಪಕವನ್ನು ನಿರ್ದೇಶಿಸಿರುತ್ತಾರೆ. ಯಶೋಧರೆ ನೃತ್ಯರೂಪಕಕ್ಕೆ ಗಂಗಾಧರ ಬೆಳ್ಳಾರೆ ಯವರ ಸಾಹಿತ್ಯವಿದ್ದು, ಗುರುರಾಜ್ ಮಂಗಳೂರು ಸಂಗೀತ ನಿರ್ದೇಶಿಸಿರುತ್ತಾರೆ. ಪ್ರಣವ ಬೆಳ್ಳಾರೆಯವರು ಕಲಾಕೃತಿಗಳನ್ನು ನೃತ್ಯರೂಪಕ್ಕಾಗಿ ರಚಿಸಿರುತ್ತಾರೆ. ನಾಟ್ಯರಂಗದ ಸುಮಾರು ಹದಿನೈದು ಕಲಾವಿದರು ಈ ರೂಪಕದಲ್ಲಿ ಭಾಗವಹಿಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ