ಮುಳಿಯ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಕನ್ನಡ ಚಿತ್ತಾರ ಎಂಬ ವಿಶಿಷ್ಟ ಸ್ಪರ್ಧೆ

Upayuktha
0

ಪುತ್ತೂರು: ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಕನ್ನಡತನ ನಮ್ಮೆಲ್ಲರ ಮನದಲ್ಲೂ ಬೇರೂರಬೇಕು. ಮುಖ್ಯವಾಗಿ ಮಕ್ಕಳಲ್ಲಿ ಕನ್ನಡದ ಮೇಲಿನ ಪ್ರೀತಿ, ಅಭಿಮಾನ, ಗೌರವವನ್ನು ಹೆಚ್ಚಿಸಿದರೆ, ಮುಂದೆ ಅವರೊಂದಿಗೆ ಕನ್ನಡವೂ ಬೆಳೆಯುತ್ತದೆ. ಕನ್ನಡದ ಕಂಪು

ಪಸರಿಸುತ್ತದೆ.

ಈ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮುಳಿಯ ಪ್ರತಿಷ್ಠಾನವು ಮಕ್ಕಳಲ್ಲಿ ಕನ್ನಡ ಪ್ರಜ್ಞೆಯ ಜಾಗೃತಿ ಮೂಡಿಸಲು ವಿಶಿಷ್ಟವಾದ "ಕನ್ನಡ ಚಿತ್ತಾರ" ಕನ್ನಡ ನಾಡು, ನುಡಿ, ಭಾವ - ಬದುಕು ಬಿಂಬಿಸುವ ಚಿತ್ರ ರಚನಾ ಸ್ಪರ್ಧೆಯನ್ನು ಆಯೋಜಿಸಿದೆ.

ಇದೇ ನವೆಂಬರ್ 13 ಭಾನುವಾರದಂದು ಪುತ್ತೂರಿನ ಕೋರ್ಟ್ ರಸ್ತೆಯ ಮುಳಿಯ ಜ್ಯುವೆಲ್ಸ್ ಆವರಣದಲ್ಲಿ ಬೆಳಗ್ಗೆ 9:30ಕ್ಕೆ ಸರಿಯಾಗಿ ಈ ಸ್ಪರ್ಧೆ ಆರಂಭವಾಗಲಿದೆ. 3ನೇ ತರಗತಿಯಿಂದ 5ನೇ ತರಗತಿ ಹಾಗೂ 6ನೇ ತರಗತಿಯಿಂದ 8ನೇ ತರಗತಿಯ ಎರಡು ವಿಭಾಗಗಳಲ್ಲಿ ಈ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

ಈ ಸ್ಪರ್ಧೆಯು ಕೆಲವು ನಿಬಂಧನೆಗಳನ್ನು ಒಳಗೊಂಡಿದೆ. ಅವೆಂದರೆ :

• ಸ್ಪರ್ಧೆಗೆ ಮೊದಲು ಮಗುವಿನ ಏವರ ನೋಂದಣಿ ಕಡ್ಡಾಯ 

• ಮಕ್ಕಳು ಕಡ್ಡಾಯವಾಗಿ ಪೋಷಕರೊಂದಿಗೆ, ಶಾಲಾ ಗುರುತಿನ ಚೀಟಿ ಸಹಿತ ಹಾಜರಾಗಬೇಕು. 

• ಕನ್ನಡತನ, ನಾಡಿನ ಇತಿಹಾಸ ಸಂಬಂಧಿಸಿದ ವಿಷಯ ಆಧರಿತ ಚಿತ್ರ ರಚಿಸಬೇಕು. 

• ಸ್ವಂತ ಆಲೋಚನೆ, ಸೃಜನಶೀಲತೆಯಿಂದ ಕೂಡಿರಬೇಕು. ಅನುಕರಣೆ ಇರಬಾರದು. 

• ಚಿತ್ರ ರಚನೆಗೆ ಕಾಗದಗಳನ್ನು ಸ್ಥಳದಲ್ಲೇ ಒದಗಿಸಲಾಗುವುದು. ಉಳಿದ ಅಗತ್ಯ ಪರಿಕರಗಳನ್ನು ಮಕ್ಕಳೇ ತರಬೇಕು. 

• ಪ್ರತಿ ಸ್ಪರ್ಧೆಯ ಅವಧಿ 1 ಗಂಟೆ. 

• ನವೆಂಬರ್ 12 ರ ಒಳಗೆ ನೋಂದಾವಣೆ ಮಾಡತಕ್ಕದ್ದು 

ಮುಳಿಯ ಜ್ಯುವೆಲ್ಸ್ ಪುತ್ತೂರು ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ, ವಿಜೇತರಾದವರಿಗೆ ಆಕರ್ಷಕ ಬಹುಮಾನವನ್ನು ವಿತರಿಸಲಾಗುವುದು. ಪ್ರಥಮ ಸ್ಥಾನ ಪಡೆಯುವ ಸ್ಪರ್ಧಿಗೆ ಚಿನ್ನದ ನಾಣ್ಯ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ಸ್ಪರ್ಧಿಗೆ ಬೆಳ್ಳಿ ನಾಣ್ಯವನ್ನು ಬಹುಮಾನವಾಗಿ ನೀಡಲಾಗುತ್ತದೆ.

ಜೊತೆಗೆ ಎರಡು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಎರಡು ಆಕರ್ಷಕ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ಸ್ಪರ್ಧೆಯ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಲು 8494938916 ಸಂಖ್ಯೆಯನ್ನು ಸಂಪರ್ಕಿಸಬಹುದು.

ಕನ್ನಡದ ಘಮವನ್ನು ಕಲೆಯ ಮೂಲಕ ಎಲ್ಲೆಡೆಯೂ ಹಬ್ಬಿಸಲು, ಕನ್ನಡ ಉತ್ಸವಕ್ಕೆ ಬಣ್ಣಗಳನ್ನು ತುಂಬಿ ರಂಗನ್ನು ಹೆಚ್ಚು ಮಾಡಲು ಈ ಸ್ಪರ್ಧೆಯಲ್ಲಿ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top