ಮಲ್ಲೇಶ್ವರಂ: ನೃತ್ಯಕಾಶಿ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ನೃತ್ಯಧಾರ ಸಾಂಸ್ಕೃತಿಕ ಕಾರ‍್ಯಕ್ರಮವನ್ನು ನಗರದ ಮಲ್ಲೇಶ್ವರನ ಸೇವಾಸದನ ಸಭಾಂಗಣದಲ್ಲಿ ಆಯೋಜಿಸಿಲಾಗಿತ್ತು.
ಕಾರ‍್ಯಕ್ರಮಕ್ಕೆ ಮುಖ ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಕೃತಿ ಚಿಂತಕ- ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡುತ್ತ ಭಾರತೀಯ ಕಲಾ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿರುವ ಬಹುಮುಖ ಪ್ರತಿಭಾವಂತೆ ಸೀತ ನಂದಕುಮಾರ್ ಸಾಂಸ್ಕೃತಿಕ ರಾಯಭಾರಿಯಾಗಿ ನೃತ್ಯಕಾಶಿ ಸ್ಕೂಲ್ ಆಫ್ ಡ್ಯಾನ್ಸ್ನ ಮೂಲಕ ಅನೇಕ ವಿದ್ಯಾರ್ಥಿಗಳನ್ನು ರೂಪುಗೊಳಿಸುತ್ತಿರುವುದು ಅಭಿನಂದನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಖ್ಯಾತ ಮಕ್ಕಳ ಸಾಹಿತಿ - ಹಿಲ್ ರಾಕ್ ನ್ಯಾಷನಲ್ ಪಬ್ಲಿಕ್ ಶಾಲೆಯ ನಿದೇರ್ಶಕ ಶ್ರೀ ಬಾಲ ಸುಬ್ರಹ್ಮಣ್ಯ (ಮತ್ತೂರು ಸುಬ್ಬಣ್ಣ) ಮತ್ತು ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಪ್ರೋ. ಎಂ.ಎನ್. ಚಂದ್ರಶೇಖರ್ ಉಪಸ್ಥಿತರಿದ್ದರು.
ಕಾರ‍್ಯಕ್ರಮದಲ್ಲಿ ನೃತ್ಯಕಾಶಿ ಸ್ಕೂಲ್ ಆಫ್ ಡ್ಯಾನ್ಸ್ ನಿರ್ದೇಶಕಿ ವಿದುಷಿ ಸೀತಾ ನಂದಕುಮಾರ್‌ರವರಲ್ಲಿ ತರಬೇತುಗೊಂಡ ಯುವ ವಿದ್ಯಾರ್ಥಿ ಸಮೂಹವು ವೈವಿಧ್ಯಮಯ ನೃತ್ಯಗಳನ್ನು ಪ್ರಸ್ತುತಪಡಿಸಿದರು. ಗಾಯನದಲ್ಲಿ ವಿದ್ವಾನ್ ವಿನಯ್ ಮಾನ್ಯ, ನಟುವಾಂಗದಲ್ಲಿ ವಿದುಷಿ ಸೀತಾ ನಂದಕುಮಾರ್, ಮೃದಂಗನಲ್ಲಿ ವಿದ್ವಾನ್ ಕಾರ್ತಿಕ್ ವೈಧಾರ್ತಿ, ಕೊಳಲು: ವಿದ್ವಾನ್ ದೀಪಕ್ ಹೆಬ್ಬಾರ್, ರಿದಂಪ್ಯಾಡ್‌ನಲ್ಲಿ ಮಿಥುನ್ ಶಕ್ತಿ ಸಾಥ್ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ