ಕಲಾತ್ಮಕ ಸವಾಲೆಸೆದ 'ಸಿರಿ'ಯ ನವರಸಯಾನ

Upayuktha
0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಡೆಯುತ್ತಿರುವ, ಲಕ್ಷ ದೀಪೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿರಿ ವಾನಳ್ಳಿಯವರ ಏಕ ವ್ಯಕ್ತಿ ನಾಟಕ ಪ್ರೇಕ್ಷಕರನ್ನ ರಂಜಿಸಿತು.


ಸುಮಾರು ಒಂದುವರೆ ಘಂಟೆಗಳ ಅವಧಿಯಲ್ಲಿ ವೇದಿಕೆಯ ಮೇಲೆ ಏಕಾಂಗಿಯಾಗಿ, ಸ್ಪಷ್ಠವಾಗಿ, ನಿರರ್ಗಳವಾಗಿ, ಗಟ್ಟಿ ಧ್ವನಿಯಲ್ಲಿ ಸಂಭಾಷಣೆಯ ಮೂಲಕ ಪ್ರೇಕ್ಷಕರಿಗೆ ನವರಸ ಉಣಬಡಿಸುತ್ತಿದ್ದ ಸಿರಿ ವಾನಳ್ಳಿಯವರ ನಟನೆ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.


ಬಾಲ್ಯದಿಂದಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಸಿರಿ ಚಲನಚಿತ್ರಗಳಲ್ಲಿಯೂ ತೊಡಗಿಸಿಕೊಂಡು ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡವಳು. ಚಿತ್ರಕಲೆ, ಸಂಗೀತ, ಯಕ್ಷಗಾನದಲ್ಲೂ ಕೂಡಾ ತೊಡಗಿಸಿಕೊಂಡಿರುವ ಈಕೆ 'ಆನಂದ ಭಾಮಿನಿ' ಏಕವ್ಯಕ್ತಿ ನಾಟಕದಲ್ಲಿ 'ಸಾವಿತ್ರಿ' ಆಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾಳೆ.


19ನೇ ಶತಮಾನದ 'ಸಾವಿತ್ರಿ' ಪ್ರೇಮ ಎಂಬುದು ಬಂಧನವಾಗದೆ ಬಿಡುಗಡೆಯ ಆಯಾಮವಾಗಲು ಪ್ರೇಮಿಗಳಿಗೆ ಇರಬೇಕಾದ ಎಲ್ಲಾಆದರ್ಶವನ್ನು ತನ್ನ ದೃಷ್ಠಿಕೋನದಲ್ಲಿ ಪ್ರಿಯಕರನ ಬಳಿ ಪ್ರಶ್ನಿಸುತ್ತಾ ಹೋಗುತ್ತಾಳೆ. ಆತನ ಪತ್ರವನ್ನು ಓದಿ ಅವನಿಗೆ ಪತ್ರವನ್ನು ಬರೆಯುತ್ತಾ ಆಕೆ ಮೆಲಕು ಹಾಕುವ ಸನ್ನಿವೇಶವೇ ಸುಂದರ ನಾಟಕವಾಗಿ ಹೊರಹೊಮ್ಮಿದೆ.


ಅನುಭವಗಳು, ಬೆಳವಣಿಗೆ, ಬದಲಾವಣೆ, ಹೆಣ್ತನದ ಘನತೆಯ ಸೂಕ್ಷ್ಮತೆಗಳು, ನೈಜ ಪ್ರೇಮದ ಸ್ವರೂಪಗಳು, ಯುದ್ಧದ ತಲ್ಲಣಗಳು, ಶಾಂತಿಯ ಮಹತ್ವ ಮತ್ತು ಆಕೆ ಕೇಳುವ ಪ್ರಶ್ನೆಗಳಿಗೆ ಆಕೆಯೇ ಉತ್ತರವಾಗಿ ಸ್ತ್ರೀತನದ ವಿವಿಧ ಆಯಾಮಗಳನ್ನು ಎಳೆ ಎಳೆಯಾಗಿ ಬಿಚ್ಚಿಡುವ ಈ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಗಿರಿಜಾ ಶಾಸ್ತ್ರಿಯವರು ಅನುವಾದಿಸಿದ್ದಾರೆ. ರಂಗ ಸ್ವರೂಪವನ್ನು ಸುಧಾ ಆಡುಕಳ ನೀಡಿದ್ದಾರೆ.


ಸಿರಿ ವಾನಳ್ಳಿ ಅವರ ಅಭಿನಯ ವೇದಿಕೆಗೆ ಗಣೇಶ್ ಬೆಳಕು ಮತ್ತು ರಂಗ ನಿರ್ವಹಣೆಯನ್ನು ಮಾಡಿದರೆ, ಸಿದ್ಧಾಂತ ಮೈಸೂರು ಸಂಗೀತವನ್ನು ನೀಡಿದರು. ಈ ಸಂದರ್ಭಕ್ಕೆ ಸಾಕಷ್ಟು ಕಲಾಭಿಮಾನಿಗಳು ಸೇರಿದಂತೆ ನೂರಾರು ಜನರು ಸಾಕ್ಷಿಯಾದರು.


ವರದಿ: ಪ್ರಸೀದ್ ಭಟ್

ಪತ್ರಿಕೋದ್ಯಮ ವಿಭಾಗ, ದ್ವಿತೀಯ ವರ್ಷ

ಎಸ್ ಡಿ ಎಮ್ ಸ್ನಾತಕೋತ್ತರ ಕೇಂದ್ರ, ಉಜಿರೆ


ಚಿತ್ರ ಕೃಪೆ: ವಿವೇಕ್ ಸಿ. ಪಿ.

ಪತ್ರಿಕೋದ್ಯಮ ವಿಭಾಗ, ದ್ವಿತೀಯ ವರ್ಷ

ಎಸ್ ಡಿ ಎಮ್ ಸ್ನಾತಕೋತ್ತರ ಕೇಂದ್ರ, ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top