ಆತ್ಮವಿಶ್ವಾಸ ಮತ್ತು ಉತ್ಸಾಹ ಎಂದಿಗೂ ಕಳೆದುಕೊಳ್ಳಬಾರದು: ಶ್ರೀಮುಖ

Upayuktha
0

ಪುತ್ತೂರು: ವಿದ್ಯಾರ್ಥಿಗಳು ಸದಾ ಉತ್ಸಾಹಿಗಳಾಗಿರುವುದರೊಂದಿಗೆ, ಆತ್ಮವಿಶ್ವಾಸವನ್ನು ತಮ್ಮೊಳಗೆ ಅಳವಡಿಸಿಕೊಳ್ಳಬೇಕು. ಅಂತೆಯೇ ಯಾವತ್ತೂ ಕೂಡ ನಾನು ಒಬ್ಬಂಟಿ, ನಾನೇನೂ ಮಾಡಲಾರೆ ಎಂದು ಕುಗ್ಗಲೂ ಬಾರದು . ಸದಾ ಮುಂದೆ ಸಾಗುತ್ತಲೇ ಇರಬೇಕು ಆ ಸಂಧರ್ಭದಲ್ಲಿ ಅನೇಕರು ನಮ್ಮೊಂದಿಗೆ ಕೈಜೋಡಿಸುತ್ತಾ ಹೋಗುತ್ತಾರೆ. ಅದರೊಂದಿಗೆ ಅವಕಾಶಗಳು ಲಭಿಸುವಾಗ ಸರಿಯಾಗಿ ಬಳಸಿಕೊಳ್ಳಬೇಕು . ಇತರರ ಕುರಿತಾಗಿ ಯೋಚನೆ ಮಾಡಿಕೊಂಡು ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು ಎಲ್ಲಾ ವಿಷಯಗಳಲ್ಲೂ ಭಾಗವಹಿಸಿ, ನಿಮಗೆ ಸೂಕ್ತ ಎಂದು ಅನಿಸುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಇಷ್ಟು ಮಾತ್ರವಲ್ಲದೆ ಗೆಲ್ಲುವ ಹಸಿವು ಮನದಲ್ಲಿ ಸದಾ ಜಾಗೃತವಾಗಲಿ. ಆದರೆ ಮೊದಲು ಅಭ್ಯಾಸ ಬಹಳ ಮುಖ್ಯ.ಇದರೊಂದಿಗೆ ಸದಾ ಹೊಸತನದ ಕಡೆ ಗಮನವನ್ನು ನೀಡಬೇಕು. ಒಂದು ಸಲ ಸೋತೆಂದು ಕುಗ್ಗಬಾರದು, ಇತರರು ನಮ್ಮ ಸೋಲನ್ನು ಆಡಿಕೊಳ್ಳುತ್ತಾರೆ ಎಂದು ಸುಮ್ಮನೆ ಕೂರಬಾರದು. ಆ ಸೋಲನ್ನು ಕಂಡು ಇತರರು ಏನೆಂದುಕೊಳ್ಳುತ್ತಾರೆ ಎಂದು ಹಿಂಜರಿಯಬಾರದು ಎಂದು ಸುಳ್ಯದ ಬುಟ್ಟಿ ಸ್ಟೋರ್.ಕಾಂ ಹಾಗೂ ಸಿ.ಕೆ" ಯ ವಾಣಿಜ್ಯೋದ್ಯಮಿ ಶ್ರೀಮುಖ ಹೇಳಿದರು.


ಅವರು ಇಲ್ಲಿನ ಪುತ್ತೂರು ವಿವೇಕಾನಂದ ಕಲಾ,ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ಆಶ್ರಯದಲ್ಲಿ ನಡೆದ ಜಿ.ಡಿ.ಎಸ್. ಸಿ ಹಾಗೂ ಐಟಿ ಕ್ಲಬ್ ಉದ್ಗಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ, ಕಾಲೇಜಿನ ಪ್ರಾಂಶುಪಾಲ ಪ್ರೊ ವಿಷ್ಣು ಗಣಪತಿ ಭಟ್ ಮಾತನಾಡಿ, ಪ್ರತಿಯೊಬ್ಬರೂ ಕೂಡ ವಿಭಾಗದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ಸಾಧ್ಯವಾದಷ್ಟು ಉಪನ್ಯಾಸಕರ ಮಾರ್ಗದರ್ಶನವನ್ನು ಸರಿಯಾಗಿ ಪಡೆದುಕೊಂಡು ಫಲಾನುಭಾವುಗಳಾಗಬೇಕು ಎಂದು ಶುಭ ಹಾರೈಸಿದರು.


ವೇದಿಕೆಯಲ್ಲಿ ಕಾಲೇಜಿನ ಬಿಸಿಎ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್, ಜಿ.ಡಿ.ಎಸ್.ಸಿ ಯ ಲೀಡ್ ಪ್ರತೀಕ್ಷ್ ಶೆಟ್ಟಿ, ಅಧ್ಯಕ್ಷೆ ಪೂರ್ಣಾ, ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಗುರುಕಿರಣ್, ಕಾಲೇಜಿನ ಐ ಟಿ ಕ್ಲಬ್ ನ ಸಂಚಾಲಕರಾದ ಭಾನುಪ್ರಿಯ ಉಪಸ್ಥಿತರಿದ್ದರು.


ಬಿಸಿಎ ವಿದ್ಯಾರ್ಥಿನಿಯರಾದ ವಿಭಾ ಶ್ರೀ ಪ್ರಾರ್ಥಿಸಿದರು. ಪೂರ್ಣಾ ಸ್ವಾಗತಿಸಿ, ಅನುಷಾ ವಂದಿಸಿದರು. ಅಮೃತ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top