ಧರ್ಮಸ್ಥಳ: ಶಾಸ್ತ್ರೋಕ್ತ ಕೆರೆಕಟ್ಟೆ ಉತ್ಸವ

Upayuktha
0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಳದ ಲಕ್ಷದೀಪೋತ್ಸವದ ಅಂಗವಾಗಿ ಎರಡನೇಯ ದಿನದ ರಾತ್ರಿ ಕೆರೆಕಟ್ಟೆ ಉತ್ಸವ ಧರ್ಮಾದಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಸಮ್ಮುಖದಲ್ಲಿ ನಡೆಯಿತು.


ಮೊದಲಿಗೆ ದೇವಸ್ಥಾನದ ಒಳಭಾಗದಲ್ಲಿ ಸಕಲ ಶಾಸ್ತ್ರಗಳೊಂದಿಗೆ ಪೂಜೆ ನಡೆಸಿ ಸಂಪ್ರದಾಯದಂತೆ ಜಾಗಟೆ, ಶಂಖ, ನಾದಸ್ವರ, ಡೋಲು, ಸಂಗೀತ ಮೂಲಕ ಹೂಗಳು ಮತ್ತು ಆಭರಣಗಳಿಂದ ಅಲಂಕೃತ ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸಿ 16 ಸುತ್ತು ಪ್ರದಕ್ಷಿಣೆ ಹಾಕಲಾಯಿತು.


ನಂತರ ಆನೆ, ಬಸವ, ಪಂಜು, ಗೊಂಬೆಗಳ ಮೆರವಣಿಗೆಯ ಜೊತೆಗೆ ಸಹಸ್ರಾರು ಭಕ್ತರ ಜೊತೆಯಲ್ಲಿ ಪಲ್ಲಕ್ಕಿಯಲ್ಲಿ ಕೆರೆ ಸುತ್ತ 5 ಸುತ್ತು ಪ್ರದಕ್ಷಿಣೆಯನ್ನು ವಿಶೇಷ ವಾದ್ಯಗಳ ಮೂಲಕ ನಡೆಸಲಾಯಿತು. ನಂತರ ದೇವರನ್ನು ಕೆರೆಕಟ್ಟೆಯಲ್ಲಿ ಕೂರಿಸಿ ಸಂಗೀತ, ನಾದಸ್ವರ ಮೂಲಕ ದೇವರಿಗೆ ಪೂಜೆ ಸಲ್ಲಿಸಲಾಯಿತು.


ದಾರಿಯುದ್ದಕ್ಕೂ ನಡೆದ ಮಂತ್ರಪಠಣ, ಶಂಖ ಜಾಗಟೆಗಳ ನಾದ ಅಲ್ಲಿ ನೆರೆದಿರುವ ಭಕ್ತ ಸಮೂಹದೊಳಗೆ ಭಕ್ತಿಭಾವ ಮೂಡಿಸಿತು. ಭಕ್ತರು ಭಕ್ತಿಯಿಂದ ದೀಪ ಹಚ್ಚುತ್ತಿದ್ದದ್ದು ಮತ್ತು ಭಜನೆಗಳು ಅಲ್ಲಿದ್ದವರನ್ನು ಭಕ್ತಿಪರವಶವರನ್ನಾಗಿಸಿತ್ತು. ಇದಾದ ನಂತರ ದೇವರನ್ನು ರಥದೆಡೆಗೆ ಮಾನವ ಸರಪಳಿ ಮೂಲಕ ಕರೆತರಲಾಯಿತು. ಈ ಸಂದರ್ಭದಲ್ಲಿ ಪೋಲೀಸ್ ಇಲಾಖೆ ಮತ್ತು ದೇವಸ್ಥಾನ ಸಿಬ್ಬಂದಿಗಳ ಪ್ರಯತ್ನ ಉತ್ಸವಕ್ಕೆ ತೊಂದರೆಯಾಗದಂತೆ ನೋಡಿಕೊಂಡಿತು.


ಬಳಿಕ ದೇವರನ್ನು ಬೆಳ್ಳಿರಥದಲ್ಲಿ ಕೂರಿಸಿ ಮಂಗಳಾರತಿ ಮಾಡಿ, ದೇವಸ್ಥಾನಕ್ಕೆ ಒಂದು ಸುತ್ತಿನ ಪ್ರದಕ್ಷಿಣೆಯ ನಂತರ ಮತ್ತೆ ದೇವಳದ ಒಳಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ವರ್ಗದ ಪ್ರಮುಖರು, ವೈದಿಕ ಸಮಿತಿಯವರು, ಮತ್ತು ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.


ವರದಿ & ಚಿತ್ರಗಳು

ಅರ್ಪಿತ್ ಇಚ್ಚೆ

ದ್ವಿತೀಯ ಸ್ನಾತಕೊತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ಎಸ್.ಡಿ.ಎಂ ಕಾಲೇಜು, ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top