ಈ ವಿಚಾರ ನನಗಂತೂ ಸಂಬಂದ್ದಿಸಿದ್ದಲ್ಲ. ನನಗೆ ಬೇಕಾಗಿಯೂ ಇಲ್ಲ, ಅದೇನೋ ತವಕ ತಿಳಿದೇ ತೀರುತ್ತೇನೆಂದು ನನಗನಿಸಿದ್ದನ್ನು ಹೇಳಿಯೇ ಬಿಡುತ್ತೇನೆಂದು. ನಾವೆಂದು ಯೋಚಿಸಲಾರೆವೂ ಎಲ್ಲವರೂ ನಮ್ಮ ತರವಲ್ಲವೆಂದೂ. ಒಬ್ಬರ ಯೋಚನೆ ಇನ್ನೊಬ್ಬರ ಯೋಚನೆ ಬಹುತೇಕ ಬಿನ್ನವೇ. ನನಗನಿಸಿದ್ದು ಇನ್ನೊಬ್ಬರಿಗೆ ಅನಿಸಬೇಕೆಂದೇನಿಲ್ಲ.
ನಾವು ಮಾಡಿದ್ದು ಸರಿಯೇ, ನಾವು ಹೇಳಿದ್ದು ಸರಿಯೇ ಎಂದು ನಾವು ಇನ್ನೊಬ್ಬರಿಗೆ ಹೇಳುತ್ತೇವೆ. ಹಾಗೆಯೇ ಅವರು ನಾನು ಹೇಳಿದ್ದು ಸರಿಯೇ ಎಂದು ಮಾತಿಗಿಳಿಯುತ್ತಾರೆ. ಸತ್ಯ ಮತ್ತು ಅಸತ್ಯತೆಯ ಪರ ಎಲ್ಲರ ವಾದ. ಕೊನೆಗೆ ಯಾವುದು ಸತ್ಯ ಯಾವುದು ಅಸತ್ಯವಾದರೇನು? ಅಲ್ಲಿ ನಡೆದಿರುವುದೂ ಎರಡು ಮನಸ್ಸುಗಳ ನಡುವಿನ ವಾದವಲ್ಲವೇ...?
ಕೊನೆಗೂ ಒಬ್ಬರು ವಿರುದ್ದ ಉಳಿದ್ದವರೆಲ್ಲ ಹರಿಹಾಯ್ದಾಗ ಒಬ್ಬರೇ ಆದವರು ಸುಮ್ಮನಾಗಬೇಕಾದದ್ದು ಅನಿವಾರ್ಯವಾಗಬಹುದು. ಕೊನೆಗೊಂದು ಯೋಚನೆ ನನಗೇ ಸಂಬಂಧಿಸಿದ ವಿಷಯವಲ್ಲ,ಇದರಿಂದ ನನಗೇನೂ ಪ್ರಯೋಜನವಿಲ್ಲ, ನನಗೇಕೆ ಈ ವಿಷಯದ ತುಮುಲ ಎನ್ನುವುದು.
ವಿಷಯ ಬೇಡವಾದದ್ದು ಆಗಿರಬಹುದ್ದೇನೋ. ಆದರೇ ಒಂದಲ್ಲಾ ಒಂದು ಸಂಗತಿಗಳು ಜೀವನದಲ್ಲಿ ಬರುವುದು ಕೆಲ್ಲವೊಮ್ಮೆ ಕೆಲವರಿಗೆ ಒಂದೆ ಆಗಿರಬಹುದು.ಆ ಸಂಗತಿಗಳು ಪರಿಚಿತವೂ ಇರಬಹುದು.ನಾವು ಅದರ ಬಗ್ಗೆ ಸುಮ್ಮನಿರುವುದೇಕೆ ಎನ್ನುವ ತವಕವಷ್ಟೇ.
ಒಬ್ಬರು ಬಗ್ಗೆ ಇನ್ನೊಬ್ಬರೊಂದಿಗೆ ಮಾತನಾಡುವುದು ತಪ್ಪೇ..? ತಪ್ಪಂತೂ ಹೌದು. ಯಾವುದೇ ಮನಸ್ಸಿಗೆ ನೋಯಿಸುವುದು ನಮ್ಮ ಅಧಿಕಾರವಲ್ಲ. ಅವರಿಗೆ ನೋಯಿಸದೆ ಇನ್ನೊಬ್ಬರೊಂದಿಗೆ ಮಾತನಾಡುವುದು ಎಷ್ಟೂ ಸರಿಯೋ ತಿಳಿಯದು. ಆದರೇ ಮನಸ್ಸದು ಎಷ್ಟು ಬೇಡವೆಂದರೂ ಕೇಳಬೇಕಲ್ಲವೇ..?
ನಮ್ಮ ಮನಸ್ಸು ಕೆಲವೊಮ್ಮೆ ನಮ್ಮ ಸುತ್ತಮುತ್ತಲಿರುವ ಜನರನ್ನು ಅವಲಂಬಿಸಿರಬಹುದು. ಕೆಲವೊಮ್ಮೆ ನಮ್ಮದೇ ಯೋಚನೆಗಳಿರುವ, ನಾವು ಹೇಳಿದ್ದನ್ನೇ ಹೇಳುವ ಇನ್ನೋಬ್ಬರು ಸಿಗಬಹುದು. ಅದೇನೆ ಇದ್ದರು ನಮ್ಮ ಯೋಚನೆ ನಮಗೆ, ಅವರ ಯೋಚನೆ ಅವರಿಗೆ.
ಹೇಳುವುದ್ದನ್ನು ಸಮಾಧಾನವಿಲ್ಲದೆ ಹೇಳಿಬಿಡುತ್ತೇವೆ. ನಂತರ ಅದರದ್ದೇ ಯೋಚನೆ ನಾನೇಕೆ ಹಾಗೆಂದೇ, ನನಗದು ಬೇಡವಾಗಿತ್ತು, ನನಗೇಕೆ ಬೇಕಿತ್ತು ಎಂದೆಲ್ಲಾ ಯೋಚನೆಗಳು ಬರುವುದುಂಟು. ಮೊದಲಿಗೆ ನಮ್ಮ ಮನಸ್ಸು ಸರಿಯಾಗಿರಬೇಕು, ನಮ್ಮ ಯೋಚನೆಗಳು ಸರಿಯಾಗಿರಬೇಕು, ನಂತರ ಇತರರ ವಿಚಾರ.
ನಿನಗನಿಸಿದ್ದನ್ನು ನಿನ್ನೊಳಗೇ ಪರಾಮರ್ಶಿಸಿಕೊಳ್ಳು ನಂತರ ಹೇಳಬೇಕೆಂದಿದ್ದರೇ ಹೇಳಿ ಬಿಡು. ಬೇರೆಯವರು ಒಪ್ಪುವುದು ಬಿಡುವುದು ಅವರಿಗನಿಸಿದ್ದು. ಅದು ಅವರ ವಿಚಾರ. ನೀನು ಹೇಳುವುದ್ದನ್ನು ಇನ್ನೊಬ್ಬರು ಒಪ್ಪಲೇಬೇಕೆಂದಿಲ್ಲ. ಎಲ್ಲರಿಗೂ ಅವರದ್ದೇ ಆದ ಆಲೋಚನೆಗಳಿವೆ, ಅವಲೋಕಿಸುವ ಶಕ್ತಿ ಇದೆ..ನಿನ್ನದ್ದು ಬರಿ ಮಾತಷ್ಟೇ.
- ಲತಾ ಚೆಂಡೆಡ್ಕ ಪಿ
ಪ್ರಥಮ ಬಿ.ಎ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


