ಬ್ರಹ್ಮಾವರ: ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕೆ ಅನುಕರಣೀಯ ಮಾದರಿ ಎನಿಸಿರುವ ರುಡ್‌ಸೆಟ್ ಸಂಸ್ಥೆ, ಇಂದು ಆನೇಕ ಯುವಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಕೆನರಾ ಬ್ಯಾಂಕ್‌ಗಳ ಸಹಯೋಗದೊಂದಿಗೆ ನಡೆಯುವ ರುಡ್‌ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಪಂಚಾಯತ್, ಉಡುಪಿ ಇವರ ವತಿಯಿಂದ ಉಚಿತ ಊಟ, ವಸತಿ, ಸಮವಸ್ತ್ರ, ತರಬೇತಿ ಕಿಟ್ ನೊಂದಿಗೆ ನಿರುದ್ಯೋಗಿ ಯುವಕ-ಯುವತಿರಿಗೆ ಸಂಸ್ಥೆಯಲ್ಲಿ ಫಾಸ್ಟ್ ಪುಡ್ ತಯಾರಿಕೆ, ಕ್ಯಾಂಡಲ್ ತಯಾರಿಕೆ, ಕೃತಕ ಆಭರಣಗಳ ತಯಾರಿಕೆ, ಹೈನುಗಾರಿಕೆ ಮತ್ತು ಎರಹುಳ ಗೊಬ್ಬರ ತಯಾರಿಕೆ ತರಬೇತಿಗಳನ್ನು ಶೀಘ್ರ ಆರಂಭ ಮಾಡಲಿದೆ.
ಈ ತರಬೇತಿ ಪಡೆಯಲು ಬಯಸುವರು 18 ರಿಂದ 45 ವರ್ಷದ ಒಳಗಿನವರು ಗ್ರಾಮೀಣ ಭಾಗದ ಬಿ.ಪಿ.ಎಲ್ ಕುಟುಂಬದ ಸದಸ್ಯರಾಗಿ ಇರಬೇಕು, ಕನ್ನಡ ಓದಲು ಬರೆಯಲು ಬರುವ, ನಿಮ್ಮ ಹೆಸರು, ವಿಳಾಸ, ನಿಮ್ಮ ಮೊಬೈಲ್ (ವಾಟ್ಸಪ್‌ನಂ), ಸಹಿತ ಅರ್ಜಿ ಬರೆದು ಇದರ ಜೊತೆ ನಿಮ್ಮ ಬಿ.ಪಿ.ಯಲ್.ರೇಶನ್ ಪ್ರತಿ, ಆಧಾರ ಪ್ರತಿ ಇರಿಸಿ ತಕ್ಷಣ ಈ ಕೆಳಗಿನ ವಾಟ್ಸಪ್ ನಂಬರ್ ಗೆ ಕಳುಹಿಸಿ ಕೊಡಬಹುದು. ವಾಟ್ಸಪ್ ನಂ. 9591233748 / 9611544930 / 9448348569 / 9844086383 / 9632561145/ 8861325564 ಹಾಗೂ ಇಮೇಲ್ ವಿಳಾಸ :rudbvr@gmail.com ªÉ¨ï ¸ÉÊmï «¼Á¸À :WWW.rudsetitraining.org ಆನ್ ಲೈನ್ ಮೂಲಕ ಸಹ ಅರ್ಜಿ ಸಲ್ಲಿಸಬಹುದು ಎಂದು ¥ÀæPÀluÉ ತಿಳಿಸಿದೆ.