ಮಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಎನ್.ಎಸ್.ಎಸ್ ವತಿಯಿಂದ ಶುಕ್ರವಾರ “ಕೋಟಿ ಕಂಠ ಗಾಯನ” ಆಯೋಜಿಸಲಾಗಿತ್ತು.
ಎನ್. ಎಸ್.ಎಸ್ ಸ್ವಯಂಸೇವಕರ ನೇತೃತ್ವದಲ್ಲಿ ಕಾಲೇಜಿನ 300 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನಾಡಗೀತೆ ಸೇರಿದಂತೆ ʼನನ್ನ ನಾಡು- ನನ್ನ ಹಾಡುʼ, ʼಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುʼ, ʼಬಾರಿಸು ಕನ್ನಡ ಡಿಂಡಿಮವʼ ಮೊದಲಾದ ಕನ್ನಡ ನಾಡು ನುಡಿಯ ಶ್ರೇಷ್ಠತೆ ಸಾರುವ ಆಯ್ದ ಗೀತೆಗಳನ್ನು ಲಯಬದ್ಧವಾಗಿ ಹಾಡಿದರು.
ಪ್ರಾಂಶುಪಾಲ (ಉಸ್ತುವಾರಿ) ಡಾ. ಹರೀಶ ಎ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಸುರೇಶ್, ಡಾ. ಗಾಯತ್ರಿ ಎನ್, ಇತಿಹಾಸ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ಮತ್ತು ಡಾ. ಕುಮಾರಸ್ವಾಮಿ ಎಂ, ಉಪನ್ಯಾಸಕರಾದ ಧೀರಜ್, ಸುನಿಲ್, ಡಾ. ರಾಜೇಶ್ವರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ