ಮಲ್ಲೇಶ್ವರಂ: ನೃತ್ಯಕಾಶಿ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಇದೇ ಭಾನುವಾರ ನ.20 ರಂದು ಬೆಳಿಗ್ಗೆ 10.00ಗಂಟೆಗೆ ನೃತ್ಯಧಾರ ಸಾಂಸ್ಕೃತಿಕ ಕಾರ‍್ಯಕ್ರಮವನ್ನು ನಗರದ ಮಲ್ಲೇಶ್ವರನ ಸೇವಾಸದನ ಸಭಾಂಗಣದಲ್ಲಿ ಆಯೋಜಿಸಿಲಾಗಿದೆ.
ಕಾರ‍್ಯಕ್ರಮಕ್ಕೆ ಮುಖ ಅತಿಥಿಗಳಾಗಿ ಸಂಸ್ಕೃತಿ ಚಿಂತಕ - ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮತ್ತು ಖ್ಯಾತ ಮಕ್ಕಳ ಸಾಹಿತಿ - ಹಿಲ್ ರಾಕ್ ನ್ಯಾಷನಲ್ ಪಬ್ಲಿಕ್ ಶಾಲೆಯ ನಿದೇರ್ಶಕ ಶ್ರೀ ಬಾಲ ಸುಬ್ರಹ್ಮಣ್ಯ (ಮತ್ತೂರು ಸುಬ್ಬಣ್ಣ) ಭಾಗವಹಿಸಿಲಿದ್ದಾರೆ.
ಕಾರ‍್ಯಕ್ರಮದಲ್ಲಿ ನೃತ್ಯಕಾಶಿ ಸ್ಕೂಲ್ ಆಫ್ ಡ್ಯಾನ್ಸ್ ನಿರ್ದೇಶಕಿ ವಿದುಷಿ ಸೀತಾ ನಂದಕುಮಾರ್‌ರವರಲ್ಲಿ ತರಬೇತುಗೊಂಡ ಯುವ ವಿದ್ಯಾರ್ಥಿ ಸಮೂಹವು ವೈವಿಧ್ಯಮಯ ನೃತ್ಯಗಳನ್ನು ಪ್ರಸ್ತುತಪಡಿಸುವರು. ಗಾಯನದಲ್ಲಿ ವಿದ್ವಾನ್ ವಿನಯ್ ಮಾನ್ಯ, ನಟುವಾಂಗದಲ್ಲಿ ವಿದುಷಿ ಸೀತಾ ನಂದಕುಮಾರ್, ಮೃದಂಗದಲ್ಲಿ ವಿದ್ವಾನ್ ಕಾರ್ತಿಕ್ ವೈಧಾರ್ತಿ, ಕೊಳಲು: ವಿದ್ವಾನ್ ದೀಪಕ್ ಹೆಬ್ಬಾರ್, ರಿದಂಪ್ಯಾಡ್‌ನಲ್ಲಿ ಮಿಥುನ್ ಶಕ್ತಿ ಸಹಕರಿಸಲಿದ್ದಾರೆ.
ವಿದುಷಿ ಸೀತಾ ನಂದಕುಮಾರ್ ಕಿರುಪರಿಚಯ
ಸೀತಾ ನಂದಕುಮಾರ್ ಸಾಂಸ್ಕೃತಿಕ ಪರಿಸರದಲ್ಲಿ ಬೆಳದು ಬಂದ ಬಹುಮುಖ ಪ್ರತಿಭಾವಂತೆ, ಕಿರಿಯ ವಯಸಿನಲ್ಲೆ ಲಂಡನ್ ಭಾರತೀಯ ವಿದ್ಯಾ ಭವನದಲ್ಲಿ ಗುರು ಪ್ರಕಾಶ್ ಯಡಗುಡ್ಡೆರಿಂದ ನೃತ್ಯ ತರಬೇತಿ, ಲಂಡನ್‌ನ ಮೌಂಟ್ ಬ್ಯಾಟೆನ್ ಹಾಲ್‌ನಲ್ಲಿ ಭರತನಾಟ್ಯ ರಂಗಪ್ರವೇಶ ನಿರ್ವಹಿಸಿದ ಹೆಗ್ಗಳಿಕೆ, ಪ್ರಖ್ಯಾತ ನೃತ್ಯ ಗುರುಗಳಾದ ವಿ.ಚಿತ್ರಾ ವಿಶ್ವೇಶರನ್, ಡಾ. ಸರಸ್ವತಿ ಸುಂದರೇಷನ್, ವಿಜಯ ಮರ‍್ತಾಂಡ ರವರುಗಳಲ್ಲಿ ನೃತ್ಯಾಭ್ಯಾಸ ಮಾಡಿರುತ್ತಾರೆ.
ಚೆನ್ನೈನಲ್ಲಿ ಹಿರಿಯ ಗಾಯಕ ಡಾ. ಎಂ. ಬಾಲಮುರಳಿಕೃಷ್ಣ ರವರಿಂದ ‘ಯುವ ಕಲಾ ವಿಪಂಚೀ’ ಪುರಸ್ಕೃತರು. ಪ್ರಸ್ತುತ ಡಾ.ಶೋಭಾ ಶಶಿಕುಮಾರ್ ಮಾರ್ಗದರ್ಶನದಲ್ಲಿ ನಾಟ್ಯಶಾಸ್ತ್ರ ಮತ್ತು ಕರಣಗಳನ್ನು ಅಧ್ಯಯನ ಮಾಡುತ್ತ, 2009ರಲ್ಲಿ ಸುಧಾಮೂರ್ತಿರವರಿಂದ ಶುಭಾರಂಭಗೊಂಡ ನೃತ್ಯಕಾಶಿ ಸ್ಕೂಲ್ ಆಫ್ ಡ್ಯಾನ್ಸ್ ಮೂಲಕ ಅನೇಕ ವಿದ್ಯಾರ್ಥಿಗಳನ್ನು ರೂಪುಗೊಳಿಸುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ