ಪುತ್ತೂರು: ದಿನಾಂಕ 16.11.2022 ಮತ್ತು 17.11.2022 ರಂದು ಚೆನ್ನರಾಯಪಟ್ಟಣದಲ್ಲಿ ನಡೆದ ಮೈಸೂರು ವಿಭಾಗಿಯ ಮಟ್ಟದ 14 ವಯೋಮಿತಿಯ ಕ್ರಿಕೆಟ್ ಪಂದ್ಯಾಟದಲ್ಲಿ ಸುದಾನ ಶಾಲೆಯ ಅತಿಫ್ ಶೇಕ್ (8ನೇ) ರವರು ದಕ್ಷಿಣ ಕನ್ನಡ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ ತಂಡ ದ್ವಿತೀಯ ಸ್ಥಾನವನ್ನು ಪಡೆದಿದ್ದು, ಇವರು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಇವರನ್ನು ಸುದಾನ ಶಾಲೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ ಶ್ರೀಮತಿ ಶೋಭ ನಾಗರಾಜ್, ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಅಭಿನಂದಿಸಿದರು. ಇವರು ಸುದಾನ ಕ್ರಿಕೆಟ್ ಆಕಾಡಮಿಯಲ್ಲಿ ಕಿರಣ್ ಕುಮಾರ್ ಹಾಗೂ ನವೀನ್ ಇವರಿಂದ ತರಬೇತಿ ಪಡೆದಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ