ಬೆಂಗಳೂರು: ಸ್ವಚ್ಛ ಭಾಷೆ ಅಭಿಯಾನ ಮತ್ತು ತಿಳಿರು ತೋರಣ ಪುಸ್ತಕಗಳ ಬಿಡುಗಡೆ

Upayuktha
0

ಬೆಂಗಳೂರು: ದೂರದ ಅಮೆರಿಕದಲ್ಲಿದ್ದುಕೊಂಡು ಕನ್ನಡ ಭಾಷೆಯ ಮೇಲಿನ ಪ್ರೀತಿಯಿಂದ ಶ್ರೀವತ್ಸ ಜೋಶಿ ಅವರು ಸ್ವಚ್ಛ ಭಾಷೆ ಅಭಿಮಾನ ಮಾಡಿ, ಅದರ ಪುಸ್ತಕವನ್ನಾಗಿ ತಂದಿರುವುದು ಅತ್ಯಮೂಲ್ಯವಾಗಿದೆ ಎಂದು ಲೇಖಕ ಜೋಗಿ ಅಭಿಪ್ರಾಯಪಟ್ಟರು.


ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ 'ವಿಶ್ವವಾಣಿ' ಅಂಕಣಕಾರ ಶ್ರೀವತ್ಸ ಜೋಶಿಯವರ 'ಸ್ವಚ್ಛ ಭಾಷೆ ಅಭಿಯಾನ: ಕಸವಿಲ್ಲದ ಕನ್ನಡಕ್ಕೊಂದು ಕೈಪಿಡಿ' ಪುಸ್ತಕದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ದೂರದ ಅಮೆರಿಕದಲ್ಲಿದ್ದುಕೊಂಡು ಕನ್ನಡ ಭಾಷೆಯ ಮೇಲಿನ ಪ್ರೀತಿಯಿಂದ ರಚಿಸಿರುವ ಈ ಪುಸ್ತಕವು ಅತ್ಯಮೂಲ್ಯವಾಗಿದೆ. ಪಾ.ವೆಂ.ಆಚಾರ್ಯರ ಪದಾರ್ಥ ಚಿಂತಾಮಣಿ, ವೆಂಕಟಸುಬ್ಬಯ್ಯನವರ ಇಗೋ ಕನ್ನಡ ಪುಸ್ತಕಗಳ ಸಾಲಿನಲ್ಲಿ ನಿಲ್ಲುವ ಅರ್ಹತೆ ಮತ್ತು ಸತ್ವ ಇದಕ್ಕಿದೆ ಎಂದು ಹೇಳಿದರು.





ಆಸ್ಟ್ರೇಲಿಯಾದ ಕನ್ನಡಿತಿ ಅನಸೂಯಾ ಶಿವರಾಂ ಅವರು ಮಾತನಾಡಿ, ವಿಚಿತ್ರಾನ್ನ ಅಂಕಣದ ಕಾಲದಿಂದಲೂ ನಾನು ಜೋಶಿಯವರ ಲೇಖನಗಳನ್ನು ತಪ್ಪದೇ ಓದಿ ಆನಂದಿಸುತ್ತೇನೆ. ಫೇಸ್‌ಬುಕ್‌ನಲ್ಲಿ ಅವರು ಹಾಕುವ ಪೋಸ್ಟ್ ಗಳಿಗೆ ಬರುವ ಪ್ರತಿಕ್ರಿಯೆಗಳನ್ನು ಓದುವುದು ಒಂದು ಮೌಲ್ಯವರ್ಧಕ, ಜ್ಞಾನವರ್ಧಕ ಚಟುವಟಿಕೆ ಆಗಿರುತ್ತದೆ. ಈಗ ಬೆಂಗಳೂರಿನಲ್ಲಿ ವೃದ್ಧ ತಂದೆ-ತಾಯಿಗಳ ಆರೈಕೆ ಮಾಡುತ್ತಿರುವಾಗ ಅವರಿಗೆ ಜೋಶಿಯವರ ಲೇಖನಗಳ ಧ್ವನಿಮುದ್ರಣ ಕೇಳಿಸಿ ಅವರ ಮುಖದಲ್ಲಿ ಸಂತೋಷವನ್ನು ಕಾಣುವುದೇ ನನ್ನ ದೊಡ್ಡ ಖುಷಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಮಯದಲ್ಲಿ ಜೋಶಿಯವರು ವಿಶ್ವವಾಣಿ ಪತ್ರಿಕೆಯಲ್ಲಿ ಬರೆಯುವ ತಿಳಿರುತೋರಣ ಅಂಕಣ ಬರಹಗಳ ಮೂರು ಸಂಪುಟಗಳು ಬಿಡುಗಡೆಯಾದವು. ಕಾರ್ಯಕ್ರಮದಲ್ಲಿ ಸಾಹಿತ್ಯ ಪ್ರಕಾಶನದ ಎಂ.ಎ ಸುಬ್ರಹ್ಮಣ್ಯ, ಶ್ರೀವತ್ಸ ಜೋಶಿ, ರೂಪಾ ಗುರುರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಎರಡನೆಯ ಭಾಗವಾಗಿ ಜೋಶಿಯವರೊಂದಿಗೆ ಓದುಗರ ಸಂವಾದ ಮತ್ತು ಪ್ರಶ್ನೋತ್ತರ ಕಾರ್ಯಕ್ರಮವಿತ್ತು.


"ಶ್ರೀವತ್ಸ ಜೋಶಿಯವರ ಅಂಕಣಬರಹಗಳಲ್ಲಿರುವ ವಿಷಯ ವೈವಿಧ್ಯ, ಅದಕ್ಕೆ ಬೇಕಾದ ಅಧ್ಯಯನಶೀಲತೆ ಮತ್ತು ಶಿಸ್ತನ್ನು ಕೊಂಡಾಡಿದರು. ಸ್ವಚ್ಛ ಭಾಷೆ ಅಭಿಯಾನ ಸರಣಿಯ ಕಾಯಂ ಓದುಗ. ಅದು ಈಗ ಪುಸ್ತಕರೂಪದಲ್ಲಿ ಬಂದಿರುವುದು ಕನ್ನಡಕ್ಕೊಂದು ಬಹುಮೂಲ್ಯ ಕೊಡುಗೆಯಾಗಿದೆ."

- ಎಚ್.ಡುಂಡಿರಾಜ್ , ಸಾಹಿತಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top