'ವಕೀಲರಾಗಿ ಮಹಾತ್ಮ ಗಾಂಧೀಜಿ' ವಿಶೇಷ ಉಪನ್ಯಾಸ; 'ಪಾತಕಲೋಕದಿಂದ ಗಾಂಧಿಯಾನದೆಡೆಗೆ' ಕೃತಿ ಬಿಡುಗಡೆ

Upayuktha
0

ಬೆಂಗಳೂರು: ಗಾಂಧೀಜಿಯ ಜೀವನ ಗಂಗೆಯಲ್ಲಿ ಮಿಂದು ಮೆರುಗು ಪಡೆದ ಪರಿವರ್ತಿತರಾಗಿ ಸಮಾಜದೊಂದಿಗೆ ಗುರುತಿಸಿಕೊಂಡು ಶಿಷ್ಟರಾಗಿ ರಚನಾತ್ಮಕವಾಗಿ ಬಾಳುತ್ತಿರುವವರನ್ನು ಕುರಿತಾದ ಸಾಹಿತ್ಯ ರಚನೆಯಾಗಿ ಗಾಂಧಿಯೋತ್ತರ ಸಾಹಿತ್ಯ ಎಂಬಂತೆ ಹೊರಬರಬೇಕಾಗಿದೆ ಎಂದು ಬಿ.ಹೆಚ್.ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಕೆ. ಎಸ್. ಸಮೀರಸಿಂಹ ಕರ‍್ಯಕ್ರಮ ಉದ್ಘಾಟಿಸಿ, ಡಾ. ಹೆಚ್.ಎಸ್. ಸುರೇಶ್ ರವರ ‘ಪಾತಕಲೋಕದಿಂದ ಗಾಂಧಿಯಾನದೆಡೆಗೆ’ (ಲಕ್ಷ್ಮಣ್ ತುಕಾರಾಂ ಗೋಲೆ ಪರಿವರ್ತನೆ ಕಥೆ) ಸಾಂದರ್ಭಿಕ ಕೃತಿ ಬಿಡುಗಡೆ ಮಾಡಿ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಆರ್.ವಿ. ರಸ್ತೆಯ ವಿಜಯ ಕಾಲೇಜು ಮತ್ತು ಕರ್ನಾಟಕ ಸರ್ವೋದಯ ಮಂಡಲದ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿವಸ (ರಾಷ್ಟ್ರೀಯ ಕಾನೂನು ದಿನಾಚರಣೆ) ಅಂಗವಾಗಿ ವಿಶೇಷ ಉಪನ್ಯಾಸವನ್ನು ಕಾಲೇಜು ಸಭಾಂಗಣದಲ್ಲಿ ಆಯೋಜಿಲಾಗಿತ್ತು.


ತುಮಕೂರಿನ ಹಿರಿಯ ಗಾಂಧಿ ಚಿಂತಕ ಶ್ರೀ ಲ. ನರಸಿಂಹಯ್ಯ ತೊಂಡೋಟಿ ‘ವಕೀಲರಾಗಿ ಮಹಾತ್ಮ ಗಾಂಧೀಜಿ’ ಕುರಿತು ಉಪನ್ಯಾಸ ಗಾಂಧೀ ಅದೆಷ್ಟು ಪ್ರಸ್ತುತ ಮತ್ತು ಶಕ್ತಿಶಾಲಿ ಎಂದರೆ ನಮ್ಮ ಅನೇಕ ವೈಯುಕ್ತಿಕ, ಸಾಮಾಜಿಕ ವ್ಯಸನಗಳಿಗೆ ಗಾಂಧೀ ಉತ್ತರ ನೀಡಬಲ್ಲ ದೊಡ್ಡ ಶಕ್ತಿ ಎಂದು ತಿಳಿಸಿದರು.


ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಡಾ. ಹೆಚ್. ಎಸ್. ಸುರೇಶ್ ಉತ್ತಮ ಪುಸ್ತಕವನ್ನು ಓದಿ ಅದರ ಪ್ರಭಾವಲಯಕ್ಕೆ ಒಳಗಾಗಿ, ಇನ್ನಷ್ಟು ಓದಿ ಹೆಚ್ಚು ಪ್ರಭಾವಿತರಾದವರ ಉದಾಹರಣೆಗಳಿವೆ. ಆದರೆ ವ್ಯಕ್ತಿಯ ಜೀವನ ಚರಿತ್ರೆ ಅಂದರೆ, ಆತ್ಮಕಥೆಯನ್ನು ಓದಿದ ಮಾತ್ರದಿಂದ ಪ್ರಭಾವಿತವಾದದ್ದು ಮಾತ್ರವಲ್ಲ ಪರಿವರ್ತಿತವಾದದ್ದು ಬಹಳ ಅಪರೂಪ. ಅದರಲ್ಲೂ ವಿಚಾರಣಾಧೀನ ಖೈದಿಯಾಗಿ ಶಿಕ್ಷೆಗೂ ಪಾತ್ರನಾದ 25-30ರ ತರುಣ ಅಪರಾಧಿ ಪರಿವರ್ತಿತನಾಗಿ ಸಭ್ಯ ಜೀವನ ಮಾರ್ಗವನ್ನು ಕಂಡುಕೊAಡು ಬಾಳುತ್ತಿದ್ದಾನೆ ಎಂಬುದು ನಂಬಲೇಬೇಕಾದ ಸತ್ಯ- ಪರಮ ಸತ್ಯ. ಸ್ಥಿತ್ಯಂತರ ಗತಿಯ ಸಮಾಜದಲ್ಲಿ ಒಂದು ಜೀವಂತ ಸಾಕ್ಷಿ ! ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು. , ಪ್ರಾಂಶುಪಾಲೆ ಪ್ರೊ. ಕೆ.ಎಸ್. ಶೈಲಜಾ ಅಧ್ಯಕ್ಷತೆ ವಹಿಸಿದ್ದರು, ರಾ.ಸೇ.ಯೋ ಅಧಿಕಾರಿ ಪ್ರೊ.ಎಸ್.ಎ. ಶ್ರೀಕಂಠ , ಉಪ ಪ್ರಾಂಶುಪಾಲ ಡಾ.ಡಿ.ರಾಧಾಕೃಷ್ಣ , ಕರ್ನಾಟಕ ಸರ್ವೋದಯ ಮಂಡಲ ಕಾರ್ಯದರ್ಶಿ ಡಾ. ಯ.ಚಿ. ದೊಡ್ಡಯ್ಯ, ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top