ಹಳೆಯಂಗಡಿಯಲ್ಲಿ 'ಪಾಡ್ದನದೊಳಗಿನ ರಹಸ್ಯ' ಕಲಿಕಾ ಕಾರ್ಯಾಗಾರ

Upayuktha
0

ತುಳುನಾಡಿನ ಮೊದಲ ಹೋರಾಟಗಾರ್ತಿ ರಾಣಿ ಅಬ್ಬಕ್ಕ: ದಿನಕರ ಉಳ್ಳಾಲ್‌



ಹಳೆಯಂಗಡಿ: ಕರಾವಳಿಯ ಹೆಮ್ಮೆಯ ಉಳ್ಳಾಲ ರಾಣಿ ಅಬ್ಬಕ್ಕ ಸಮಗ್ರ ತುಳು ಬದುಕನ್ನು ಪ್ರತಿನಿಧಿಸಿ ತುಳು ಸಂಸ್ಕೃತಿಯ ಪ್ರತೀಕವಾಗಿದ್ದರು. ರಾಣಿ ಅಬ್ಬಕ್ಕನ ಸ್ಮರಣೆಗಾಗಿ ತುಳುನಾಡಿನ ತುಳು ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಕೃಷಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸದಸ್ಯ ದಿನಕರ್ ಉಳ್ಳಾಲ ಹೇಳಿದರು.


ಮಂಗಳೂರು ವಿವಿ ರಾಣಿ ಅಬ್ಬಕ್ಕ ಅಧ್ಯಯನ ಪೀಠವು ಲಯನ್ಸ್‌ ಇಂಟರ್‌ನ್ಯಾಷನಲ್ ಲಿಯೋ ಜಿಲ್ಲೆ 317 ಡಿ ಸಹಯೋಗದಲ್ಲಿ ಪಾವಂಜೆಯ ನಿನಾದ ರಂಗಮಂದಿರದಲ್ಲಿ ಭಾನುವಾರ ನಡೆದ ಲಿಯೊ ಪ್ರತಿಭೆಗಳಿಗೆ ಪಾಡ್ದನದೊಳಗಿನ ರಹಸ್ಯಗಳ ಕಲಿಕಾ ಕಾರ್ಯಾಗಾರ ಮತ್ತು ಇತಿಹಾಸದ ಪುಟಗಳಲ್ಲಿ ರಾಣಿ ಅಬ್ಬಕ್ಕ ಸರಣಿ ಉಪನ್ಯಾಸ-5 ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.


ಬಾಯನದ ಬಿರ್ದಾಟವನ್ನು ಜಾನಪದ ವಿದ್ವಾಂಸ ಕೆ.ಕೆ ಪೇಜಾವರ, ಅಬ್ಬಕ್ಕ ಅಧ್ಯಯನ ಪೀಠದ ಸದಸ್ಯೆ ಧನಲಕ್ಷ್ಮೀ ಗಟ್ಟಿ ನಡೆಸಿಕೊಟ್ಟರು. ನಿನಾದ ಸಂಸ್ಥೆಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್‌ ಜಿಲ್ಲಾಧ್ಯಕ್ಷ ಕವನ್‌ ಕುಬೆವೂರು, ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಎಚ್‌. ವಸಂತ ಬೆರ್ನಾಡ್‌, ಲಯನ್ಸ್‌ನ ಗುಣವತಿ ರಮೇಶ್‌, ಕುಸುಮಾ ಮಹಾಬಲ ಪೂಜಾರಿ ಕಡಂಬೋಡಿ, ಕೃಷಿಕರಾದ ರಮೇಶ್‌ ದೇವಾಡಿಗ, ಜಯಂತಿ ಸಂಕಮಾರ್‌ ಮತ್ತಿತರರು ಉಪಸ್ಥಿತರಿದ್ದರು.


ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸಂಯೋಜಕ ಡಾ. ಗಣೇಶ್‌ ಅಮೀನ್‌ ಸಂಕಮಾರ್‌ ಸ್ವಾಗತಿಸಿದರು. ಮಲ್ಲಿಕಾ ಬಾಯನ ಹಾಡಿದರು. ಅನು ಸಂಕಮಾರ್ ಭವ, ಸಂಕಮಾರ್‌ ಪ್ರಾರ್ಥಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top