ಮಕ್ಕಳು LKG ಇದ್ದಾಗಿನಿಂದ ಕಾಲೇಜ್ ಬರೋವರೆಗೂ ಅವರ ಶಾಲೆಗೆ ಆಗಾಗ ಹೋಗಿ ನಮ್ ಮಗು ಹೇಗೆ ಓದ್ತಿದೆ. ಶಾಲೆಯಲ್ಲಿ ಎಲ್ರ ಜೊತೆ ಹೇಗಿದೆ, ಮಗುವಿಗೆ ಯಾರಿಂದ ಏನಾದ್ರು ತೊಂದ್ರೆ ಆಗ್ತಿದೆನಾ, ಮತ್ತೆ ಶಾಲೆಯಲ್ಲಿ ಇರುವ ಪ್ರತಿ ಪೇರೆಂಟ್ಸ್ ಮೀಟಿಂಗ್ ಅಟೆಂಡ್ ಆಗೋದು ಹೀಗೆ ಚಿಕ್ಕ ಚಿಕ್ಕ ಕಾರಣಕ್ಕೂ ಶಾಲೆಗೆ ಹೋಗೋ ನಾವು ಅದೇ ಅವರು ಕಾಲೇಜ್ ಬಂದಕೂಡಲೇ ಆ ಕಡೆ ತಲೆ ಕೂಡ ಹಾಕಲ್ಲ..
ಕೈಯಲ್ಲಿ ಒಂದು ಮೊಬೈಲ್, ಓಡಾಡೋಕೆ ಗಾಡಿ, ವಿಚಿತ್ರ ಬಟ್ಟೆಗಳು, "ಅಯ್ಯೋ ನಾವು ಚಿಕ್ಕೋರಿದ್ದಾಗ ತುಂಬಾ ಬಡತನ, ಏನು ಕಾಣಲಿಲ್ಲ ನಾವು. ನನ್ ಕಷ್ಟ ನನ್ ಮಗುವಿಗೆ ಬೇಡ ಅಪ್ಪ" ಅಂತ ಕೇಳ್ ಕೇಳಿದಂಗೆ ದುಡ್ಡು ಕೊಟ್ಟು, ಅವರು ತಡವಾಗಿ ಬಂದಾಗ ಸರಿಯಾಗಿ ವಿಚಾರಿಸದೆ ಅವರ ಮಾತನ್ನೇ ಸತ್ಯ ಅಂತ ನಂಬಿ, ಅವರ ಮೇಲಿರುವ ಪ್ರೀತಿಯಿಂದ ಅದೇನೇ ತಪ್ಪು ಮಾಡಿದ್ರು ಒಬ್ಬರಿಂದ ಒಬ್ಬರು ಮುಚ್ಚಿಟ್ಟು, ಒಬ್ಬರು ಬೈಯುವಾಗ ಮತ್ತೊಬ್ಬರು ಸಪೋರ್ಟ್ ಮಾಡಿ, ಅವರ ತಪ್ಪುಗಳಿಗೆ ಆಗಿಂದಾಗಲೇ ಶಿಕ್ಷೆ ನೀಡದೆ ಅವರನ್ನು 50% ಹಾಳು ಮಾಡೋದೇ ನಾವು. ಕೆಲವು ಮಕ್ಕಳು ಇದನ್ನು ದುರುಪಯೋಗ ಪಡಿಸ್ಕೊದೇನೋ ಇರ್ಬಹುದು. ಆದ್ರೆ ಅದೆಷ್ಟೋ ಮಕ್ಕಳು ನಾವು ತೋರಿಸುವ ಅತಿಯಾದ ಪ್ರೀತಿಯಿಂದ ಹಾಳಾಗ್ತಿರೋದಂತೂ ನಿಜ... ಇನ್ನು ಕಾರಣ ನೋಡ್ತಾ ಹೋದ್ರೆ ಸಾಹುವಾಸ ದೋಷ, ಮನೆಯಲ್ಲಿ ಒಳ್ಳೆಯ ಸಂಸ್ಕಾರದ ಕೊರತೆ... ಹೀಗೆ ಎಷ್ಟೆಲ್ಲಾ ತಪ್ಪು ನಮ್ಮಲ್ಲೇ ಇಟ್ಕೊಂಡು ಈ ರೀತಿಯ ಘಟನೆ ಆದಾಗ ಅತ್ರೆ ಹೋದವರು ಹಿಂತಿರುಗಿ ಬರುವರೇ. ಇದ್ರಲ್ಲಿ ತಪ್ಪು ಯಾರದ್ದೇ ಇರಲಿ ಅನುಭವಿಸಿದ್ದು ಮಾತ್ರ ಹೆಣ್ಣು ಮಗು ಮತ್ತೆ ಹೆತ್ತವರು ಅಲ್ವೇ. ಹೀಗಾನಾದ್ರು ಘಟನೆ ಸಂಭಾವಿಸಿದಾಗ ನಾವೆಲ್ಲ ಹೊಳೋದು ಸಮಾಜ ಸರಿ ಇಲ್ಲ, ವ್ಯವಸ್ಥೆ ಸರಿ ಇಲ್ಲ, ಸರ್ಕಾರ ಸರಿ ಇಲ್ಲ, ಬದಲಾಗಬೇಕಿದೆ ಎಲ್ಲಾ ಅಂತ ಅಲ್ವಾ..? ಹೌದು ಬದಲಾವಣೆಯ ಅವಶ್ಯಕತೆ ಇದೆ.. ಆ ಬದಲಾವಣೆ ನಮ್ಮಿಂದಲೇ, ನಮ್ಮ ಮನೆ ಮಕ್ಕಳಿಂದಲೇ ಶುರುವಾಗಲಿ...
ಈ ನಾಡಿನಲ್ಲಿ ಅತ್ಯಾಚಾರಕ್ಕೆ ಒಳಗಾಗುವವರು ಹೆಚ್ಚಾಗಿ 18 ವರ್ಷದ ಒಳಗಿನವರೇ. ಅತ್ಯಾಚಾರಕ್ಕೆ ಒಳಗಾಗುವ ಪ್ರತಿ ಹತ್ತು ಜನರಲ್ಲಿ ಒಬ್ಬರು 14 ವರ್ಷದ ಒಳಗಿವರು ಎಂಬುದೂ ಅತ್ಯಂತ ನೋವಿನ ಸಂಗತಿ.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಭಾರತಕ್ಕೆ ಜಗತ್ತಿನಲ್ಲಿ ಮೂರನೇ ಸ್ಥಾನವಿದೆ. ಹಾಗಾದರೆ ಮೊದಲ ಸ್ಥಾನದ ‘ಗೌರವ’ವನ್ನು ಪಡೆದ ಮಹಾನ್ ರಾಷ್ಟ್ರ ಯಾವುದು? ಅನುಮಾನವೇ ಬೇಡ, ಅದು ಅಮೆರಿಕ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿರುವ ಸಾಂಪ್ರದಾಯಿಕ ಕಟ್ಟುಪಾಡುಗಳು, ಕುಟುಂಬ ವ್ಯವಸ್ಥೆಯಲ್ಲಿನ ಉಸಿರು ಬಿಗಿಹಿಡಿದು ಬದುಕಬೇಕಾದ ಪರಿಸ್ಥಿತಿ, ಲೈಂಗಿಕ ವಿಚಾರಗಳಲ್ಲಿನ ಮುಚ್ಚುಮರೆ ಈ ಅತ್ಯಾಚಾರ ಪ್ರಕರಣಗಳ ಹೆಚ್ಚಳದ ಹಿಂದೆ ಕೆಲಸ ಮಾಡುತ್ತಿರಬಹುದೇ ಎಂಬ ವಿಶ್ಲೇಷಣೆಗೆ ಹೆಚ್ಚು ಬೆಲೆ ಇದ್ದಂತಿಲ್ಲ. ಯಾಕೆಂದರೆ ಅಮೆರಿಕವನ್ನು ಮುಕ್ತ ರಾಷ್ಟ್ರ ಎಂದು ಹೇಳಲಾಗುತ್ತಿದೆ. ಅಲ್ಲಿ ಲೈಂಗಿಕ ತಿಳುವಳಿಕೆಯೂ ಹೆಚ್ಚು. ಮಕ್ಕಳು ಅಲ್ಲಿ ಈ ವಿಚಾರದಲ್ಲಿ ಮುಗ್ಧರಾಗಿರುವುದಿಲ್ಲ. ಆದರೂ ಅಲ್ಲೇಕೆ ಹೆಚ್ಚು ಅತ್ಯಾಚಾರಗಳು ನಡೆಯುತ್ತಿವೆ? ಇದಕ್ಕೆ ಒಂದಿಷ್ಟು ಅಧ್ಯಯನದ ಅವಶ್ಯಕತೆ ಇದೆ.
ರಾಜಕಾರಣಿಗಳು,ಪ ತ್ರಕರ್ತರು, ಸಾಹಿತಿಗಳು, ಬುದ್ಧಿಜೀವಿಗಳು ಹೀಗೆ ಅನೇಕರು ಈಗಾಗಲೇ ಅತ್ಯಾಚಾರ ಪ್ರಕರಣಗಳ ಆರೋಪ ಹೊತ್ತು ಜೇಲು ಸೇರಿದ್ದಾರೆ. ಇನ್ನು ಮಕ್ಕಳಿಗೆ ಒಳ್ಳೆ ದಾರಿಯಲ್ಲಿ ನಡೆಸುವ ಶಿಕ್ಷಕರು ಅವರೇ ಈಗ ಹೆಚ್ಚು ಸುದ್ದಿಯಲ್ಲಿರುವವರು. ಏನೂ ಅರಿಯದ, ತೀರ ಎಳೆಯ ಮಕ್ಕಳ ಮೇಲೆ ರಾಕ್ಷಸರಂತೆ ಎರಗುವ ಕೆಲವು ಶಿಕ್ಷಕರು ಇಲ್ಲದ ಶಿಕ್ಷಣ ವ್ಯವಸ್ಥೆ ಎಲ್ಲಿದೆ? ಇನ್ನು ಪೊಲೀಸರು, ಇವರನ್ನು ಕಂಡರೇ ಜನ ಬೆಚ್ಚಿಬೀಳುತ್ತಾರೆ ಅದಕ್ಕೆ ಕಾರಣ ಎಲ್ರಿಗೂ ತಿಳಿದೇ ಇದೆ. ಇನ್ನು ಘಾಡವಾಗಿ ಹೋದರೆ ಧಾರ್ಮಿಕ ಮುಖಂಡರು, ಅಧ್ಯಾತ್ಮ, ಯೋಗಿಗಳು, ಮಠಾಧೀಶರು. ಇಂಥ ಬಹುಪಾಲು ಆಶ್ರಮಗಳು ರಾಸಲೀಲೆಯ ಕೇಂದ್ರಗಳಲ್ಲವೇ. ಬುದ್ದಿ ಹೇಳುವ ಜನರೇ ಮಣ್ಣು ತಿನ್ನೋ ಕೆಲಸ ಮಾಡಿದಾಗ ಇವರೆಗೆ ತಿದ್ದೋರ್ಯಾರು. ಇಂಥ ಕವಿ ತೊಟ್ಟ ಕಾಮಿ ಗುರುಗಳ ಹಿಂದೆ ರಾಜಕಾರಣಿಗಳ, ಸಿನಿಮಾ ನಟನಟಿಯರು ಬೆನ್ನಟ್ಟಿ ಹೋಗುತ್ತಿದ್ದಾರಲ್ಲ ಇಂತವರಿಗೆ ತಿಳಿ ಹೇಳುವರರು?
ಎಷ್ಟೋ ಅತ್ಯಾಚಾರಗಳು ಕಣ್ಮರೆಯಾಗಿ ಹೋಗುತ್ತವೆ. ಆದರೆ, ಕೆಲವು ಮಾತ್ರ ಕಣ್ಣಿಗೆ ಬೀಳುತ್ತವೆ. ಇಡೀ ಸಮಾಜವೇ ಈ ಅಮಾನವೀಯ ಘಟನೆಯ ವಿರುದ್ಧ ದನಿಯೆತ್ತುತ್ತ ದೆಂದರೆ, ಕೆಲ ತಥಾಕಥಿ ಸಮಾಜ ಸುಧಾರಕರು, ಕೂಗುಮಾರಿಗಳೂ ಹೋರಾಟಕ್ಕಿಳಿಯ ಬೇಕೆಂದರೆ ಒಂದೋ ಆರೋಪಿತರಲ್ಲಿ ಒಬ್ಬನಾ ದರೂ ಮುಸ್ಲಿಮನಿರಬೇಕು, ಇಲ್ಲವೇ ಕೃತ್ಯ ಅತ್ಯಂತ ಕ್ರೂರವಾಗಿರಬೇಕು, ಆ ಮಹಿಳೆ ಪಡಬಾರದ ಹಿಂಸೆಯನುಭವಿಸಿ ಸಾವಿಗೀಡಾಗಿರಬೇಕು.. ಇದ್ಯಾವುದೂ ಆಗಿಲ್ಲದಿದ್ದರೆ ದೌರ್ಜನ್ಯಕ್ಕೊಳಗಾದವಳು ಸಮಾಜದ ಪ್ರಬಲ ವರ್ಗಗಳಿಗೆ ಸೇರಿರಬೇಕು. ಆಗಂತೂ ಎಲ್ಲರ ಗಮನ ಆ ಕಡೆ ಹರಿಯುವುದು ಖಚಿತ. ಹಾಗಲ್ಲದಿದ್ದರೆ ಅತ್ಯಾಚಾರ ವಿಷಯವೇ ಅಲ್ಲವೆಂಬಂತಾಗಿರುವುದು ನಮ್ಮ ದೇಶದ ದುರಂತ. ದಿನ ಕಳೆದಂತೆ ರಾಜಕಾರಣಿಗಳು ನೀಡುವ ಪೊಳ್ಳು ಭರವಸೆಗಳು ಹೆಚ್ಚುತಿವೆ ವಿನಃ ಅತ್ಯಾಚಾರ ಮಾತ್ರ ಕಡಿಮೆ ಆಗಲೇ ಇಲ್ಲ.
ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳ ಮೇಲಷ್ಟೇ ಅಲ್ಲ ಸ್ವಂತ ತಾವೇ ಹುಟ್ಟಿಸಿದ ಮಕ್ಕಳ ಮೇಲೆ ಕೂಡ, ಸುಶಿಕ್ಷಿತ ತಂದೆಯೇ ಅತ್ಯಾಚಾರ ಮಾಡುತ್ತಿದ್ದಾನೆಂಬುದನ್ನು ಪತ್ರಿಕೆಗಳಲ್ಲಿ ಓದಿದಾಗ, ಕೇಳಿದಾಗ ಇದಕ್ಕಿಂತ ಹೆಚ್ಚಿನ ಕೆಟ್ಟ ಕಾಲ ಇನ್ನಾವುದಾದರೂ ಇದೆಯೇ ಎಂದೆಂಸುತ್ತೆ.
ಸಣ್ಣವರು-ದೊಡ್ಡವರು, ಮಕ್ಕಳು, ಅಕ್ಕ-ತಂಗಿಯರು, ತಾಯಂದಿರು, ಗುರು-ಹಿರಿಯರೆಂಬ ಗೌರವ ಭಾವನೆ ಇಲ್ಲ. ತೀರಾ ಸಣ್ಣ ಕಾರಣಕ್ಕಾಗಿ, ಹುಡುಗಿಯರ ಮೇಲೆ ಸೇಡು ತೀರಿಸಿಕೊಳ್ಳಲು ಅತ್ಯಾಚಾರ ನಡೆಯುವುದೂ ಇದೆ. ಇಂಥ ಸ್ಥಿತಿಗೆ ಕಾರಣ ಏನು? ಮಕ್ಕಳನ್ನು ಹೇಗೆ ಬೆಳೆಸಬೇಕು? ಸಮಾಜದ ಮುಂದೆ ಇಂಥ ಪ್ರಶ್ನೆಗಳು ಸವಾಲಾಗಿ ನಿಂತಿವೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ವೇಷ ಭೂಷಣ, ಆಹಾರ ಪದ್ಧತಿ, ಸಿನಿಮಾ ಮತ್ತು ಟಿವಿ ಸಂಸ್ಕೃತಿ, ಬಿಂದಾಸ್ ಜೀವನ ಶೈಲಿ ಎಲ್ಲವೂ ಇಂಥ ಕೃತ್ಯಕ್ಕೆ ಕೊಡುಗೆ ನೀಡುತ್ತವೆ ಎಂಬುದೇನೋ ನಿಜ. ಆದರೆ ಇದೆಲ್ಲವನ್ನೂ ಮೀರಿದ ಮನೋಭಾವದ ವಿಕೃತಿ ಇಲ್ಲಿ ಕೆಲಸ ಮಾಡುತ್ತಿದೆ. ವಿಶ್ವಾದ್ಯಂತ ಅತ್ಯಾಚಾರದ ಪಿಡುಗು ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ.
ಬಹುಶಃ ‘ಅತ್ಯಾಚಾರ’ ಪದವಿಲ್ಲದ ಮಾಧ್ಯಮಗಳೇ ಇಲ್ಲ. ಅದು ದಿನಪತ್ರಿಕೆಗಳಾಗಲೀ, ಸುದ್ದಿವಾಹಿನಿಗಳೇ ಆಗಿರಲಿ, ಸಾಮಾಜಿಕ ಜಾಲತಾಣಗಳಲ್ಲಿಯೇ ಇರಲಿ. ನಿತ್ಯ ರಾರಾಜಿಸುವುದು ಅತ್ಯಾಚಾರ ಪ್ರಕರಣಗಳೇ! ತೀರಾ ಅಸಹ್ಯವೆನಿಸುವುದು, ತಂದೆಯೇ ಅಪ್ರಾಪ್ತ ಮಗುವಿನ ಮೇಲೆ ಅತ್ಯಾಚಾರ ಎಸಗುವ ಸುದ್ದಿ, ಮೊಮ್ಮಗಳ ಮೇಲೆ ಮುಗಿಬೀಳುವ ವೃದ್ಧ, ಸೋದರ ಮಾವನಿಂದ ಹಸುಗೂಸಿನ ಮೇಲಿನ ದೌರ್ಜನ್ಯ, ತಾಯಿಯನ್ನೂ ಬಿಡದೇ ಹುರಿದು ಮುಕ್ಕುವ ಮಗ, ಹೀಗೆ ಅತ್ಯಾಚಾರದ ನಾನಾ ವಿಕಾರಗಳ ಅನಾವರಣ ವಾಗುತ್ತಲೇ ಇರುತ್ತವೆ. ಇವು ಕೇವಲ ಸುದ್ದಿಯಾಗುಳಿಯದೇ ಹೆಣ್ಣು ಮಕ್ಕಳನ್ನು ದಿನದಿಂದ ದಿನಕ್ಕೆ ಭಯದ ಕೂಪಕ್ಕೆ ತಳ್ಳುತ್ತವೆ. ಇಂದು ಹಿಂದೆಂದಿಗಿಂತಲೂ ದಾನವ ಪ್ರವೃತ್ತಿ ಮಾನವನಲ್ಲಿ ಹೆಚ್ಚಿದೆ. ಹೀಗಾಗಿ ಮಾಡಬಾರದ್ದನ್ನು ಮಾಡುತ್ತಿದ್ದೇವೆ, ನೋಡಬಾರದ್ದನ್ನು ನೋಡುತ್ತಿದ್ದೇವೆ, ಕೇಳಬಾರದ್ದನ್ನು ಕೇಳುತ್ತಿದ್ದೇವೆ. ಕರ್ನಾಟಕದಂತ ಸುಸಂಸ್ಕೃತ ನೆಲದಲ್ಲೂ ಹಸುಳೆಗಳಿಂದ ಹಿಡಿದು ವೃದ್ಧರವರೆಗೂ ಅತ್ಯಾಚಾರ ಹೆಚ್ಚುತ್ತಿರುವುದು. ಇಷ್ಟಾದರೂ ಈ ಬಗ್ಗೆ ಮೌನವಹಿಸುತ್ತಿರುವ ಸರಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸುವುದಾದರೇ, ಎಲ್ಲಿಗೆ ಬಂದು ನಿಂತಿದೆ ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ? ಯಾರ ರಕ್ಷಣೆಗಾಗಿ ಸರಕಾರ ಕೆಲಸ ಮಾಡುತ್ತಿದೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಕೆಲವು ಬುದ್ದಿ ಜೀವಿಗಳು ಅಂತ ಸ್ವಯಂ ಘೋಷಿತರು ಹೇಳುವ ಮಾತು ಅತ್ಯಾಚಾರಕ್ಕೆ ಹೆಣ್ಣುಮಕ್ಕಳೇ ಕಾರಣ, ಮಹಿಳೆಯರು ಧರಿಸುವ ಉಡುಪುಗಳ ಕಾರಣಕ್ಕೆ ಅತ್ಯಾಚಾರಗಳು ನಡೆಯುತ್ತವೆ, ಹೆಣ್ಣ ಮಕ್ಕಳು ಸಂಜೆ-ರಾತ್ರಿ ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಹೊರಹೋಗದೇ ಭದ್ರವಾಗಿ ಮನೆಯ ಇದ್ದರೆ ಇಂತಹವೆಲ್ಲ ನಡೆಯುವುದಿಲ್ಲ ಇವೇ ಮೊದಲಾದ ವಾದಗಳು ಕೇಳಿ ಬರುತ್ತವೆ. ಒಂಟಿಯಾಗಿ ಹೊರಗೆ ಹೋಗಿದ್ದೇ ಅತ್ಯಾಚಾರಕ್ಕೆ ಕಾರಣ ಎಂದಾದರೆ, ಈ ಹಿಂದೆ ಅತ್ಯಾಚಾರಕ್ಕೆ ತುತ್ತಾಗಿದ್ದ ಉತ್ತರ ಪ್ರದೇಶದ ಹತ್ರಾಸ್‌ನ ಯುವತಿಯನ್ನು ಹಾಡಹಗಲೇ ಸಾಮೂಹಿಕ ಅತ್ಯಾಚಾರಗೈದ ನಾಲ್ವರು ಯುವಕರು ಅವಳ ನಾಲಿಗೆ ಕತ್ತರಿಸಿ, ಬೆನ್ನುಮೂಳೆ ಮುರಿದದ್ದಲ್ಲದೇ ಹತ್ಯೆಯನ್ನೂ ಮಾಡಿದರು. ಇದಕ್ಕೆ ಉತ್ತರ ಯಾರ ಬಳಿಯಾದರೂ ಇದೆಯೇ?
ಸೃಷ್ಟಿಯ ಅತ್ಯಂತ ‘ಬುದ್ಧಿವಂತ’ ಪ್ರಾಣಿ ಎನಿಸಿಕೊಂಡು ಬೆಳೆದ ಮಾನವ ಇನ್ಯಾವ ಜೀವಜಂತುವೂ ಕಂಡುಕೇಳರಿಯದ ವಿಕೃತಿಯನ್ನು ಪೋಷಿಸಿದ್ದಾನೆ, ರೂಢಿಸಿಕೊಂಡಿದ್ದಾನೆ. ಬಲವಂತದ ಲೈಂಗಿಕತೆ ಮತ್ತು ಅದಕ್ಕಾಗಿ ನಡೆಯುವ ಹಿಂಸೆ ಇಡೀ ಜೀವಸೃಷ್ಟಿಯಲ್ಲಿ ಮನುಷ್ಯಜೀವಿಗಳಲ್ಲಿ ಮಾತ್ರ ಕಾಣಲು ಸಾಧ್ಯ. ಅತ್ಯಾಚಾರ ಆಧುನಿಕ ಕಾಲಘಟ್ಟದಲ್ಲೂ ಪಿಡುಗಾಗಿ ಕಾಡುತ್ತಿರುವುದು ದುರಂತ. ಜಾತಿ, ಜನಾಂಗ, ವರ್ಗ, ಪ್ರದೇಶ, ವಯಸ್ಸು, ಸಂಬಂಧ ಎಲ್ಲ ಬಗೆಯ ವ್ಯಾಪ್ತಿ ಮೀರಿ ಈ ಹೇಯಕೃತ್ಯ ನಡೆಯುತ್ತಿದೆ. ಶಾಲೆ, ಕಾಲೇಜು, ಯೂನಿವರ್ಸಿಟಿ ಕ್ಯಾಂಪಸ್, ಕಾರ್ಯಸ್ಥಳ, ಹೊಲ-ಗದ್ದೆ ಬಯಲು, ಪಾಳು ಬಿದ್ದ ಕಟ್ಟಡ, ಮಿಲ, ಕೈಗಾರಿಕಾ ಪ್ರದೇಶ, ರೈಲು ಬೋಗಿ, ಬಸ್, ಶೌಚಾಲಯ, ನಿರಾಶ್ರಿತರ ತಾಣ, ಕ್ಲಬ್, ಬಾರ್-ಹೀಗೆ ಎಂದರಲ್ಲಿ ನಡೆಯುವ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಮನುಷ್ಯನಲ್ಲಿ ಅಂತರ್ಗತ ಮೃಗೀಯತನಕ್ಕೆ ಸಾಕ್ಷಿಯಂತಿದೆ.
ಪ್ರತಿಬಾರಿ ಅತ್ಯಾಚಾವಾದಾಗ ಮೇಣದ ಬತ್ತೆ ಸುಡುವ ಬದಲು, ಒಂದೇ ಸಾರಿ ಅತ್ಯಾಚಾರಿಗಳನ್ನು ಸುಟ್ಟುಬಿಡಿ.
-ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ