32 ಶಾಖೆಗಳಲ್ಲಿ ಏಕಕಾಲದಲ್ಲಿ ಆಚರಣೆ
ಬೆಂಗಳೂರು: ನವೆಂಬರ್ 14ರ ಮಕ್ಕಳ ದಿನಾಚರಣೆಯ ಪ್ರಯುಕ್ತ ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮೋಜಿನ ಮೇಳವು ರವಿವಾರದಂದು ನಡೆಯಿತು. ಭಾರತದ ಹತ್ತು ನಗರಗಳಲ್ಲಿ, ಒಟ್ಟು 32 ಆರ್ಕಿಡ್ಸ್ ಶಾಖೆಗಳಲ್ಲಿ ಯಶಸ್ವಿಯಾಗಿ ನಡೆದ ಮೋಜಿನ ಮೇಳವು, ಪೋಷಕರಿಗೆ ಬಾಲ್ಯದ ದಿನಗಳನ್ನು ಮೆಲುಕು ಹಾಕಲು ವೇದಿಕೆ ಕಲ್ಪಿಸಿತು.
80 ಹಾಗೂ 90 ರ ದಶಕದ ಆಟಗಳನ್ನು ಆಡುವುದರ ಮೂಲಕ ಪೋಷಕರು ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡರು. ಮ್ಯಾಜಿಕ್ ಶೋ, ಸಂಗೀತ ಖುರ್ಚಿ, ರಿಂಗ್ ಟಾಸ್, ಸೇರಿದಂತೆ ಪೋಷಕರು ಹಾಗೂ ಮಕ್ಕಳನ್ನು ಮನರಂಜಿಸುವ ಹಲವು ಆಟಗಳು, ಚಟುವಟಿಕೆಗಳು ನಡೆದವು.
ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಬೆಂಗಳೂರಲ್ಲಿರುವ ಆರ್ಕಿಡ್ಸ್ ನ ಯಲಹಂಕ, ನಾಗರಭಾವಿ, ಜಾಳಹಳ್ಳಿ, ಸರ್ಜಾಫುರ, ಸಹಕಾರನಗರ, ಜೆಪಿನಗರ, ಬನ್ನೇರುಘಟ್ಟ ಶಾಖೆಗಳಲ್ಲಿ ಮೋಜಿನ ಮೇಳ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮ ನಡೆದ 32 ಶಾಖೆಗಳಲ್ಲಿ ಸುಮಾರು 25000ಕ್ಕೂ ಹೆಚ್ಚು ಮಕ್ಕಳು ಹಾಗೂ ಪೋಷಕರು ಭಾಗವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ