ಉದಯೋನ್ಮುಖ ಚಿತ್ರಕಲಾವಿದ ಮಂಗಳೂರಿನ ಅಕ್ಷಯ್ ಆಚಾರ್ಯ ಪಡುಪಣಂಬೂರು

Upayuktha
0

ಅಕ್ಷಯ್‌ ಅಚಾರ್ಯರ ಈ ಚಿತ್ರಗಳೇ ಅವರ ಕಲಾಪ್ರತಿಭೆಯನ್ನು ಹೇಳುತ್ತವೆ. ಆದರೂ ಅವರ ಸಂಕ್ಷಿಪ್ತ ಪರಿಚಯವನ್ನು ನಮ್ಮ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

ಇವರು ಪಿ ಸುಧೀಂದ್ರ ಆಚಾರ್ಯ ಮತ್ತು ಶೋಭಾ ಎಸ್‌. ಆಚಾರ್ಯ ದಂಪತಿಗಳ ಪುತ್ರ. ಪಡುಪಣಂಬೂರು ನಿವಾಸಿ.

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಅಂತಿಮ ಪದವಿ ತರಗತಿಯಲ್ಲಿ ಓದುತ್ತಿದ್ದಾಗ ವೆಕ್ಟರ್‌ ಆರ್ಟ್‌ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿ ಸ್ವಯಂ ಕಲಿಕೆ ಆರಂಭಿಸಿದರು.  ಕರಾವಳಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಛಾಯಾಗ್ರಾಹಕ ಹಾಗೂ ವೆಕ್ಟರ್‌ ಆರ್ಟಿಸ್ಟ್‌ ಎಸ್‌.ಜೆ ಶಶಾಂಕ್‌ ಆಚಾರ್ಯ ಅವರ ಕಲಾಕೃತಿಗಳಿಂದ ಪ್ರೇರಣೆ ಪಡೆದು ಏಕಲವ್ಯನಂತೆ ಅಭ್ಯಾಸ ಆರಂಭಿಸಿದರು.

ತಾವು ಬಿಡಿಸಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗ ಸ್ನೇಹಿತರಿಂದ ಮಾತ್ರವಲ್ಲ, ಪರಿಚಯವಿಲ್ಲದ ನೂರಾರು ಮಂದಿಯಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದವು ಎನ್ನುತ್ತಾರೆ ಅಕ್ಷಯ್‌ ಆಚಾರ್ಯ. ಈ ಬಗೆಯ ಪ್ರೋತ್ಸಾಹವೇ ವೆಕ್ಟರ್‌ ಆರ್ಟ್‌ ವಿಭಾಗದಲ್ಲಿ ಮತ್ತಷ್ಟು ಕಲಿಕೆ, ಸಾಧನೆ ಮಾಡಬೇಕೆಂಬ ತುಡಿತಕ್ಕೆ ಬೆಂಬಲ ನೀಡಿತು. 

ವಿಜಯಾ ಕಾಲೇಜು ಮೂಲ್ಕಿಯಲ್ಲಿ ಬಿಸಿಎ (ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಶನ್ಸ್‌) ಓದಿರುವ ಇವರು ಪ್ರಸ್ತುತ ಮಂಗಳೂರಿನ ಮುಡಿಪುವಿನಲ್ಲಿರುವ ಇನ್‌ಫೋಸಿಸ್‌ನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರಕಲೆ ಅವರ ಹವ್ಯಾಸ, ಅಭಿರುಚಿ. ಅಕ್ಷಯ್‌ ಆಚಾರ್ಯ ಅವರ ಕಲಾಭಿರುಚಿ ಇನ್ನಷ್ಟು ಪಕ್ವಗೊಂಡು ಅತ್ಯುತ್ತಮ ರಚನೆಗಳು ಅವರಿಂದ ಹೊರಹೊಮ್ಮಲಿ ಎಂಬ ಹಾರೈಕೆ ನಮ್ಮದು.



ವೆಕ್ಟರ್ ಕಲಾಕೃತಿ ಎಂದರೇನು?

ವೆಕ್ಟರ್ ಕಲಾಕೃತಿಯು ವೆಕ್ಟರ್ ಗ್ರಾಫಿಕ್ಸ್‌ನಿಂದ ಮಾಡಲ್ಪಟ್ಟ ಕಲೆಯಾಗಿದೆ. ಈ ಗ್ರಾಫಿಕ್ಸ್ ಚುಕ್ಕಿಗಳು (ಬಿಂದುಗಳು), ರೇಖೆಗಳು, ವಕ್ರಾಕೃತಿಗಳು ಮತ್ತು ಗಣಿತದ ಸೂತ್ರಗಳನ್ನು ಆಧರಿಸಿದ ಆಕಾರಗಳಾಗಿವೆ. ನೀವು ವೆಕ್ಟರ್ ಇಮೇಜ್ ಫೈಲ್‌ನ ಗಾತ್ರವನ್ನು ಹಿಗ್ಗಿಸಿದಾಗ ಅದರ ರೆಸೊಲ್ಯೂಷನ್‌  ಕಡಿಮೆ ಆಗುವುದಿಲ್ಲ. ಮತ್ತು ಗುಣಮಟ್ಟದಲ್ಲಿ ಯಾವುದೇ ನಷ್ಟವಾಗುವುದಿಲ್ಲ. ಹೀಗಾಗಿ ಈ ವಿಧಾನದಲ್ಲಿ ರಚಿಸಿದ ಕಲಾಕೃತಿಯನ್ನು  ಎಷ್ಟು ದೊಡ್ಡ ಗಾತ್ರಕ್ಕೆ ಬೆಕಾದರೂ ಹಿಗ್ಗಿಸಬಹುದು ಅಥವಾ ಚಿಕ್ಕದಾಗಿ ಕುಗ್ಗಿಸಲೂ ಬಹುದು.


ವ್ಯಾಪಾರ ಕಾರ್ಡ್‌ಗಳಲ್ಲಿ ಕಂಪನಿಯ ಲೋಗೋಗಳನ್ನು ಹಾಕಲು, ಪೋಸ್ಟರ್ ವಿನ್ಯಾಸಗಳನ್ನು ರಚಿಸಲು ಮತ್ತು ಅಡೋಬ್ ಫೋಟೋಶಾಪ್‌ನಲ್ಲಿ ಫೋಟೋ-ಶಾಪಿಂಗ್ ಮಾಡುವಾಗ ಇದು ಅತ್ಯುತ್ತಮ ಸಾಧನವಾಗಿದೆ. ಅಡೋಬ್ ಇಲ್ಲಸ್ಟ್ರೇಟರ್‌ನಂತಹ ವೆಕ್ಟರ್ ಇಲ್ಲಸ್ಟ್ರೇಶನ್ ಸಾಫ್ಟ್‌ವೇರ್‌ನೊಂದಿಗೆ ಮಾಡಿದ ಯಾವುದೇ ಕಲೆಯನ್ನು ವೆಕ್ಟರ್ ಆರ್ಟ್ ಎಂದು ಪರಿಗಣಿಸಲಾಗುತ್ತದೆ.


ಹೋಲಿಕೆಯಲ್ಲಿ, ರಾಸ್ಟರ್ ಆರ್ಟ್ (ಬಿಟ್‌ಮ್ಯಾಪ್‌ಗಳು ಅಥವಾ ರಾಸ್ಟರ್ ಚಿತ್ರಗಳು ಎಂದೂ ಸಹ ಉಲ್ಲೇಖಿಸಲಾಗುತ್ತದೆ) ವರ್ಣರಂಜಿತ ಪಿಕ್ಸೆಲ್‌ಗಳನ್ನು ಬಳಸಿಕೊಂಡು ರಚಿಸಲಾಗುತ್ತದೆ. ಪಿಕ್ಸೆಲ್-ಆಧಾರಿತ ಕಲೆಯೊಂದಿಗೆ ರಾಸ್ಟರ್ ಫೈಲ್ ಅನ್ನು ಹೆಚ್ಚು ದೊಡ್ಡದಾಗಿಸಿದಾಗ, ಅಂಚುಗಳು ಮೊನಚಾದಂತೆ ಕಾಣುತ್ತವೆ ಮತ್ತು ಗುಣಮಟ್ಟವು ಕಳೆದುಹೋಗುತ್ತದೆ. ಆದರೆ, ಮುಕ್ತ ರೆಸಲ್ಯೂಶನ್‌ನ ವೆಕ್ಟರ್ ಆರ್ಟ್ ಪ್ರದರ್ಶಕಗಳು ಇದನ್ನು ವಿವಿಧ ರೂಪಗಳಲ್ಲಿ ಬಳಸಲು ಅನುಮತಿಸುತ್ತದೆ, ಸಣ್ಣ ಚಿತ್ರಣಗಳಿಂದ ಬೃಹತ್ ಜಾಹೀರಾತು ಫಲಕಗಳವರೆಗೆ ವೆಕ್ಟರ್‌ ಆರ್ಟ್‌ ಅನ್ನು ಬಳಸಬಹುದು.


ಸರಳವಾಗಿ ಹೇಳುವುದಾದರೆ, ಬಿಂದುಗಳು ಮತ್ತು ರೇಖೆಗಳನ್ನು ಬಳಸಿಕೊಂಡು ಚಿತ್ರಕಲಾಕೃತಿ ರಚಿಸುವುದನ್ನು ವೆಕ್ಟರ್ ಆರ್ಟ್ ಅನ್ನುತ್ತಾರೆ. ಕಂಪ್ಯೂಟರ್‌ ಮೌಸ್‌ ಬಳಸಿಕೊಂಡೇ ಈ ಚಿತ್ರಕಲಾಕೃತಿ ರಚಿಸಲಾಗುತ್ತದೆ.

- ಅನರ್ಘ್ಯ ಕುಳಮರ್ವ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top