ರಂಜಿತಾ ಎಲ್ಲೂರು ಅವರಿಗೆ ಸೃಷ್ಟಿ ಕಲಾಭೂಷಣ ಪ್ರಶಸ್ತಿ ಪ್ರದಾನ

Upayuktha
0

ಬೆಂಗಳೂರು: ಸೃಷ್ಟಿಕಲಾ ವಿದ್ಯಾಲಯ ವತಿಯಿಂದ ಸೃಷ್ಟಿ ಕಲಾಭೂಷಣ ಪ್ರಶಸ್ತಿಯನ್ನು ಯುವ ಕಲಾವಿದೆ ರಂಜಿತಾ ಎಲ್ಲೂರು ಅವರಿಗೆ ಎನ್‌ಆರ್‌ ಕಾಲನಿ ಶ್ರೀರಾಮಂದಿರ ಬಳಿಯ ಪತ್ತಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.


ಯಕ್ಷಗಾನ ಕಲಿತರೆ ಆತ್ಮವಿಶ್ವಾಸ ಹೆಚ್ಚಿ ಪಾಠ, ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಯಕ್ಷಗಾನದ ನನ್ನ ಅಳಿಲ ಸೇವೆಗೆ ಶ್ರೀರಾಮನ ಅನುಗ್ರಹದಂತೆ ಸೃಷ್ಟಿ ಕಲಾವಿದ್ಯಾಲಯ ಅಭಿನಂದಿಸಿದೆ ಎಂದು ರಂಜಿತಾ ಎಲ್ಲೂರು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಮಾತನಾಡಿ, ಯಕ್ಷಗಾನ ಸಹಿತ ನಮ್ಮ ಮೂಲ ಸಂಸ್ಕೃತಿ ಯ ಕಲಾ ಪ್ರಕಾರಗಳು ಕಾಂತಾರ ಸಿನಿಮಾದಿಂದ ಮತ್ತೆ ಯುವಜನರನ್ನು ಆಕರ್ಷಿಸಲಿದೆ ಎಂದರು.


ಅಂಕಣಕಾರ, ಕಲಾವಿದ ಜಿತೇಂದ್ರ ಕುಂದೇಶ್ವರ ಮಾತನಾಡಿ, ಯಕ್ಷಗಾನ ಸಹಿತ ಮಣ್ಷಿನ ಮೂಲ ಸಂಸ್ಕೃತಿಯ ಮೇಲೆ ರಾಜಧಾನಿಯಲ್ಲಿ ಅಭಿಮಾಮ ಹೆಚ್ಚುತ್ತಿದೆ. ಯುವಜನರೂ ಸಂಸ್ಕೃತಿ, ನಾಟ್ಯ ಸಂಗೀತ ಕಲೆಯತ್ತ ಮತ್ತೆ ಆಕರ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.


ರಂಗಕರ್ಮಿ ಡಾ.ರಾಧಾಕೃಷ್ಣ ಉರಾಳ, ಸೃಷ್ಟಿ ಕಲಾವಿದ್ಯಾಲಯದ ಅಧ್ಯಕ್ಷ ಛಾಯಾಪತಿ ಕಂಚಿಬೈಲ್‌, ಗೌರವಾಧ್ಯಕ್ಷ ಶ್ರೀಕಾಂತ್‌ ಎಂ.ಜಿ., ಕದ್ರಿ ರಾಮಚಂದ್ರ ಭಟ್ ಎಲ್ಲೂರು, ವೇದಮೂರ್ತಿ ಶಿವಾನಂದ ಭಟ್ ಕೆ., ಪುಷ್ಪಲತಾ ಇದ್ದರು.


ಯಕ್ಷಗಾನ:


ಭಾಗವತ ಸುಬ್ರಾಯ ಹೆಬ್ಬಾರ್‌ ಮತ್ತು ಯಕ್ಷಗುರು ಭರತ್‌ರಾಜ್‌ ಪರ್ಕಳ ನಿರ್ದೇಶನದಲ್ಲಿ, ನಂದಗೋಕುಲ ನಿತ್ಯಾನಂದ ನಾಯಕ್‌ ಸಹನಿರ್ದೇಶನದಲ್ಲಿ ಸೃಷ್ಟಿಯ ವಿದ್ಯಾರ್ಥಿಗಳಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು.ಚಂಡೆಯಲ್ಲಿ ಶ್ರೀನಿವಾಸ್ ಪ್ರಭು ಮದ್ದಳೆಯಲ್ಲಿ ಅಕ್ಷಯ ಆಚಾರ್ಯ ಸಹಕರಿಸಿದರು.


ಮುಮ್ಮೇಳದಲ್ಲಿ ಕೀರ್ತನಾ, ಪೂಜಾ ಆಚಾರ್ಯ, ರಚನಾ, ಪೃಥ್ವಿ ಓಕುಡ, ಭೂಮಿಕಾ ಐತಾಳ್, ನೇಹಾ, ತನ್ಮಯಿ, ನಿಖಿತಾ, ಸುಮುಖ, ಪ್ರೀತಮ್, ಅಕ್ಷಯ್ ಭಾರದ್ವಾಜ್, ತೇಜಲ್, ಪ್ರತ್ಯುಷಾ, ಸಹನಾ, ಅಹನಾ, ದೀಕ್ಷಾ, ತನುಷ್, ಜೈಷ್ಣ, ಸುನಯ‌ನಾ, ಸುಹಾನ್, ಆತ್ರೇಯ ರಂಜಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top