ಅದಿತಿ ಗ್ಯಾಲರಿಯಲ್ಲಿ ದೃಢವೃತ ಗೋರಿಕ್ ಅವರ ದಿವ್ಯಕಲಾ ಅನಾವರಣ

Upayuktha
0


ಉಡುಪಿ:ಜಿಲ್ಲೆಯ ಕುಂಜಿಬೆಟ್ಟಿನ ಅದಿತಿ ಗ್ಯಾಲರಿಯಲ್ಲಿ ಅಮೇರಿಕಾ ಸಂಜಾತ ದೃಢವೃತ ಗೋರಿಕ್ ಅವರ  “ದಿವ್ಯಕಲಾ” ಕಲಾ ಪ್ರದರ್ಶನ ನ. 3 ರಂದು ಅನಾವರಣಗೊಂಡಿತು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಡೀನ್ ಡಾ. ಶರತ್ ರಾವ್ ಉದ್ಘಾಟಿಸಿದರು.


ಆಹಾರ ಎನ್ನುವ ಶಬ್ದ ಕೇವಲ ಜಠರಾಗ್ನಿಯನ್ನು ತಣಿಸಿದರೆ ಸಾಲದು. ನಾವು ನೋಡುವ ಪ್ರತಿ ದೃಶ್ಯವೂ ಆಹಾರವಾಗಬೇಕು. ಇದರಿಂದ ಮಾನವನ ಆಧ್ಯಾತ್ಮಿಕ ಪ್ರಗತಿಯೂ ಸಾಧ್ಯವಾಗುತ್ತದೆ ಎಂದು ಅದಮಾರು ಮಠದ ಶ್ರೀ ಈಶಪ್ರಿಯ ಸ್ವಾಮೀಜಿ ತಮ್ಮ ಆಶೀರ್ವವಚನದಲ್ಲಿ ತಿಳಿಸಿದರು.


ಅದಿತಿ ಗ್ಯಾಲರಿ ಆಡಳಿತ ವಿಶ್ವಸ್ಥರಾದ ಡಾ. ಕಿರಣ್ ಆಚಾರ್ಯ ನವೆಂಬರ್ 4,5 ಮತ್ತು 6 ರಂದು ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಕಲಾ ಪ್ರದರ್ಶನದ ವೀಕ್ಷಣೆಗೆ ಅವಕಾಶವಿದೆ ಎಂದು ಮಾಹಿತಿ ನೀಡಿದರು. ವಿಶ್ವಸ್ಥರಾದ ವಿದುಷಿ ಪ್ರತಿಮಾ ಆಚಾರ್ಯ ವಂದಿಸಿದರು. ವಿಶ್ವಸ್ಥರಾದ ಆಸ್ಟ್ರೊ ಮೋಹನ್ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
To Top