ಮುರ: ನಾಟಿ ವೈದ್ಯೆ ದಿ. ಮುತ್ತಮ್ಮ ಸ್ಮರಣಾರ್ಥ ‘ಮುಳಿಯ ಬಸ್ ತಂಗುದಾಣ’ ಲೋಕಾರ್ಪಣೆ

Upayuktha
0

ಪುತ್ತೂರು: ಮುಳಿಯ ಜ್ಯುವೆಲ್ಸ್ ವತಿಯಿಂದ ನಾಟಿ ವೈದ್ಯೆ ದಿ. ಮುತ್ತಮ್ಮ ರವರ ಸ್ಮರಣಾರ್ಥ ಕಬಕ ಗ್ರಾ. ಪಂ. ವ್ಯಾಪ್ತಿಯ ಮುರದಲ್ಲಿ ನಿರ್ಮಾಣಗೊಂಡ ಮುಳಿಯ ಬಸ್ ತಂಗುದಾಣದ ಲೋಕಾರ್ಪಣೆ ಅ.26ರಂದು ಸಂಜೆ ನಡೆಯಿತು. ಶಾಸಕ ಸಂಜೀವ ಮಠಂದೂರು ಮತ್ತು ಸುಲೋಚನಾರವರು ಉದ್ಘಾಟಿಸಿದರು.


ಕಬಕದಲ್ಲಿ ಒಂದು ತಿಂಗಳಲ್ಲಿ ಸ್ಮಾರ್ಟ್ ಬಸ್ ತಂಗುದಾಣ ಶಾಸಕ ಸಂಜೀವ ಮಠಂದೂರು ರವರು ಮಾತನಾಡಿ, ಬಸ್ ತಂಗುದಾಣ ಬಿಸಿಲು, ಮಳೆ, ಗಾಳಿಯ ರಕ್ಷಣೆಗೆ ಮಾತ್ರ ಇರದೇ ಅಲ್ಲಿ ನೆಮ್ಮದಿ ಮತ್ತು ಆಶ್ರಯತಾಣವಾಗಿ ಸೌಕರ್ಯ ಇರುವಮತಿರಬೇಕು. ಈ ನಿಟ್ಟಿನಲ್ಲಿ ಪುತ್ತೂರು ನಗರದಲ್ಲಿ ಸ್ಮಾರ್ಟ್ ಬಸ್ ತಂಗುದಾಣ ಮಾಡಿದ್ದೇವೆ. ನಗರಸಭೆಯ ಮೂಲಭೂತ ಸೌಕರ್ಯ ಕ್ಕೆ ರೂ. 25 ಲಕ್ಷ ಅನುದಾನ ನೀಡಲಾಗಿದೆ. ಅದೇ ರೀತಿ ಕಬಕ ಗ್ರಾ.ಪಂ. ಗೂ ಅನುದಾನ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಮುರದಲ್ಲಿ ನಾಟಿ ವೈದೈ ದಿ. ಮುತ್ತಮ್ಮ ರವರ ಸ್ಮರಣಾರ್ಥ ಮುಳಿಯ ಜ್ಯುವೆಲ್ಸ್ ಸಂಸ್ಥೆಯ ಮೂಲಕ ಬಸ್ ತಂಗುದಾಣ ನಿರ್ಮಾಣ ಆಗಿದೆ.


ಕಬಕದಲ್ಲಿ ನೂತನ ಬಸ್ ತಂಗುದಾಣಕ್ಕೆ ರೂ. 5 ಲಕ್ಷ ನೀಡಿದ್ದೇನೆ. ಮುಂದಿನ ಒಂದು ತಿಂಗಳಲ್ಲಿ ಬಸ್ ತಂಗುದಾಣ ನಿರ್ಮಾಣ ಆಗಲಿದೆ ಎಂದು ಭರವಸೆ ನೀಡಿದ ಅವರು ಆಟೋ ರಿಕ್ಷಾ ತಂಗುದಾಣಕ್ಕೂ ಅನುದಾನ ನೀಡಲಿದ್ದೇನೆ. ಪುತ್ತೂರಿನಲ್ಲಿ 10 ಆಟೋ ರಿಕ್ಷಾ ತಂಗುದಾಣ ನಿರ್ಮಾಣ ಅಗಲಿದೆ ಎಂದರು.


ಮುತ್ತಮ್ಮಜ್ಜಿಯ ಸಮಾಜ ಸೇವೆಗೆ ಸಮರ್ಪಣೆ ಮಾಡಿದ್ದೇವೆ:


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮುಳಿಯ ಜ್ಯುವೆಲ್ಸ್ ಆಡಳಿತ ನಿರ್ದೇಶಕರು ಆದ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಮುರಕ್ಕೂ ನಮಗೂ ಉತ್ತಮ ಸಂಬಂಧವಿದೆ. ಹಿಂದೆ ಮುತ್ತಮ್ಮಜ್ಜಿಯ ಮನೆಯ ಮುಂದಿನ ದಾರಿಯನ್ನೇ ಬಳಸಿ ನಾವು ಅಜ್ಜನ ಮನೆಗೆ ಹೋಗುತ್ತದ್ದೆವು. ಅದೇ ರೀತಿ ಇವತ್ತು ಅವರ ಸಮಾಜ ಸೇವೆಗೆ ನಮ್ಮಿಂದ ಒಂದು ಬಸ್ ತಂಗುದಾಣ ಸಮರ್ಪಣೆ ಮಾಡುವ ಅವಕಾಶ ಲಭಿಸಿರುವುದು ಸಂತೋಷ ಎಂದರು.


ಭಾವನಾತ್ಮಕ ಸಮಾಜ ಕಾರ್ಯ:


ಮುಳಿಯ ಜ್ಯುವೆಲ್ಸ್ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ರವರು ಮಾತನಾಡಿ ಪೋಳ್ಯ , ಮುರ, ಕೊಡಿಪ್ಪಾಡಿ ನಮ್ಮ ಫ್ಯಾಮಿಲಿಗೆ ಬಹಳ ಹತ್ತಿರ. ಇಂತಹ ಭಾವಾನಾತ್ಮಕ ಸಂಬಂಧದಲ್ಲಿ ಬಾವನಾತ್ಮಕ ಸಮಾಜ ಕಾರ್ಯ ಆಗಿರುವುದು ಸಂತೋಷ ಎಂದರು.


ಇನ್ನಷ್ಟು ಬಸ್ ತಂಗುದಾಣಕ್ಕೆ ಅನುದಾನ ಬೇಕು:


ಕಬಕ ಗ್ರಾ.ಪಂ. ಅಧ್ಯಕ್ಷ ವಿನಯ್ ಕುಮಾರ್ ರವರು ಮಾತನಾಡಿ, ಪಂಚಾಯತ್‌ಗೆ ಬರುವ ಅನುದಾನವನ್ನು ನಾವು ಕಾಂಕ್ರೀಟ್ ರಸ್ತೆಗೆ ಇಟ್ಟಿದ್ದೇವೆ. ಹಾಗಾಗಿ ಬಸ್ ತಂಗುದಾಣಕ್ಕೆ ಅನುದಾನ ಇಲ್ಲ. ಮುಂದೆ ನಮಗೆ ನೂತನ ಬಸ್ ತಂಗುದಾಣದ ಎದುರು ಬದಿಯೂ ಬಸ್ ತಂಗುದಾಣ ಮತ್ತು ಪೋಳ್ಯದಲ್ಲಿ ಬಸ್ ತಂಗುದಾಣ ಬೇಕಾಗಿದೆ. ಅದಕ್ಕೆ ಶಾಸಕರು ಅನುದಾನ ನೀಡಬೇಕು ಎಂದು ವಿನಂತಿಸಿದರು.ಇದೇ ಸಂದರ್ಭದಲ್ಲಿ ಮುಳಿಯ ಜ್ಯುವೆಲ್ಸ್ ನ ಸುಲೋಚನಾ ಮತ್ತು ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣ ನಾರಾಯಣ ಮುಳಿಯ ರವರನ್ನು ಗೌರವಿಸಲಾಯಿತು.


ಕಬಕ ಗ್ರಾ.ಪಂ .ಸದಸ್ಯ ಶಾಬಾ, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಮುಳಿಯ ಸಂಸ್ಥಯ ಸುಲೊಚನಾ, ಪ್ರಗತಿ ಪರ ಕೃಷಿಕ ಜಿನ್ನಪ್ಪ ಪೂಜಾರಿ. ಹಸೈನಾರ್ ಬನಾರಿ. ಡಾ. ರಾಧಕೃಷ್ಣ, ಮುಳಿಯ ಸಂಸ್ಥೆಯ ಶಾಖಾ ಪರಬಂಧಕ ನಾಮ್ ದೇವ್ ಮಲ್ಯ, ಮುಳಿಯ ಮಾರ್ಕೆಟಿಂಗ್ ಸಂಜೀವ, ಜನಾರ್ಧನ, ಖಾದರ್ ಪೋಳ್ಯ, ಶಂಕರಿ, ಹೋನ್ನಪ್ಪ ನಳಿಕೆ, ಜಿನ್ನಪ್ಪ ಗೌಡ, ಬಾಬು ಗೌಡ ಕಲ್ಲೇಗ ಸಹಿತ ಆನೇಕರು ಉಪಸ್ಥತರಿದ್ದರು. ಕಬಕ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಆಶಾ ಸ್ವಾಗತಿಸಿದರು. ಉಪಾಧ್ಯಕ್ಷ ರುಕ್ಮಯ ಗೌಡ ವಂದಿಸಿದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮ್‌ದಾಸ್ ಗೌಡ, ಸುದರ್ಶನ್ ಮುರ, ಪುರುಷೋತ್ತಮ ಮುಂಗ್ಲಿಮನೆ, ನವೀನ್ ಪಡ್ನೂರು ಅನೇಕರು ಉಪಸ್ಥತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top