ಥ್ರೋಬಾಲ್‌ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Upayuktha
0

                                                           


ಪುತ್ತೂರು: ಕಲ್ಬುರ್ಗಿಯ ಸೇಡಂ ನಲ್ಲಿ ನಡೆದ ವಿದ್ಯಾಭಾರತಿ ಪ್ರಾಂತ ಹಾಗು ಕ್ಷೇತ್ರ ಮಟ್ಟದ ಥ್ರೋಬಾಲ್‌ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದೆ.

ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸ್ಫೂರ್ತಿ ಕೆ. ಆರ್, ವಾಣಿಜ್ಯ ವಿಭಾಗದ ಧನುಷ, ಕಲಾ ವಿಭಾಗದ ಕುಸುಮ ಸಿ. ಎಂ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಪುಣ್ಯಶ್ರೀ, ವಾಣಿಜ್ಯ ವಿಭಾಗದ ಶ್ರೇಯ, ವರ್ಷಿಣಿ, ಮನ್ಯ ಶೆಟ್ಟಿ, ಕಲಾ ವಿಭಾಗದ ಕೀರ್ತಿಲತಾ ಬಿ ಸಿ,ಅನನ್ಯ ಜಿ.ಕೆ ಭಾಗವಹಿಸಿದ್ದರು. 

ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಕಾಂಕ್ಷ್ ಕೆ, ಅಮೃತ್‌ ,ವಾಣಿಜ್ಯ ವಿಭಾಗದ ಶ್ರೇಯಸ್‌,ಗಣಪತಿ ಭಟ್, ಗಗನ್, ಕಲಾ ವಿಭಾಗದ ರಿತೇಶ್, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಮಿಥನ್, ವಾಣಿಜ್ಯ ವಿಭಾಗದ ವಿನೀತ್, ಮೋಕ್ಷಿತ್, ಶರತ್‌ ಭಾಗವಹಿಸಿದ್ದರು. 

ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್‌ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.



إرسال تعليق

0 تعليقات
إرسال تعليق (0)
To Top