ಡಾ.ಎನ್.ಎಸ್.ಎ.ಎಮ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೂರ್ಯ ನಮಸ್ಕಾರ ಯೋಗ ಶಿಬಿರ

Upayuktha
0

ನಿಟ್ಟೆ: ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುಜ್ ಫಾರ್ ಲೈಫ್ ಸಂಘ ಎನ್.ಎಮ್.ಎ.ಎಮ್.ಐ.ಟಿ. ಮತ್ತು ನಿಟ್ಟೆ ಪುರುಷರ ವಿದ್ಯಾರ್ಥಿ ನಿಲಯಗಳ ಸಹಯೋಗದಲ್ಲಿ 12 ದಿನಗಳ ಸೂರ್ಯನಮಸ್ಕಾರ ಯೋಗ ಶಿಬಿರವನ್ನು ನಿಟ್ಟೆ ಕ್ಯಾಂಪಸ್ ನ ಸಿ.ಎಮ್.ಡಿ. ನಿರ್ದೇಶಕ ಶ್ರೀ ಯೋಗೀಶ್ ಹೆಗ್ಡೆ ಇತ್ತೀಚೆಗೆ ಉದ್ಘಾಟಿಸಿದರು.


ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಯೋಗೀಶ್ ಹೆಗ್ಡೆಯವರು 'ಈ 12 ದಿನಗಳ ಯೋಗ ಶಿಬಿರವನ್ನು ನಿಟ್ಟೆಯ ಪುರುಷರ ವಸತಿನಿಲಯದ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ. ಯೋಗ ಬದುಕಿನ ಅನಿವಾರ್ಯ ಸಂಗಾತಿಯಾಗಬೇಕು ಆಗ ನಮ್ಮ ಯೋಗವು ಬದಲಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಯೋಗಾಸನದಂತಹ ಚಟುವಟಿಕೆಗಳಲ್ಲಿ ಭಾಗವಹಿಸಬೇಕು' ಎಂದು ಕರೆ ನೀಡಿದರು.


ಈ ಯೋಗ ಶಿಬಿರದ ನಿರ್ದೇಶಕರಾಗಿರುವ ಮತ್ತು ಎನ್.ಎಮ್.ಎ.ಎಮ್.ಐ.ಟಿಯ ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅಜಿತ್ ಹೆಬ್ಭಾಳೆ ಮುಖ್ಯ ಭಾಷಣಕಾರರಾಗಿ ಭಾಗವಹಿದ್ದರು. ಇವರು ವಿದ್ಯಾರ್ಥಿಗಳಿಗೆ ಯೋಗದ ಮಹತ್ವ, ಪ್ರಯೋಜನ ಹಾಗೂ ಪರಿಣಾಮಕಾರಿಯಾಗಿ ಜೀವನದಲ್ಲಿ ಅಳವಡಿಸಿಕೊಳ್ಳುವ ಕುರಿತು ಮೂವತ್ತು ನಿಮಿಷಗಳ ಪ್ರಾತ್ಯಕ್ಷಿಕ ಉಪನ್ಯಾಸವನ್ನು ನೀಡಿದರು ಹಾಗೂ ಆಲಸ್ಯ, ಉದಾಸೀನ, ಮರೆವು, ಜಡತ್ವದಂತಹ ಔಷಧಿಗಳೇ ಇಲ್ಲದ ಮಾನವನ ರೋಗಕ್ಕೆ ಯೋಗವೇ ಮದ್ದು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಎನ್.ಎಮ್.ಎ.ಎಮ್.ಐ.ಟಿಯ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶೇಖರ್ ಪೂಜರಿ ಅವರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಆರೋಗ್ಯವಂತ ಆಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿ ಯೋಗಾಭ್ಯಾಸದ ಪೂರ್ವತಯಾರಿಯನ್ನು ಕುರಿತು ಮಾರ್ಗದರ್ಶನ ನೀಡಿದರು. ಹಾಗೆಯೇ ಉಪಸ್ಥಿತರಿದ್ದ ನಿಟ್ಟೆ ಪುರುಷರ ವಿದ್ಯಾರ್ಥಿ ನಿಲಯಗಳ ಮುಖ್ಯ ನಿಲಯ ಪಾಲಕರಾದ ಡಾ.ವಿಶ್ವನಾಥ ಮಾತನಾಡಿ ಯೋಗದಿಂದ ಅತ್ಯುತ್ತಮ ಜೀವನ ಶೈಲಿ ರೂಢಿಸಿಕೊಳ್ಳಲು ಸಾಧ್ಯ ಮತ್ತು ಸಾಧನೆಗೆ ಪರಿಶ್ರಮವೊಂದೇ ದಾರಿ ಎಂದು ತಿಳಿಸಿದರು. ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಡಾ.ವೀಣಾ ಕುಮಾರಿ ಬಿ.ಕೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮಕ್ಕೆ ಆಗಮಿಸದ ಅತಿಥಿಗಳನ್ನು ಕನ್ನಡ ಉಪನ್ಯಾಸಕ ಶ್ರೀ ನಮಿರಾಜ್ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ದಿವ್ಯಾಕ್ಷ ಪ್ರಭು ವಂದಿಸಿದರು. ವಿದ್ಯಾರ್ಥಿನಿ ಕುಮಾರಿ ಮಮತ ಕಾರ್ಯಕ್ರಮವನ್ನು ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top