ಪುತ್ತೂರು: ಸುದಾನ ವಸತಿ ಶಾಲೆಯಲ್ಲಿ ನವೆಂಬರ್ 12 ರಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಯುವ ಮಾರ್ಗದರ್ಶಿ / ವೃತ್ತಿ ಮಾರ್ಗದರ್ಶಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಇಸ್ಟಿಟ್ಯೂಟ್ ಫಾರ್ ಇಂಡಿವಿಜುವಲ್ ಡೆವಲಪ್‌ಮೆಂಟ್ ನಿರ್ದೇಶಕರೂ ಆದ ಪ್ರೋ.ರೋನಾಲ್ಡ್ ಪಿಂಟೋ ಅವರು ಭವಿಷ್ಯದಲ್ಲಿ ವೃತ್ತಿಆಧಾರಿತವಾಗಿರುವ ಉತ್ತಮ ಅವಕಾಶಗಳ ಬಗ್ಗೆ ಮತ್ತುಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಯ ಬಗ್ಗೆ ಸವಿವರವಾಗಿ ತಿಳಿಸಿದರು. ವಿದ್ಯಾರ್ಥಿಗಳ ಜೊತೆ ಸಂವಾದವನ್ನೂ ನಡೆಸಿದರು.
ರೊ. ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಅಧ್ಯಕ್ಷರು ರೋಟರಿ ಇಲೈಟ್, ರೊ. ಮೌನೇಶ್ ವಿಶ್ವಕರ್ಮ ಕೋಶಾಧಿಕಾರಿ, ರೋಟರಿ ಇಲೈಟ್, ಸುದಾನ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ. ಶೋಭಾ ನಾಗರಾಜ್, ಉಪ ಮುಖ್ಯ ಶಿಕ್ಷಕಿ ಶ್ರೀಮತಿ. ಲವೀನಾ ರೋಸಲೀನ್ ಹನ್ಸ್ ಉಪಸ್ಥಿತರಿದ್ದರು.
ಇಂಟ್ಯರಾಕ್ಟ್ ಆಯೆಶಾತನಾಜ್ (10ನೇ) ಅಭ್ಯಾಗತರನ್ನು ಪರಿಚಯಿಸಿದರು. ಇಂಟ್ಯರಾಕ್ಟ್ ವಿದ್ಯಾರ್ಥಿ ಅಧ್ಯಕ್ಷೆ ವಿಖ್ಯಾತಿ ಬೆಜ್ಜಂಗಳ (10ನೇ) ಸ್ವಾಗತಿಸಿ, ಇಂಟ್ಯರಾಕ್ಟ್ ವಿದ್ಯಾರ್ಥಿ ಕಾರ್ಯದರ್ಶಿ ಅಭಿನವ್ (9ನೇ) ವಂದಿಸಿದರು. ಅಪೇಕ್ಷಾ ಪೈ (10ನೇ) ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಇಂಟ್ಯರಾಕ್ಟ್ ಕ್ಲಬ್ ‘ಸ್ಪಂದನ’ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ