ಧರ್ಮಸ್ಥಳ: ಅ.25ರಂದು ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ದೇವಸ್ಥಾನದ ಪ್ರಕಟನೆಯು ಮಾಹಿತಿ ನೀಡಿದೆ.
ಅಂದು ಸೂರ್ಯಗ್ರಹಣ ಸಂಭವಿಸುವ ಕಾರಣ ಮಧ್ಯಾಹ್ನ 2.30ರಿಂದ ರಾತ್ರಿ 7.30 ಗಂಟೆಯ ತನಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಅನ್ನಪ್ರಸಾದವು ಮಧ್ಯಾಹ್ನ 2.30ಕ್ಕೆ ಕೊನೆಗೊಂಡು, ರಾತ್ರಿ 7.30ರ ನಂತರ ನಡೆಯಲಿದೆ.
ಅ.25ರಂದು ಸಂಜೆ 5.11ಕ್ಕೆ ಗ್ರಹಣ ಸ್ವರ್ಶವಾಗಲಿದ್ದು, ಸಂಜೆ 6.28ಕ್ಕೆ ಗ್ರಹಣ ಮೋಕ್ಷವಾಗಲಿದೆ. ಅ. 26ರ ನಂತರ ಎಂದಿನಂತೆ ದೇವರ ದರ್ಶನ, ಸೇವೆಗಳು ನಡೆಯಲಿದೆ. ಭಕ್ತರು ಎಂದಿನಂತೆಯೇ ದೇವಾಲಯಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ಮಾಹಿತಿ ನೀಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ