ಕಡಂದಲೆಯ ಪುಟಾಣಿ ಶ್ರೀಮಾನ್ಯ ಭಟ್‌ಗೆ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯೋತ್ಸವ ಪ್ರಶಸ್ತಿ

Upayuktha
0

ಉಡುಪಿ ಜಿಲ್ಲೆಯ ಅಜೆಕಾರಿನ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸಮಿತಿ ಕೊಡಮಾಡುವ  ಮಕ್ಕಳ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಕಡಂದಲೆಯ ಪುಟಾಣಿ ಶ್ರೀಮಾನ್ಯ ಭಟ್ ಆಯ್ಕೆ ಆಗಿದ್ದಾಳೆ. ಸಂಗೀತ ನ್ರತ್ಯ ಭಗವದ್ಗೀತೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಅಪಾರ ಭರವಸೆ ಮೂಡಿಸಿರುವ ಪ್ರತಿಭೆ ಈಗಾಗಲೆ 60 ಸಂವತ್ಸರಗಳು, 27 ನಕ್ಷತ್ರಗಳು, 12 ರಾಶಿಗಳು, ವಾರದ 7 ಪ್ರತಿನಾಮಗಳು, ಜನರಲ್ ನಾಲೆಜ್, 12 ತುಳು ಮಾಸಗಳು ಕಥೆಗಳು, ಸುಭಾಷಿತಗಳು, ವಿಷ್ಣು ಸಹಸ್ರನಾಮ ಪಠಣ ಹೇಳುತ್ತಾಳೆ. ಇವಳು ಕಡಂದಲೆ ಕೆ.ಜಿ ನಾರಾಯಣ ಭಟ್ ಹಾಗೂ ಶ್ರೀ ಕಟೀಲು ದೇವಳದ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣರ ಮೊಮ್ಮಗಳಾಗಿದ್ದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಆಂಗ್ಲಮಾಧ್ಯಮ ಶಾಲೆಯ ಎಲ್.ಕೆ.ಜಿ ತರಗತಿಯಲ್ಲಿ ಓದುತ್ತಿದ್ದಾಳೆ. ಇವಳು ಕಡಂದಲೆ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀವಿದ್ಯಾ ದಂಪತಿಯ ಪುತ್ರಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top