ನ.20ರಂದು ಲೇಖಕಿ ಗಿರಿಜಾ.ಎಸ್ ದೇಶಪಾಂಡೆ ಅವರ 'ಸಂಸ್ಕೃತಿ' ಕೃತಿ ಲೋಕಾರ್ಪಣೆ

Upayuktha
0

ಚಾಮರಾಜಪೇಟೆ: ಸಂಸ್ಕೃತಿ ಎಂಬ ಕೃತಿ ಸಂದರ್ಭಕ್ಕೆ ಅನುಸಾರವಾಗಿ ಬರೆದ ಲೇಖನಗಳನ್ನು ಒಳಗೊಂಡಿದೆ. ಹಲವಾರು ಸಂಸ್ಕೃತಿಯ ಆಗರವಾಗಿರುವ ನಮ್ಮ ನಾಡಿನಲ್ಲಿ ಆಚರಿಸುವ ದೀಪಾವಳಿ, ಮಹಾನವಮಿ, ಸಂಕ್ರಾಂತಿ, ಯುಗಾದಿ ಮುಂತಾದ ಪ್ರಮುಖ ಹಬ್ಬಗಳ ಮಹತ್ವ ಅವುಗಳ ಪೌರಾಣಿಕ, ಧಾರ್ಮಿಕ, ಸಾಮಾಜಿಕ ಹಿನ್ನೆಲೆ, ಆಚರಿಸುವ ರೀತಿ, ಅದರಿಂದಾಗುವ ಪ್ರಯೋಜನ ಕುರಿತು ಮಾಹಿತಿ ಪೂರ್ಣವಾದ ವಿವರಣೆಗಳು ಕೃತಿಯಲ್ಲಿವೆ. ಬೇರೆ ಬೇರೆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳನ್ನು ಒಂದುಗೂಡಿಸಿ "ಸಂಸ್ಕೃತಿ" ಹೆಸರಿನ ಪುಸ್ತಕ ಪ್ರಕಟಿಸುತ್ತಿರುವದು ಸಂತಸ ಮತ್ತು ಹೆಮ್ಮೆಯ ಸಂಗತಿ.


ನಾಡಿನ ಸಂಸ್ಕೃತಿಯ ರಾಯಭಾರಿಗಳಾದ ಮಹಿಳೆಯರಿಗೆ ನಮ್ಮ ಹಬ್ಬಗಳ ವೃತಾಚರಣೆ ಕುರಿತು ಮಾಹಿತಿ ಒಂದೇಕಡೆ ಸಿಗುವಂತೆ ಮಾಡಿದ ಕಾಯಕ ಸ್ತುತ್ಯಾರ್ಹ. ಗಿರಿಜಾ.ಎಸ್. ದೇಶಪಾಂಡೆಯವರು ಸದಾ ಕ್ರಿಯಾಶೀಲರು, ಬದುಕನ್ನು ಬಂದಂತೆ ಸ್ವೀಕರಿಸಿ ಅನುಭವಿಸಿ ಆನಂದಿಸುವ ಗುಣವುಳ್ಳವರು, ಎಲ್ಲರೊಂದಿಗೆ ಆತ್ಮೀಯರಾಗಿ ಬೆರೆಯುವ ಸ್ನೇಹಜೀವಿಯಾದ ಅವರ ಮತ್ತಷ್ಟು ಕೃತಿಗಳು ಪ್ರಕಟವಾಗಲಿ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಶಿವಾನಂದ. ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.


ದಿ. 20-11-2022 ರಂದು ಬೆ.11-30ಕ್ಕೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮಾತಿನಮನೆ ಸಭಾಂಗಣದಲ್ಲಿ ನಡೆಯುವ ಸಮಾನ ಚಿಂತಕರ ಸಮ್ಮೇಳನದಲ್ಲಿ ಲೋಕಾರ್ಪಣೆಯಾಗಲಿದೆ. ಲೇಖಕ ರೋಹಿತ್ ಚಕ್ರತೀರ್ಥ ಬಿಡುಗಡೆ ಮಾಡಲಿದ್ದಾರೆ. ಸಂಸ್ಕೃತಿ ಪ್ರತಿಪಾದಕ ವಿದ್ವಾನ್ ನವೀನ ಶಾಸ್ತ್ರೀ ಪುರಾಣಿಕ ಅವರಿಂದ ಪುಸ್ತಕಾವಲೋಕನ. ಲೇಖಕ ಹನುಮಂತ. ಮ. ದೇಶಕುಲಕರ್ಣಿ, ಸಹನಾ ಪ್ರಕಾಶನದ ಆರ್. ಶ್ರೀನಿವಾಸ ಉಪಸ್ಥಿತರಿರಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತಿನ ಮನೆ ಸಂಸ್ಥಾಪಕ ರಾ.ಸು. ವೆಂಕಟೇಶ ವಹಿಸಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top