ಅಕ್ಕಿ ಆಲೂರಿನ ಮೈತ್ರಿ ಬ್ಲಡ್ ಆರ್ಮಿ ವತಿಯಿಂದ ಸುರಳೇಶ್ವರ ಗ್ರಾಮದಲ್ಲಿ 71ನೇ ರಕ್ತದಾನ ಶಿಬಿರ
ಅಕ್ಕಿ ಆಲೂರು: ನಗರ ಸಮೀಪದ ಸುರಳೇಶ್ವರ ಗ್ರಾಮದಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಯಿತು. ಈ ಶಿಬಿರದಲ್ಲಿ 43 ಜನರು ರಕ್ತ ಸೈನಿಕರಾದರು. ಅದರಲ್ಲಿ 28 ಜನರು ಮೊದಲ ಬಾರಿ ರಕ್ತ ಸೈನಿಕರಾದರು. 25 ಬಾರಿ ಜೀವದಾನ ಮಾಡಿದ ರಕ್ತಸೈನಿಕ ಗುಡ್ಡಪ್ಪ ಎಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಕ್ತದಾನ ಶಿಬಿರದ ಜೊತೆಗೆ ಹಲವರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಒಟ್ಟು ಜನಸಂಖ್ಯೆಯ 07% ಜನರು ರಕ್ತದಾನ ಮಾಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ರಕ್ತಸೈನಿಕರ ತವರೂರು ಎಂದೇ ಹೆಸರುವಾಸಿಯಾಗಿರುವ ಅಕ್ಕಿ ಆಲೂರಿನ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ವತಿಯಿಂದ ನಡೆದ 71ನೇ ರಕ್ತದಾನ ಶಿಬಿರ ಯಶಸ್ವಿಯಾಗಿದೆ ಎಂದು ಡಾ. ಕರಬಸಪ್ಪ ಗೊಂದಿ ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ