ಬೆಂಗಳೂರು: ಆರ್. ವಿ. ರಸ್ತೆಯಲ್ಲಿ ಇರುವ ಪ್ರತಿಷ್ಠಿತ ವಿಜಯ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗವು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ಪ್ರತಿಬಾರಿ ಅನೇಕ ವಿಶೇಷ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ಉತ್ತಮ ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸುವಲ್ಲಿ ವಿಭಾಗದ ಶಿಕ್ಷಕ ವೃಂದ ಸದಾ ಶ್ರಮಿಸುತ್ತಿದ್ದಾರೆ . ಅನೇಕ ಪ್ರತಿಷ್ಠಿತ ಸಂಸ್ಥೆಗಳು, ಜೈವಿಕ ತಂತ್ರಜ್ಞಾನ ಉದ್ಯಮಗಳು ಹಾಗು ಜೈವಿಕ ತಂತ್ರಜ್ಞಾನ ಸಂಶೋದನಾ ಕೇಂದ್ರಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳನ್ನು ಬಿಡುವಿನ ವೇಳೆಯಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹೆಚ್ಚಿನ ಅದ್ಯಯನಕ್ಕೆ ಉತೇಜಿಸುತ್ತಿದೆ.
VINBt ( ವಿನ್ ಬಿಟಿ) ವಿಜಯ ಕಾಲೇಜು ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಗಳ ಒಕ್ಕೂಟದ ಮುಖಾಂತರ ಅನೇಕ ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಬಾರಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ವಿಜ್ಞಾನ ಸಚಿವಾಲಯದ ಅಂಗ ಸಂಸ್ಥೆಗಳಾದ ಇಂಡಿಯನ್ ಅಕಾಡಮಿ ಆಫ್ ಸೈನ್ಸಸ್ ಬೆಂಗಳೂರು, ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡಮಿ ಹೊಸ ದೆಹಲಿ, ದಿ ನ್ಯಾಷನಲ್ ಅಕಾಡಮಿ ಆಫ್ ಸೈನ್ಸಸ್ ಇಂಡಿಯ ಪ್ರಯಾಗರಜ್ ಇವರ ಪ್ರತಿಷ್ಠಿತ ಜಾಯಿಂಟ್ ಎಜುಕೇಷನ್ ಪ್ಯಾನೆಲ್ ಅಡಿಯಲ್ಲಿ ದಿನಾಂಕ 24.11.22 ಗುರುವಾರ ಹಾಗು ದಿನಾಂಕ 25.11.22 ಶುಕ್ರವಾರಗಳಂದು ಜೀವ ಸಂಪನ್ಮೂಲಗಳ ಉಪಯೋಗದಲ್ಲಿ ಆಗಿರುವ ನೂತನ ಬೆಳವಣಿಗೆಗಳು ಹಾಗೂ ಜೈವಿಕ ತಂತ್ರಜ್ಞಾನ ಎಂಬ ವಿಷಯದ ಬಗ್ಗೆ ಎರಡು ದಿನಗಳ ವಿಶೇಷ ಉಪನ್ಯಾಸ ಕಾರ್ಯಾಗಾರ ಈ ಬಾರಿ ಆಯೋಜಿಸಲಾಗಿದೆ ಎಂದು ವಿಭಾಗದ ಮುಖ್ಯಸ್ಥರಾದ ಡಾ||ಗೋಪಾಲಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ 24.11.22 ಗುರುವಾರ ಬೆಳ್ಳಿಗೆ 9.30ಕ್ಕೆ ನಿವೃತ್ತ ಐಎಎಸ್ ಅಧಿಕಾರಿಗಳು ಹಾಗು ಬಿ.ಹೆಚ್.ಎಸ್. ಉನ್ನತ ಶಿಕ್ಷಣ ಸಂಸ್ಥೆಗಳ ಅದ್ಯಕ್ಷರು ಆದ ಶ್ರೀಯುತ ಜಿ. ವಿ. ವಿಶ್ವನಾಥ್ ಅವರು ಉಪನ್ಯಾಸ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.ಖ್ಯಾತ ಸಾಹಿತಿ, ಸಸ್ಯ ವಿಜ್ಞಾನಿ, ಅಂಕಣಕಾರ ಡಾ|| ಕೆ. ಎನ್.ಗಣೇಶಯ್ಯಅವರು ಈ ಎರಡು ದಿನಗಳ ಉಪನ್ಯಾಸ ಕಾರ್ಯಾಗಾರದ ಸಂಚಾಲಕರಾಗಿರುತ್ತಾರೆ. ಈ ಉಪನ್ಯಾಸ ಕಾರ್ಯಾಗಾರದಲ್ಲಿ ಆರು ಮಂದಿ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಷಯದ ವಿವಿಧ ಆಯಾಮಗಳ ಬಗ್ಗೆ ತಮ್ಮ ವಿಶಿಷ್ಟ ಸಂಪನ್ಮೂಲ ಉಪನ್ಯಾಸವನ್ನು ನೀಡಲಿದ್ದಾರೆ. ಬೆಂಗಳೂರು ಸುತ್ತಮುತ್ತಲ ಕಾಲೇಜುಗಳ ಸುಮಾರು 125 ರಿಂದ 150 ಜೀವ ವಿಜ್ಞಾನದ ವಿದ್ಯಾರ್ಥಿಗಳು ಈ ಉಪನ್ಯಾಸ ಕಾರ್ಯಾಗಾರದಲ್ಲಿ ಪಾಲ್ಗೊಂಡು ತಮ್ಮ ಜ್ಞಾನಾರ್ಜನೆಯನ್ನು ಉತ್ತಮ ಪಡಿಸಿಕೊಳ್ಳಲಿದ್ದಾರೆ.
ದಿನಾಂಕ 25.11.22 ಶುಕ್ರವಾರ ಸಂಜೆ 4.00 ಗಂಟೆಗೆ ಉಪನ್ಯಾಸ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿಗಳು ಹಾಗೂ ಬಿ.ಎಚ್.ಎಸ್. ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಎನ್. ಬಿ. ಭಟ್. ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಸಮಾರೋಪ ಭಾಷಣವನ್ನು ನೀಡಲಿದ್ದಾರೆ ಎಂದು ಉಪನ್ಯಾಸ ಕಾರ್ಯಾಗಾರದ ಸಂಯೋಜಕರಾದ ಜೈವಿಕ ತಂತ್ರಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀಯುತ ಭರತ್ ಎಂ. ಎ. ಅವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ