ಪ್ರಾಚೀನ ವಿಜ್ಞಾನದ ಅಂಶಗಳು ಸಂಸ್ಕೃತ ಸಾಹಿತ್ಯದಲ್ಲಿ ಅಗಾಧವಾಗಿದೆ: ಡಾ. ಈಶ್ವರಪ್ರಸಾದ್

Upayuktha
0

ಉಜಿರೆ: ಆಧುನಿಕತೆಯೊಂದಿಗೆ ಮೈಗೂಡಿಸಿಕೊಂಡಿರುವ ವಿಜ್ಞಾನವು ಸಂಸ್ಕೃತ ಸಾಹಿತ್ಯದ ಮೂಲವಾದ ವೇದಗಳಿಂದ ಲಾಗಾಯ್ತು ಇರುವುದನ್ನು ನೋಡಬಹುದು. ಅನೇಕ ಆಯುರ್ವೇದ, ವೃಕ್ಷಾಯುರ್ವೇದ ವಿಚಾರವೂ ವೇದಗಳಲ್ಲಿ ಇವೆ. ಮಹಾಭಾರತ, ರಾಮಾಯಣ, ಸ್ಮೃತಿಗಳು, ದರ್ಶನಗಳು ಹಾಗೆಯೇ ಪುರಾಣಗಳಲ್ಲೂ ವಿಜ್ಞಾನದ ವಿವಿಧ ವಿಷಯ ಪ್ರತಿಪಾದನೆಗಳನ್ನು ಕಾಣಬಹುದು. ವರಾಹಮಿಹಿರನ ಬೃಹತ್ಸಂಹಿತೆ, ಆರ್ಯಭಟನ ಆರ್ಯಭಟೀಯಮ್, ಭೃಗುಸಂಹಿತೆ , ಭಾರದ್ವಾಜರ ವೈಮಾನಿಕ ಶಾಸ್ತ್ರ, ಚರಕ ಸುಶ್ರುತ ಇವರ ಗ್ರಂಥಗಳು, ಸುರಪಾಲನ ವೃಕ್ಷಾಯುರ್ವೇದ ಇವುಗಳು ಸಂಸ್ಕೃತ ಭಾಷಾ ಸಾಹಿತ್ಯದ ಪ್ರಮುಖ ಕೃತಿಗಳಾಗಿವೆ. ಹೀಗೆ ಪ್ರಾಚೀನ ವಿಜ್ಞಾನದ ಅಂಶಗಳು ಸಂಸ್ಕೃತ ಸಾಹಿತ್ಯದಲ್ಲಿ ಅಗಾಧವಾಗಿದೆ ಎಂದು ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಸಂಸ್ಕೃತ ಭಾಷಾ ಪ್ರಾಧ್ಯಾಪಕ ಡಾ. ಈಶ್ವರಪ್ರಸಾದ್ ಹೇಳಿದರು.


ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಸಂಘದ ವತಿಯಿಂದ ನಡೆದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top