ವಿದ್ಯಾಭಾರತಿ ರಾಷ್ಟ್ರ ಮಟ್ಟದ ಖೋಖೋ ಪಂದ್ಯಾಟ: ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಥಮ

Upayuktha
0

ಪುತ್ತೂರು: ಮಧ್ಯಪ್ರದೇಶದ ದೇವಾಸ್‌ನಲ್ಲಿ ವಿದ್ಯಾಭಾರತಿ ಅಖಿಲ ಭಾರತ್ ಶಿಕ್ಷಾ ಸಂಸ್ಥಾನ್‌ ಇದರ ವತಿಯಿಂದ ನಡೆದ ರಾಷ್ಟ್ರ ಮಟ್ಟದ ಹತ್ತೊಂಬತ್ತನೇ ವಯೋಮಾನದ ಬಾಲಕರ ವಿಭಾಗದ ಖೋಖೋ ಪಂದ್ಯಾಟದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ (ಮೂರು ರಾಜ್ಯ ಕರ್ನಾಟಕ - ತೆಲಂಗಾಣ - ಆಂಧ್ರಪ್ರದೇಶ) ತಂಡವನ್ನು ಪ್ರತಿನಿಧಿಸಿದ ವಿವೇಕಾನಂದ ಪದವಿ ಪೂರ್ವಕಾಲೇಜಿನ ಬಾಲಕರ ಖೋಖೋ ತಂಡ ರಾಷ್ಟ್ರ ಮಟ್ಟದ ಪಂದ್ಯಕೂಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಗಳಿಸಿದೆ.


ಅಲ್ಲದೆ ಸ್ಕೂಲ್‌ ಗೇಮ್ಸ್ ಫೆಡರೇಷನ್‌ ಆಫ್‌ ಇಂಡಿಯಾ ನಡೆಸುವ ರಾಷ್ಟ್ರ ಮಟ್ಟದ ಖೋಖೋ ಪಂದ್ಯಾಟಕ್ಕೆ ಅರ್ಹತೆ ಪಡೆದುಕೊಂಡಿದೆ. ತಂಡದ ಶಿಸ್ತು ಮತ್ತು ಉತ್ತಮ ಕ್ರೀಡಾ ಪ್ರದರ್ಶನ ಸಂಘಟಕರ ಹಾಗೂ ನೆರೆದಿರುವ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಈ ಪಂದ್ಯಾಟದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ನಿತಿನ್‌ ಕುಮಾರ್, ವಿಜ್ಞಾನ ವಿಭಾಗದ ಮಂಜುನಾಥ್‌ಎಸ್, ಸಾತ್ವಿಕ್‌ ಆರ್, ನಂದನ್‌ ಗೌಡ, ವಾಣಿಜ್ಯ ವಿಭಾಗದ ಪವನ್‌ ಕುಮಾರ್, ಶ್ರೀನಿಶ್, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಜೀವನ್‌ ಎಸ್, ದೇಶಿಕ್ ಕೆ, ರಂಜನ್‌ ಕೆ.ಆರ್, ವಿಜ್ಞಾನ ವಿಭಾಗದ ಅಶ್ವಿತ್ ಭಂಡಾರಿ, ಮನ್ವಿತ್ ಬಿ ಗೌಡ, ಯಶವಂತ್‌ ಡಿ.ಎಸ್, ಶ್ರೇಯಸ್ ಪಿ, ಸುಹಾಸ್ ಕೆ ಭಾಗವಹಿಸಿದ್ದರು.


ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಹಾಗೂ ಯತೀಶ್, ವ್ಯವಸ್ಥಾಪಕ ಚೇತನ್‌ ಕುಮಾರ್‌ ರವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ತಂಡದ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top